ಬೆಂಗಳೂರು: ಸುಮಾರು ₹1.35 ಲಕ್ಷ ಕೋಟಿ ಮೌಲ್ಯದ ಸಾಫ್ಟ್ವೇರ್ ರಫ್ತು ವಹಿವಾಟಿನಲ್ಲಿ ತೊಡಗಿರುವ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಸದ್ಯದಲ್ಲೇ ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಸಾಫ್ಟ್ವೇರ್ ಉತ್ಪಾದನೆಯಲ್ಲಿ ಹಿಂದಿಕ್ಕುವುದು ಮಾತ್ರವಲ್ಲದೆ, ತನ್ನ ಹೆಸರನ್ನು ‘ಸಿಲಿಕಾನ್ ಹಿಲ್’ ಎಂದು ಬದಲಿಸಿಕೊಳ್ಳಲಿದೆ.

ಬೆಂಗಳೂರಿನ ಸಿಲಿಕಾನ್ವ್ಯಾಲಿ ಮತ್ತು ಅಮೆರಿಕದ ಸ್ಯಾನ್ಫ್ರ್ಯಾನ್ಸಿಸ್ಕೋ ರಾಜ್ಯದ ಸಿಲಿಕಾನ್ ವ್ಯಾಲಿ ಮಧ್ಯೆ ಸಂವಾದ ಮತ್ತು ಕೊಡುಕೊಳ್ಳುವಿಕೆಗೆ ವೇದಿಕೆ ಸ್ಥಾಪಿಸಲು ಸಿದ್ಧತೆ ನಡೆದಿದೆ. ಇದರಿಂದ ರಾಜ್ಯದ ಐಟಿ ಕ್ಷೇತ್ರ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ. ಎರಡೂ ದೇಶಗಳ ಐಟಿ ಉದ್ಯಮಗಳ ನಡುವೆ ಉತ್ತಮ ವ್ಯಾವಹಾರಿಕ ಬಾಂಧವ್ಯವೂ ಸೃಷ್ಟಿ ಆಗಲಿದೆ. ಈ ಉದ್ದೇಶದಿಂದ ‘ಸಿಲಿಕಾನ್ ಹಿಲ್’ ಎಂಬುದಾಗಿ ನಾಮಕರಣ ಮಾಡುವ ಪ್ರಯತ್ನ ನಡೆದಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.

ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಅಮೆರಿಕದ ಸಿಲಿಕಾನ್ ವ್ಯಾಲಿಯ ಭಾರತೀಯ ಮೂಲದ ಉದ್ಯಮಿಗಳು ಈ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಈ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಐಟಿ ಉದ್ಯಮದ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಸ್ಟಾರ್ಟ್ಅಪ್ ಕ್ಷೇತ್ರದಲ್ಲಿರುವ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಜಾಗತಿಕವಾಗಿ ಇನ್ನಷ್ಟು ಮಹತ್ವ ಸಿಗಲಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 160ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ವಿವಿಧ ಕ್ಷೇತ್ರದಲ್ಲಿ ನೋಂದಣಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

‘ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಿದ್ದೇವೆ. ಈ ಕ್ಷೇತ್ರದಲ್ಲಿ ಸಹಯೋಗ, ಸಹಭಾಗಿತ್ವ ಮತ್ತು ಸಂಶೋಧನೆ- ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ವಾಣಿಜ್ಯಾತ್ಮಕ ಅವಕಾಶಗಳನ್ನು ಸೃಷ್ಟಿಸಲು ಅನಿವಾಸಿ ಭಾರತೀಯರು ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅವಕಾಶ ಕಲ್ಪಿಸುತ್ತೇವೆ’ ಎಂದು ಐಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ತಿಳಿಸಿದರು.

ಆನಿಮೇಷನ್, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲೂ ಬೆಂಗಳೂರು ಮುಂಚೂಣಿಗೆ ಬಂದಿದೆ. ಹಾಲಿವುಡ್ ಸಿನಿಮಾಗಳ ಆನಿಮೇಷನ್ಗಳು ಇಲ್ಲೇ ತಯಾರಾಗುತ್ತಿರುವುದು ಹೆಮ್ಮೆಯ ಸಂಗತಿ. ಲೈಫ್ ಆಫ್ ಪೈ, ಜಂಗಲ್ ಬುಕ್ ಗಳಂತಹ ಹಾಲಿವುಡ್ ಸಿನಿಮಾಗಳಿಗೆ ಬಹುಪಾಲು ಆನಿಮೇಷನ್ ಕೆಲಸ ಬೆಂಗಳೂರಿನಲ್ಲೇ ನಡೆದಿತ್ತು. ಆಡಿಯೋ ವಿಷುವಲ್ ಗೇಮಿಂಗ್ ಕಾಮಿಕ್ಸ್ ಕ್ಷೇತ್ರಗಳ ಉತ್ತೇಜನಕ್ಕಾಗಿ ₹20 ಕೋಟಿ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಮಂಜುಳಾ ತಿಳಿಸಿದರು.

ಆರ್ಟಿಫಿಷಿಯಲ್ ಇಂಟೆಲೆಜೆನ್ಸ್ಗೆ ಉತ್ತೇಜನ
‘ಆರ್ಟಿಫಿಷಿ ಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಕ್ಸಲೆನ್ಸ್ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕ್ಷೇತ್ರವು ವಿಶ್ವದಲ್ಲಿ ಉದಯವಾಗುತ್ತಿರುವ ಹೈಟೆಕ್ ಕ್ಷೇತ್ರವಾಗಿದೆ. ಅನಿವಾಸಿ ಭಾರ ತೀಯರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. ಸಾಕಷ್ಟು ಖಾಸಗಿ ಕಂಪೆನಿಗಳು ಆಸಕ್ತಿ ತೋರಿವೆ. ಈ ಕ್ಷೇತ್ರದಲ್ಲಿ ಮುಂಚೂಣಿಗೆ ತಲುಪುವ ಎಲ್ಲಾ ಅವಕಾಶಗಳಿವೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.