ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಪಂಚಾಯಿತಿ ಕಚೇರಿ ಒಳಗಿದ್ದು ಪ್ರತಿಭಟನೆ

ಮಾಕಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯಿಂದ ಕಡೆಗಣನೆ ಆರೋಪ
Last Updated 9 ಜನವರಿ 2017, 9:58 IST
ಅಕ್ಷರ ಗಾತ್ರ
ಚನ್ನಪಟ್ಟಣ: ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವರಲಕ್ಷ್ಮಿ ಗ್ರಾ.ಪಂ. ಕಚೇರಿಯೊಳಗೆ ಕುಳಿತು ಕಚೇರಿಗೆ ಬೀಗ ಹಾಕಿಕೊಂಡು ಶನಿವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
 
ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ವಿಚಾರದಲ್ಲಿ ತಮಗೆ ಸಮರ್ಪಕ ಮಾಹಿತಿಗಳನ್ನು ನೀಡುತ್ತಿಲ್ಲ. ಅಧಿಕಾರಿಗಳು ಬೆಲೆ ಕೊಡುವುದಿಲ್ಲ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಿದ್ದಾರೆ.
 
ವಿಷಯ ತಿಳಿದು ಭಾನುವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್, ಪೊಲೀಸರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಅವರನ್ನು ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಶನಿವಾರ ಗ್ರಾಮ ಪಂಚಾಯಿತಿಯಲ್ಲಿ ಇದ್ದ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ವರಲಕ್ಷ್ಮಿ ಅವರು, ಸಂಜೆ ಸಭೆ ಮುಕ್ತಾಯದ ಬಳಿಕ ತಮಗೆ ಸಭಾ ನಡವಳಿಯ ನಕಲು ಪ್ರತಿ ನೀಡುವಂತೆ ಪಿಡಿಒ ಮಂಜುಳಾ ಅವರನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಪಿಡಿಒ ಅವರು ಇನ್ನೊಂದು ದಿನ ನೀಡುವುದಾಗಿ ಹೇಳಿ ಕಚೇರಿಯಿಂದ ಹೊರಟು ಹೋಗಿದ್ದಾರೆ. ಬೇಕೆಂತಲೇ ತಮಗೆ ಪ್ರತಿ ನೀಡಿಲ್ಲ ಎಂದು ಅಸಮಾಧಾನಗೊಂಡ ವರಲಕ್ಷ್ಮಿ ಎಲ್ಲರೂ ಕಚೇರಿಯಿಂದ ಹೊರಹೋದ ನಂತರ ಒಳಗೇ ಕುಳಿತು ಬಾಗಿಲು ಹಾಕಿಕೊಂಡು ಪ್ರತಿಭಟನೆ ಆರಂಭಿಸಿದ್ದಾರೆ.
 
ಇದರಿಂದ ವಿಚಲಿತರಾದ ಗ್ರಾ.ಪಂ. ಸಿಬ್ಬಂದಿ ಹಾಗೂ ಅಧಿಕಾರಿಗಳು ವರಲಕ್ಷ್ಮಿ ಅವರ ಮನವೊಲಿಸಲು ಯತ್ನಿಸಿದರಾದರೂ ಇದು ಸಫಲವಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್ ಹಾಗೂ ಎಂ.ಕೆ.ದೊಡ್ಡಿ ಪೊಲೀಸರು ತಡರಾತ್ರಿವರೆಗೂ ಮನವೊಲಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
 
ಭಾನುವಾರ ಬೆಳಿಗ್ಗೆ ಗ್ರಾಮದ ಮುಖಂಡರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸಮಸ್ಯೆ ಆಲಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು. ನಂತರ ವರಲಕ್ಷ್ಮಿ ಪ್ರತಿಭಟನೆ ಕೈಬಿಟ್ಟರು. ಲೋಕೇಶ್ ಅವರು ಪಿಡಿಒ ಅವರನ್ನು ವರ್ಗಾವಣೆ ಮಾಡುವ ಜೊತೆಗೆ ಅಗತ್ಯ ಮಾಹಿತಿ ಒದಗಿಸುವ ಭರವಸೆ ನೀಡಿದ ಮೇಲೆ ವರಲಕ್ಷ್ಮಿ ಬಾಗಿಲು ತೆರೆದು ಪ್ರತಿಭಟನೆ ಅಂತ್ಯಗೊಳಿಸಿದರು.ಸರ್ಕಲ್‌ ಇನ್‌ಸ್ಪೆಕ್ಟರ್‌ ನಾರಾಯಣಸ್ವಾಮಿ, ಪಿಎಸೈ ಸದಾನಂದ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು.
 
***
ಕುಸಿದು ಬಿದ್ದ ಉಪಾಧ್ಯಕ್ಷೆ
ರಾತ್ರಿಯಿಂದ ಆಹಾರ ಸೇವಿಸದೆ ನಿತ್ರಾಣರಾಗಿದ್ದ ವರಲಕ್ಷ್ಮಿ ಬೆಳಿಗ್ಗೆ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಕುಸಿದುಬಿದ್ದರು. ಕೂಡಲೇ ಅವರಿಗೆ ಆಹಾರ ನೀಡಿ, ಚಿಕಿತ್ಸೆ ಕೊಡಿಸಲಾಯಿತು.
 
ನಂತರ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಬೆಲೆ ಸಿಗುತ್ತಿಲ್ಲ. ಅಭಿವೃದ್ಧಿ ಹಾಗೂ ಕಾಮಗಾರಿಗಳ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಈ ಬಗ್ಗೆ ಗ್ರಾ.ಪಂ. ಆಡಳಿತಕ್ಕೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.
 
‘ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಅಧಿಕಾರಿಗಳು ಇಷ್ಟ ಬಂದಂತೆ ವರ್ತಿಸುತ್ತಾರೆ. ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಇಲ್ಲಿ ಪ್ರಭಾವಿಗಳಿಗಷ್ಟೇ ಮಣೆ ಎಂಬಂತಾಗಿದೆ. ಇದರಿಂದ ಬೇಸತ್ತು ಪ್ರತಿಭಟನೆ ನಡೆಸಬೇಕಾಯಿತು’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT