ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ವೈಚಾರಿಕತೆ ಅವಶ್ಯ

ಸಮ್ಮೇಳನದಲ್ಲಿ ಮಾತಾಜಿ ವಿವೇಕಮಯೀ ಅಭಿಮತ
Last Updated 10 ಜನವರಿ 2017, 7:18 IST
ಅಕ್ಷರ ಗಾತ್ರ
ನರಸಿಂಹರಾಜಪುರ: ಶಿಕ್ಷಣವು ಆಧ್ಯಾ ತ್ಮಿಕತೆ ಹಾಗೂ ವೈಚಾರಿಕತೆಯಿಂದ ಕೂಡಿರಬೇಕು ಎಂದು ಬೆಂಗಳೂರು ಭವ ತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯೀ ತಿಳಿಸಿದರು.
 
ಇಲ್ಲಿನ ಸಹರಾ ಸಮುದಾಯ ಭವನದಲ್ಲಿ ಗುರುವಾರ ಬೆಂಗಳೂರು ಸಪ್ತಮಿ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆ ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು ಚಿಂತನ ಹಾಗೂ ಪರಿಪೂರ್ಣ ಶಿಕ್ಷಣಕ್ಕಾಗಿ 86ನೇ ಶಿಕ್ಷಣ ಸಮ್ಮೇಳನದಲ್ಲಿ ‘ಶಿಕ್ಷಣ ಮತ್ತು ಅಧ್ಯಾತ್ಮ ’ ವಿಷಯ ಕುರಿತು ಮಾತನಾಡಿ, ಎಲ್ಲಾ ಆಚಾರ ವಿಚಾರಗಳು ಒಂದೇ ಆಗಿರಬೇಕು. ಇಲ್ಲವಾದಲ್ಲಿ ಅವುಗಳ ಬಗ್ಗೆ ಮಾತನಾ ಡಿದರೆ ಕೇವಲ ವೇದಿಕೆ ಭಾಷಣ ವಾಗುತ್ತದೆ ಎಂದು ಹೇಳಿದರು.
 
ಧಾರವಾಡದ ನಿವೃತ್ತ ಮುಖ್ಯ ಶಿಕ್ಷಕ ಸುರೇಶ್.ವಿ.ಕುಲಕರ್ಣಿ ‘ಸೃಜನಾತ್ಮಕ ಶಿಕ್ಷಣ’ ವಿಷಯ ಕುರಿತು ಉಪನ್ಯಾಸ ನೀಡಿ, ಪ್ರತಿಯೊಂದು ಮಗುವೂ ಸಹ ಈ ದೇಶದ ಸಂಪತ್ತು. ಮಕ್ಕಳಿಗೆ ಸೃಜನ ಶೀಲತೆ ಬೆಳೆಸಬೇಕು. ಶಿಕ್ಷಣ ಎಂಬು ವುದು ಕೇವಲ ಪ್ರಶ್ನೆ ಉತ್ತರಕ್ಕೆ ಸೀಮಿತ ವಾಗಿರದೆ ಶಿಕ್ಷಕರು ಮಕ್ಕಳಿಗೆ ವೀಕ್ಷಣಾ ಕಲಿಕೆಯನ್ನೂ ಮೈಗೂಡಿಸಬೇಕು ಎಂದರು.
 
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ಮೌನೇಶ್ವರಾಚಾರ್ ಮಾತನಾಡಿ, ಗುರುಗಳಲ್ಲಿರುವ ಚೇತನ ಪುನಃಶ್ಚೇತನ ಗೊಳ್ಳಬೇಕು. ಶಿಕ್ಷಣ ವ್ಯವಸ್ಥೆ ಬದಲಾಗಬೇಕೇ ಹೊರತು  ಮನುಷ್ಯ ತ್ವವಲ್ಲ. ಶಿಕ್ಷಣ ಕೇವಲ ಜ್ಞಾನಾರ್ಜನೆಗೆ ಸೀಮಿತವಾಗಿರದೆ ಮಕ್ಕಳಿಗೆ ಹೊರ ಪ್ರಪಂಚದ ಬಗ್ಗೆ ಅರಿವನ್ನು ಮೂಡಿಸು ವಂತಹ ಕಾರ್ಯವಾಗಬೇಕಿದೆ. ಯಾವುದೇ ವೃತ್ತಿಯಲ್ಲಿ ಆಸಕ್ತಿ, ಶ್ರದ್ಧೆ ಮುಖ್ಯವಾಗಿದೆ ಎಂದರು. 
 
ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು.
 
ಸಭೆಯಲ್ಲಿ ಕಾಸ್ಮೋಸ್ ಆತ್ಮ ಮತ್ತು ಶಿಕ್ಷಣ ತಜ್ಞರಾದ ಪದ್ಮಿನಿಮುರಳಿ ‘ಶಿಕ್ಷಣ ವೆಂಬ ಕಲ್ಪವೃಕ್ಷ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.  
 
ಸಭೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್ ಉದ್ಘಾಟಿಸಿ ಮಾತನಾಡಿದರು.
 
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಸಿ.ದಿವಾಕರ, ಡಿಸಿಎಂಸಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಚ್.ಟಿ.ರಾಜೇಂದ್ರ, ಪಟ್ಟಣ ಪಂಚಾ ಯಿತಿ ಸದಸ್ಯೆ ಸಮೀರಾನಹೀಂ, ಬೆಂಗಳೂರು ಸಪ್ತಮಿ ಟ್ರಸ್ಟ್ ಅಧ್ಯಕ್ಷ ಬಿ.ಎನ್.ಆನಂದ್, ಡಿಸಿಎಂಸಿ ಶಾಲೆಯ ಆಡಳಿತಾಧಿಕಾರಿ ಪುಟ್ಟಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಆರ್.ಸುಂದರೇಶ್, ಕಾರ್ಯದರ್ಶಿ ಸೈಯದ್ ಫರ್ವೀಜ್ ಉಪಸ್ಥಿತರಿದ್ದತು..
 
ಸಭೆಯಲ್ಲಿ ಶಿಕ್ಷಕ ಟಿ.ವಿಜಯ ಕುಮಾರ್ ಬರೆದ ‘ಬಾಂದನಿ’ ಎಂಬ ಪುಸ್ತಕವನ್ನು ಮಾತಾಜಿ ವಿವೇಕಮಯೀ ಬಿಡುಗಡೆಗೊಳಿಸಿದರು.
 
**
ಸ್ವಾಮಿ ವಿವೇಕಾನಂದರಂತೆ ಜ್ಞಾನವಂತರಾಗಲು, ಅವರ ವೈಚಾರಿಕತೆಗಳು ಬೆಳೆಯಬೇಕಾದರೆ ದೈವೀ ಶಕ್ತಿ ಇರಬೇಕು. 
-ಮಾತಾಜಿ ವಿವೇಕಮಯೀ, ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷೆ ,ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT