ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ಹಿಂಸೆಯನ್ನು ಒಪ್ಪದು: ಸ್ವಲಾಹಿ

Last Updated 10 ಜನವರಿ 2017, 7:33 IST
ಅಕ್ಷರ ಗಾತ್ರ
ಮಂಗಳೂರು: ಇಸ್ಲಾಂ ಧರ್ಮ ಯಾವ ತ್ತೂ ಹಿಂಸೆಯನ್ನು ಒಪ್ಪದು. ಹಿಂಸೆಗೆ ಬೆಂಬಲವನ್ನೂ ಕೊಡದು. ಅಹಿಂಸೆ ಮತ್ತು ಶರಣಾಗತಿಯೇ ಇಸ್ಲಾಂ ಧರ್ಮದ ಮೂಲತತ್ವ ಎಂದು ಇಸ್ಲಾಂ ಧಾರ್ಮಿಕ ವಿದ್ವಾಂಸ ಮುಹಮ್ಮದ್ ಹಫೀಜ್‌ ಸ್ವಲಾಹಿ ಹೇಳಿದರು.
 
ಕರ್ನಾಟಕ ಸಲಫಿ ಅಸೋಸಿಯೇ ಶನ್‌ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಏಳು ದಿನಗಳ ಅವಧಿಯ ಇಸ್ಲಾಂ ಕುರಿತ ಪ್ರದ ರ್ಶನಕ್ಕೆ ಸೋಮವಾರ ಚಾಲನೆ ದೊರೆ ಯಿತು. ಈ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಂಗವಾಗಿ ಸಂಜೆ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
 
‘ಇಸ್ಲಾಂ ಎಂದರೆ ಶಾಂತಿ, ಅಹಿಂಸೆ ಮತ್ತು ಶರಣಾಗತಿ. ಮನುಷ್ಯ ತನ್ನ ಜೀವಿ ತಾವಧಿಯಲ್ಲಿ ಶಾಂತಿಯಿಂದ ಬದುಕ ಬೇಕು, ಹಿಂಸೆಯನ್ನು ಒಪ್ಪಬಾರದು ಮತ್ತು ಒಳ್ಳೆಯ ವಿಚಾರಗಳಿಗೆ ಶರಣಾಗ ಬೇಕು ಎಂಬುದನ್ನು ಇಸ್ಲಾಂ ಸಾರುತ್ತದೆ. ಕುರ್‌ಆನ್‌ ಗ್ರಂಥದ ಒಟ್ಟು ಸಾರ ಕೂಡ ಇದೇ ಆಗಿದೆ. ಈ ಜಗತ್ತಿನಲ್ಲಿ ಜನ್ಮತಳೆ ಯುವ ಎಲ್ಲರೂ ಒಳ್ಳೆಯದನ್ನು ಸಾಧಿ ಸಲು ಶ್ರಮಿಸಬೇಕು ಮತ್ತು ಸೃಷ್ಟಿಕರ್ತನಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಕುರ್‌ಆನ್‌ ಹೇಳುತ್ತದೆ’ ಎಂದರು.
 
ಐಎಸ್‌ ಇಸ್ಲಾಂ ವಿರುದ್ಧ: ಪ್ರಾಸ್ತಾವಿಕ ವಾಗಿ ಮಾತನಾಡಿದ ಸಲಫಿ ಅಸೋಸಿ ಯೇಶನ್‌ನ ಮುಖಂಡ ಎಸ್‌.ಎಂ.ಅ ಹ್ಮದ್‌, ‘ಕೊಲೆ, ರಕ್ತಪಾತ ಮತ್ತು ಹಿಂಸೆ ಯನ್ನು ಇಸ್ಲಾಂ ಬೆಂಬಲಿಸುವುದಿಲ್ಲ. ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕರಿಗೂ ಇಸ್ಲಾಂ ಧರ್ಮಕ್ಕೂ ಯಾವ ಸಂಬಂ ಧವೂ ಇಲ್ಲ. ಅದು ಇಸ್ಲಾಂ ಧರ್ಮವನ್ನು ನಾಶ ಮಾಡುವುದಕ್ಕಾಗಿ ಹುಟ್ಟಿಕೊಂ ಡಿರುವ ಭಯೋತ್ಪಾದಕ ಸಂಘಟನೆ. ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲು ವುದಕ್ಕೆ ಇಸ್ಲಾಂ ಧರ್ಮದಲ್ಲಿ ಅವಕಾ ಶವಿಲ್ಲ’ ಎಂದು ಹೇಳಿದರು.
 
ಇಸ್ಲಾಂ ಧರ್ಮವು ಸುಂದರ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ತತ್ವ ಗಳನ್ನು ಸಾರುತ್ತಾ ಬಂದಿದೆ. ಹಿಂಸೆ, ಅಶಾಂತಿ, ಮಹಿಳೆಯರ ಮೇಲಿನ ದೌರ್ಜನ್ಯ, ಮದ್ಯ ಮತ್ತು ಮಾದಕ ವಸ್ತು ಗಳ ಸೇವನೆಯಂತಹ ಸಮಸ್ಯೆಗಳ ವಿರುದ್ಧ ಇಸ್ಲಾಂ ಸಮರ ಸಾರಿಕೊಂಡು ಬಂದಿದೆ. ಇಂತಹ ವಿಚಾರಗಳನ್ನು ಜನ ರಿಗೆ ತಿಳಿಸುವುದಕ್ಕಾಗಿ ಸಲಫಿ ಅಸೋಸಿ ಯೇಶನ್‌ನಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
 
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಮಾತನಾಡಿ, ಶಾಂತಿ, ಸೌಹಾರ್ದ ಮತ್ತು ಭ್ರಾತೃತ್ವ ಕಾಯ್ದುಕೊಂಡು ದೇಶವನ್ನು ಅಭಿವೃ ದ್ಧಿಯತ್ತ ಕೊಂಡೊಯ್ಯಬೇಕಿದೆ. ಎಲ್ಲಾ ಧರ್ಮಗಳೂ ಶಾಂತಿಯ ಸಂದೇಶವನ್ನೇ ಸಾರುತ್ತವೆ. ಅದನ್ನು ಜನರು ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬದುಕ ಬೇಕಿದೆ. ಅದಕ್ಕೆ ಈ ಪ್ರದರ್ಶನ ಪೂರಕ ವಾಗಿದೆ ಎಂದು ಹೇಳಿದರು.
 
ಮಂಗಳೂರು ಉತ್ತರ ಶಾಸಕ ಬಿ.ಎ. ಮೊಯಿದ್ದೀನ್ ಬಾವಾ, ಮಹಾನಗರ ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್‌ ಎಂಜಿ ನಿಯರುಗಳ ಸಂಘದ ಅಧ್ಯಕ್ಷ ಟಿ.ವಿ ನಾಯಕ ಪೈ ಪ್ರದರ್ಶನಕ್ಕೆ ಶುಭ ಕೋರಿ ದರು. ಕರ್ನಾಟಕ ಸಲಫಿ ಅಸೋಸಿ ಯೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿ ರೆಯ ಅಲ್‌ ಫುರ್ಖಾನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಎಂ.ಮೊಯಿದ್ದೀನ್ ಕುಂಞಿ, ಇಸ್ಲಾಂ ಧಾರ್ಮಿಕ ವಿದ್ವಾಂಸರಾದ ಶೇಖ್ ಅರ್ಷದ್ ಖಾನ್, ಇಬ್ರಾಹಿಂ ಖಲೀಲ್ ತಲಪಾಡಿ, ಹಾರಿಸ್ ಕಾಯಕೋಡಿ, ಶೇಖ್ ಝಫರುಲ್ ಹಸನ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
 
**
ಬೃಹತ್ ಪ್ರದರ್ಶನ
ನೆಹರೂ ಮೈದಾನದಲ್ಲಿ 30,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಹವಾನಿಯಂತ್ರಿತ ಸಭಾಂಗಣದಲ್ಲಿ ಇಸ್ಲಾಂ ಧರ್ಮ ಮತ್ತು ಕುರ್‌ಆನ್‌ನ ಸಂದೇಶಗಳ ಕುರಿತ ಪ್ರದರ್ಶನ ನಡೆಯುತ್ತಿದೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ ಒಂದೊಂದು ವಿಚಾರಗಳ ಕುರಿತು ಕುರ್‌ಆನ್‌ ಗ್ರಂಥದಲ್ಲಿ ನೀಡಿರುವ ಸಂದೇಶಗಳ ಮುದ್ರಿತ ಫಲಕವನ್ನು ಪ್ರತ್ಯೇಕ ಕೋಣೆಗಳಲ್ಲಿ ಪ್ರದರ್ಶಿಸಲಾಗಿದೆ. ವಿವಿಧ ಮಾದರಿಗಳನ್ನೂ ಅಲ್ಲಿ ಇರಿಸಲಾಗಿದೆ.
 
**
ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿರುವ ಕೆಲವು ಚಟುವಟಿಕೆಗಳ ಕಾರಣದಿಂದ ಇಸ್ಲಾಂ ಧರ್ಮದ ಕುರಿತು ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಅದನ್ನು ಹೋಗಲಾಡಿಸುವ ಉದ್ದೇಶದಿಂದ  ಪ್ರದರ್ಶನ ಆಯೋಜಿಸಲಾಗಿದೆ.  
-ಎಸ್‌.ಎಂ.ಅಹ್ಮದ್
ಸಲಫಿ ಅಸೋಸಿಯೇಶನ್ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT