ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಪಿಒ ಅಮಾನತಿಗೆ ಆಗ್ರಹ

ಸಿಡಿಪಿಒ ಕಚೇರಿ ಆವರಣದಲ್ಲಿ ದಲಿತ ಸಂಘಟನೆ ಪ್ರತಿಭಟನೆ
Last Updated 10 ಜನವರಿ 2017, 9:09 IST
ಅಕ್ಷರ ಗಾತ್ರ
ಸುರಪುರ: ಭ್ರಷ್ಟಾಚಾರ ಮತ್ತು ಕರ್ತವ್ಯಲೋಪ ಎಸಗುತ್ತಿರುವ ಸಿಡಿಪಿಒ ಅವ ರನ್ನು ತಕ್ಷಣ ಅಮಾನತು ಮಾಡ ಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿ ಕಾರಿ ಬಣದ ಕಾರ್ಯಕರ್ತರು ಸೋಮವಾರ ನಗರದ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
 
ಗೌತಮ ಬುದ್ಧ ವೃತ್ತದಿಂದ ಸಿಡಿಪಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಚೇರಿ ಎದುರು ಜಮಾ ವಣೆಗೊಂಡ ಪ್ರತಿಭಟನಾಕಾರರು ಅಧಿ ಕಾರಿಯ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಕಚೇರಿಗೆ ಮುಳ್ಳು ಬೇಲಿ ಹಾಕಲು ಪ್ರತಿ ಭಟನಾಕಾರರು ಮುಂದಾದರು. 
 
ಸಭೆಗೆ ಹಾಜರಾಗಲು ಕಚೇರಿಗೆ ಬಂದಿದ್ದ ನೂರಾರು ಅಂಗನವಾಡಿ ನೌಕರರು ಇದಕ್ಕೆ ಅವಕಾಶ ಕೊಡಲಿಲ್ಲ. ಅಧಿ ಕಾರಿಯ ಪರವಾಗಿ ಮತ್ತು ಸಂಘ ಟನೆ ವಿರುದ್ದ ಘೋಷಣೆ ಹಾಕಿದರು. ಇದು ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಯಿತು. 
 
ನಮ್ಮ ಪ್ರತಿಭಟನೆ ನಿಮ್ಮ ವಿರುದ್ದ ಇಲ್ಲ. ಭ್ರಷ್ಟ ಅಧಿಕಾರಿಯ ಅಮಾನತಿಗೆ ಒತ್ತಾಯಿಸುತ್ತಿದ್ದೇವೆ. ಕಚೇರಿಗೆ ಮುಳ್ಳುಬೇಲಿ ಹಾಕಲು ಅವಕಾಶಕೊಡಿ ಎಂದು ಸಂಘಟನೆ ಮುಖಂಡರು ಅಂಗ ನವಾಡಿ ನೌಕರರಲ್ಲಿ ಮನವಿ ಮಾಡಿದರು. ನೌಕರರು ಸಮ್ಮತಿಸಲಿಲ್ಲ. ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
 
ಸುದ್ದಿ ತಿಳಿದ ತಹಶೀಲ್ದಾರ್ ಸುರೇಶ ಅಂಕಲಗಿ ಸ್ಥಳಕ್ಕೆ ಆಗಮಿಸಿದರು. ಸಂಘ ಟನೆಯ ಮುಖಂಡರೊಂದಿಗೆ ಚರ್ಚಿ ಸಿದರು. ಸಿಡಿಪಿಒ ಅವರು ಅಂಗ ನವಾಡಿ ನೌಕರರನ್ನು ಬಳಸಿಕೊಂಡು ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿದ್ದಾರೆ. ಅನಾ ವಶ್ಯಕವಾಗಿ ಅಂಗನವಾಡಿ ಕೇಂದ್ರ ಗಳನ್ನು ಬಂದ್ ಮಾಡಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿಡಿಪಿಒ ಬಂದು ಕ್ಷಮೆ ಕೇಳುವವರೆಗೂ ಪ್ರತಿಭಟನೆ ಹಿಂಪಡೆಯುದಿಲ್ಲ ಎಂದು ಪ್ರತಿಭಟನಾಕಾರರ ಪಟ್ಟು ಹಿಡಿದರು. 
 
ತಹಶೀಲ್ದಾರ್‌ ಅವರು ಸಿಡಿಪಿಒ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಸಿಡಿಪಿಓ ಮತ್ತು ಸಂಘಟನೆಯ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಥಿತಿ ಕೈ ಮೀರುತ್ತಿರುವುದನ್ನು ಗಮನಸಿದ ತಹಶೀಲ್ದಾರ್‌ ಸಿಡಿಪಿಒ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.
 
ಸಂಘಟನೆ ಜಿಲ್ಲಾ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಸಿಡಿಪಿಒ ನೌಕರರಿಗೆ ಸಭೆಯ ನೆಪ ಹೇಳಿ ತಪ್ಪು ಮಾಹಿತಿ ನೀಡಿದ್ದಾರೆ. ಸಂಘಟನೆ ವಿರುದ್ದ ನೌಕರರನ್ನು ಎತ್ತಿಕಟ್ಟಿದ್ದಾರೆ. ಇದು ಹೋರಾಟ ಹತ್ತಿಕ್ಕಲು ನಡೆಸಿದ ಕುತಂತ್ರವಾಗಿದೆ’ ಎಂದು ಆರೋಪಿಸಿದರು.
 
‘ಅಂಗನವಾಡಿ ಕೇಂದ್ರಗಳಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಸಾಮಗ್ರಿ ನೀಡುವುದಿಲ್ಲ. ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಭ್ರಷ್ಟಾರದಲ್ಲಿ ಭಾಗಿಯಾಗಿದ್ದಾರೆ. ಬಾಗ್ಯಲಕ್ಷ್ಮೀ ಬಾಂಡ್ ವಿತರಣೆಯಲ್ಲಿ ನೌಕರರ ಮೂಲಕ ಹಣ ಪಡೆಯುತ್ತಿದ್ದಾರೆ’ ಎಂದು ದೂರಿದರು.
 
‘ಅಂಗನವಾಡಿ ಕಟ್ಟಡಗಳಿಗೆ ಬಂದ ಅನುದಾನ ದುರ್ಬಳಕೆಯಾಗಿದೆ. ನೇಮಕಾತಿ, ಬಡ್ತಿ, ವರ್ಗಾವಣೆ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಯಾವುದೇ ಕೇಂದ್ರಕ್ಕೆ ಭೇಟಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
 
ಮುಖಂಡರಾದ ಚಂದ್ರಶೇಖರ ಜಡಿಮರಳ, ಜಿಲ್ಲಾ ಸಂಘಟನಾ ಸಂಚಾಲಕ ನಿಂಗಣ್ಣ ಮಾಳಳ್ಳಿ, ರಾಮಣ್ಣ ಶೆಳ್ಳಗಿ, ತಾಲ್ಲೂಕು ಸಂಚಾಲಕ ನಿಂಗಣ್ಣ ಗೋನಾಲ, ತಿಪ್ಪಣ್ಣ ಶೆಳ್ಳಗಿ, ಸುರೇಶ ಪರಾಸಾಪುರ, ಬಸವರಾಜ ಗೋನಾಲ, ಚಂದ್ರಕಾಂತ ಹಂಪಿನ, ಮಲ್ಲಿಕಾರ್ಜುನ ಹಾಸಿನಾಳ ಇದ್ದರು. 
 
**
ಅಂಗನವಾಡಿ ನೌಕರರನ್ನು ಕರೆಸಿಕೊಂಡು ಸಂಘಟನೆ ವಿರುದ್ಧ ಪ್ರತಿಭಟಿಸಲು ಹಚ್ಚಿದ್ದು ಸಂಘಟನೆಯ ಹೋರಾಟ ಹತ್ತಿಕ್ಕುವ ಕುತಂತ್ರ
-ಮಲ್ಲಿಕಾರ್ಜುನ ಕ್ರಾಂತಿ,
ಸಂಘಟನೆಯ ಜಿಲ್ಲಾ ಸಂಚಾಲಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT