ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ; ಕ್ರಮಕ್ಕೆ ಸೂಚನೆ

ಕೆ.ಆರ್.ನಗರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಚ್.ಟಿ. ಮಂಜುನಾಥ್
Last Updated 10 ಜನವರಿ 2017, 10:24 IST
ಅಕ್ಷರ ಗಾತ್ರ
ಕೆ.ಆರ್. ನಗರ: ಬೇಸಿಗೆಯಲ್ಲಿ ಸಾಂಕ್ರಾ ಮಿಕ ರೋಗ ಹರಡದಂತೆ ಮುನ್ನೆ ಚ್ಚರಿಕೆ ಕ್ರಮ ವಹಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಟಿ. ಮಂಜುನಾಥ್ ಅವರು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಜೆ.ಶ್ರೀನಿ ವಾಸ್ ಅವರಿಗೆ ಸೂಚಿಸಿದರು.
 
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. 
 
ತಾಲ್ಲೂಕಿನ ಹರದನಹಳ್ಳಿ ಮತ್ತು ಶಿಗೋಳು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ 20ಕ್ಕೂ ಹೆಚ್ಚು ಮಂದಿಯಲ್ಲಿ ವಿಷಮಶೀತ ಜ್ವರ ಕಾಣಿಸಿಕೊಂಡಿದೆ ಎಂದ ಅವರು. ಇನ್ನೂ ಯಾವ ಗ್ರಾಮಗಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಜೆ. ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರು. 
 
ಈ ಬಗ್ಗೆ ನನಗೆ ಮಾಹಿತಿ ಇಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂದು ಎಂದು ಡಾ.ಜೆ.ಶ್ರೀನಿವಾಸ್ ಪ್ರತಿಕ್ರಿಯಿಸಿ ದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ಎಚ್.ಟಿ.ಮಂಜುನಾಥ್ ಅವರು ವೈದ್ಯಾಧಿಕಾರಿಗಳನ್ನು ತರಾ ಟೆಗೆ ತಡಗೆದುಕೊಂಡರು. ಜ್ವರ ಎಲ್ಲೆಲ್ಲಿ ಹರಡಿದೆ ಎಂಬುದು ಪತ್ತೆ ಹಚ್ಚಿ, ಕಾಯಿಲೆ ಹರಡದಂತೆ ಸೂಕ್ತ ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
 
ಆರೋಗ್ಯ ಇಲಾಖೆ ವತಿಯಿಂದ ಪರಿಶಿಷ್ಟರಿಗಾಗಿ ಏರ್ಪಡಿಸಿದ್ದ ಆರೋಗ್ಯ ಮೇಘಾ ಕ್ಯಾಂಪ್ ಪರಿಶಿಷ್ಟರು ಹೆಚ್ಚಾಗಿ ವಾಸ ಇಲ್ಲದ ಕಡೆ ಏರ್ಪಡಿ ಸಲಾಗಿತ್ತು. ಪರಿಶಿಷ್ಟರು ಹೆಚ್ಚಾಗಿ ಇರುವ ಕಡೆ ಮೆಗಾ ಕ್ಯಾಂಪ್ ಏರ್ಪಡಿ ಸಬೇಕು ಎಂದು ಇಲಾಖೆಯ ನಿಯಮ ಇದ್ದರೂ  ದುರುದ್ದೇಶದಿಂದ ಅದನ್ನು ಮಿರ್ಲೆ ಗ್ರಾಮದಲ್ಲಿ ಏರ್ಪಡಲಾಗಿತ್ತು. ಇದರಿಂದ ಆರೋಗ್ಯ ಮೆಗಾ ಕ್ಯಾಂಪ್ ಯಾವುದೇ ಪ್ರಯೋಜನಕ್ಕೆ ಬಾರದೇ ಹೋಯಿತು ಎಂದು ಸದಸ್ಯರಾದ ಸುನೀತಾ ಮತ್ತು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. 
 
ಪಟ್ಟಣದ ಸಾರ್ವಜನಿಕ ಆಸ್ಪತೆ ಯಲ್ಲಿ ರೋಗಿಗಳಿಂದ ವೈದ್ಯರು ಹಣ ಪಡೆಯುತ್ತಾರೆ ಎಂಬ ದೂರು ಬರು ತ್ತಿದೆ. ಈ ಬಗ್ಗೆ ವೈದ್ಯಾಧಿಕಾರಿಗಳಾದ ನೀವು ಹೆಚ್ಚಿನ ಗಮನ ಹರಿಸಬೇಕು, ರೋಗಿಗಳಿಂದ ಹಣ ಪಡೆಯುವ ವೈದ್ಯರಿಗೆ ಎಚ್ಚರಿಕೆ ನೀಡಬೇಕು ಎಂದು ಸದಸ್ಯರಾದ ಗೊರಗುಂಡಿ ಶ್ರೀನಿವಾಸ್ ಪ್ರಸಾದ್, ಯೊಗೇಶ್ ಮತ್ತು ಮಲ್ಲಿಕಾ ಅವರು ದೂರಿದರು.
 
 ವೈದ್ಯರು ಹಣ ಕೇಳುತ್ತಿರುವ ಬಗ್ಗೆ ಸಂಬಂಧಿಸಿದ ರೋಗಿಗಳಿಂದ ದೂರು ಬಂದರೆ ತಕ್ಷಣ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಡಾ.ಶಿವಪ್ರಸಾದ್ ಹೇಳಿದರು.
 
ತಾಲ್ಲೂಕಿನ ಮಿರ್ಲೆ, ಹೆಬ್ಬಾಳು, ಹರದನಹಳ್ಳಿ, ಲಾಲಂದೇವನಹಳ್ಳಿ ಸೇರಿದಂತೆ ಇನ್ನಿತರೆ ಕಡೆ ಅಂಗನವಾಡಿ ಕಟ್ಟಡಗಳೇ ಇಲ್ಲ. ಇನ್ನು ಕೆಲವು ಕಡೆ ಕಟ್ಟಡಗಳು ಅಪೂರ್ಣಗೊಂಡಿವೆ. ಇನು ಕೆಲವು ಕಡೆ ಶಿಥಿಲಗೊಂಡಿವೆ. ಈ ಎಲ್ಲ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿ ಕಟ್ಟಡ ನಿರ್ಮಾಣ ಮತ್ತು ದುರಸ್ಥಿ ಕಡೆ ಗಮನ ಹರಿಸಬೇಕು ಸಿಡಿಪಿಒ ನೀಲಾಂಬಿಕಾ ಅವರಿಗೆ ಸೂಚಿಸಲಾಯಿತು. 
 
ಕರ್ಪೂರವಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಒಬ್ಬ ಫಲಾನುಭವಿಗೆ ಎರಡು ಮನೆ ಮಂಜೂರು ಮಾಡಿ ಬಿಲ್ ಕೂಡ ನೀಡಲಾಗಿದೆ ಎಂದು ಸದಸ್ಯ ಕುಮಾರ್ ಮಾಹಿತಿ ನೀಡಿ ದರು. ಫಲಾನುಭವಿಗೆ ಹಣ ಸಂದಾ ಯವಾಗದಂತೆ ಬಿಲ್ ತಡೆ ಹಿಡಿಯ ಲಾಗಿದೆ. ಮುಂದೆ ಇಂತಹ ಅವಘಡ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಅಧ್ಯಕ್ಷ  ಮಂಜುನಾಥ್ ಹೇಳಿದರು.
 
ಉಪಾಧ್ಯಕ್ಷೆ ನೀಲಮಣಿ ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಯೊಗೇಶ್, ಇಓ ಚಂದ್ರು, ಸದಸ್ಯರಾದ ಜಯರಾಮೇಗೌಡ, ಹೆಬ್ಬಾಳು ನಾಗರಾಜು, ವಿಶ್ವನಾಥ್, ಮಹ ದೇವ್, ಸಿದ್ದಮ್ಮ, ಮಲ್ಲಿಕಾ, ಶ್ರೀನಿ ವಾಸ್ ಪ್ರಸಾದ್, ಕುಮಾರ್, ಮಮತಾ ಮಹೇಶ್, ರತ್ನಮ್ಮ, ಲಲಿತಾ, ಚಂದ್ರಶೇಖರ್  ಇತರರು ಇದ್ದರು.
 
**
14 ಮಂದಿ ನಕಲಿ ವೈದ್ಯರ ಪತ್ತೆ
ಪಟ್ಟಣದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ, ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯ ಗಂಧನಹಳ್ಳಿ ಮಂಜುನಾಥ್ ಪ್ರಶ್ನಿಸಿದರು. ತಾಲ್ಲೂಕಿನಲ್ಲಿ 14ಮಂದಿ ನಕಲಿ ವೈದ್ಯರನ್ನು ಪತ್ಯೆ ಹಚ್ಚಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಜೆ. ಶ್ರೀನಿವಾಸ್ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT