ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಕ್ಷಣಗಣನೆ

Last Updated 10 ಜನವರಿ 2017, 7:31 IST
ಅಕ್ಷರ ಗಾತ್ರ
ಮಂಗಳೂರು: ಇದೇ 13ರಿಂದ 15 ರ ವರೆಗೆ ಮೂರು ದಿನಗಳ ಕಾಲ ಆಳ್ವಾಸ್ ವಿರಾಸತ್ ನಡೆಯಲಿದೆ. ಎರಡು ಅವಧಿ ಯಲ್ಲಿ ನಡೆಯುವ ಈ ಕಾರ್ಯಕ್ರಮದ ಮೊದಲ ಅವಧಿಯಲ್ಲಿ ವೈವಿಧ್ಯಪೂರ್ಣ ಸಂಗೀತ ಹಾಗೂ ಎರಡನೇ ಅವಧಿಯಲ್ಲಿ ವಿವಿಧ ನೃತ್ಯ ಪ್ರಕಾರಗಳು ಮೇಳೈಸಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ತಿಳಿಸಿದರು.
 
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ದಿನ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ  ಸಭಾ ಕಾರ್ಯಕ್ರಮ ಆರಂಭವಾಗಲಿದೆ. 13ರಂದು ಸಂಜೆ 5.30ರಿಂದ 6.45ರ ವರೆಗೆ ಕೇವಲ 1.15 ಗಂಟೆಗೆ ಕಾರ್ಯ ಕ್ರಮ ಸೀಮಿತವಾಗಿರುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದು, ಅರಣ್ಯ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ದಲ್ಲಿ ವಿ.ಪಿ ಧನಂಜಯ್ ಅವರಿಗೆ ಆಳ್ವಾಸ್ ವಿರಾ ಸತ್ 2017 ಪ್ರಶಸ್ತಿಯನ್ನು ನೀಡಿ ಗೌರ ವಿಸಲಾಗುವುದು. 15ರಂದು ರಾಜ ಸ್ಥಾನದ ಚಿತ್ರ ಕಲಾವಿದ ರೇವ ಶಂ ಕರ್ ಶರ್ಮಾ ಅವರಿಗೆ ಆಳ್ವಾಸ್ ವರ್ಣ ವಿರಾ ಸತ್ ಪ್ರಶಸ್ತಿ ಹಾಗೂ ₹25 ಸಾವಿರ ನಗದು ನೀಡಿ ಗೌರವಿಸಲಾಗುವುದು ಎಂದರು. 
 
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಮಾರು 500 ವಿದ್ಯಾರ್ಥಿಗಳು ವಿವಿಧ ಪ್ರಕಾರದ ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 14ರಂದು ‘ಅಂಗ ರಾಗ’ದ ಮೂಲಕ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳ ಮಿಶ್ರರೂಪಕ ನಡೆ ಯಲಿದೆ. ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡೆಮಿಯ ಶಾಸ್ತ್ರೀಯ ಮತ್ತು ಜಾನಪದದ 55 ಕಲಾವಿದರು ಒಡಿಸ್ಸಿ ಮತ್ತು ‘ಗೋಟಿಪುವಾ’ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ.  
 
ಈಗಾಗಲೇ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ ರಾಷ್ಟ್ರಮಟ್ಟದ ಆದಿವಾಸಿ ಕಲಾವಿದರಿಂದ ಚಿತ್ರಕಲಾ ಶಿಬಿರ ಆರಂಭವಾಗಿದೆ. ಬುಡಕಟ್ಟು ಜನಾಂಗ ಬಸ್ತರ್‌ನ ಐವರು ಕಲಾವಿದರು ಲೋಹ ಶಿಲ್ಪದಲ್ಲಿ ಸ್ಥಳೀಯ ದೈವಗಳ ಕಂಚಿನ ಮುಖವಾಡ ರಚಿಸಲಿದ್ದಾರೆ. ನಾಡಿನ ಹತ್ತು ಕಲಾವಿದರು ಮರದ ಕೆತ್ತನೆಯಲ್ಲಿ ನಾಲ್ಕರಿಂದ ಆರು ಅಡಿ ಎತ್ತರದ ಕೋಟಿ– ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ ಎಂದು ಹೇಳಿದರು.
 
ವಿರಾಸತ್‌ಗೆ ದಿನವೊಂದಕ್ಕೆ ಸುಮಾ ರು 40 ಸಾವಿರ ಜನ  ಬರುವ ನಿರೀಕ್ಷೆ ಇದ್ದು, ವಾಹನಗಳಲ್ಲಿ ಬರುವವರಿಗೆ ವಾಹನ ನಿಲುಗಡೆಯ ವ್ಯವಸ್ಥೆ ಮಾಡ ಲಾಗಿದೆ. ಮೂಡುಬಿದಿರೆ ಪೇಟೆಯಿಂದ ಪುತ್ತಿಗೆಗೆ ಹಾಗೂ ಪುತ್ತಿಗೆಯಿಂದ ಪೇಟೆಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದ ಅವರು, ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನೃತ್ಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
 
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಪದ್ಮನಾಭ ಶೆಣೈ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT