ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಲ್ಲಿ ದುಡ್ಡಿಟ್ಟು ಚೆನ್ನಾಗಿರೀ ಕೈಯಲ್ಲಿ ಚಿಲ್ರೇನು ಇಟ್ಕೊಂಡಿರೀ...

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ಪುನೀತ್‌ ರಾಜ್‌ಕುಮಾರ್‌  ಅಭಿನಯದ, ಯೋಗರಾಜ್ ಭಟ್‌ ನಿರ್ದೇಶನದ ‘ಪರಮಾತ್ಮ’ ಸಿನಿಮಾದಲ್ಲಿ ಹಾಡೊಂದರಲ್ಲಿ ‘ಕರಡಿ ಕುಣಿತ’ ಮೋಡಿ ಮಾಡಿತ್ತು. ಕೇಳಲು ಹಾಸ್ಯಮಯವೆನಿಸಿದರೂ ‘ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ’ ಗೀತೆ ಬಲು ಹಿತವಾಗಿತ್ತು.

ತನ್ನದೇ ಧಾಟಿಯಲ್ಲಿ ಜೀವನದ ಕೆಲ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುತ್ತಾ ಬದುಕಿಗೊಂದು ಶಿಷ್ಟಾಚಾರದ ಅಗತ್ಯತೆಯ ಬಗ್ಗೆಯೂ ಈ ಹಾಡು ತತ್ವ ಬೋಧನೆ ಮಾಡಿತ್ತು. ಆ ಗೀತೆಯನ್ನು ಅನುಕರಿಸಿ ಸದ್ಯ ದೇಶದಲ್ಲಿ ಜಾರಿಯಲ್ಲಿರುವ ನೋಟು ರದ್ದು ಕ್ರಮವನ್ನು ಸಮರ್ಥಿಸಿಕೊಳ್ಳುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಳಧನಿಕರ ಎದೆಯಲ್ಲಿ ನಡುಕ ಹುಟ್ಟಿಸಿ, ಜನ ಸಾಮಾನ್ಯರೂ ಚಿಲ್ಲರೆಗಾಗಿ ಪಡಿಪಾಟಲು ಪಡುವಂತೆ ಮಾಡಿರುವ ನೋಟು ರದ್ದು ಕ್ರಮ ಎಷ್ಟು ಸರಿ? ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ? ನೋಟು ರದ್ದುಕ್ರಮವನ್ನು ನಾವೇಕೆ ಬೆಂಬಲಿಸಬೇಕು? ಮತ್ತಿತರೆ ವಿಷಯಗಳನ್ನು ವಿವರಿಸುತ್ತಾ ಕಾಳಧನಿಕರ ಹೊಟ್ಟೆಗೆ ಕಿಚ್ಚು ಹಚ್ಚಿದೆ ಈ ವಿಡಿಯೊ.

‘ಮನೆಯಲ್ಲಿ ದುಡ್ಡಿಟ್ಟು ದುಡ್ಡೇ ಇಲ್ವೆಂದು ಯಾವತ್ತು ಹೇಳ್ಬಾರ್ದುರೀ.. ಬ್ಲಾಕಲ್ಲಿ ಎಷ್ಟೊಂದು, ವೈಟಲ್ಲಿ ಇಷ್ಟೆಂದು ಯಾವತ್ತು ಇಡಬಾರ್ದುರೀ.. ಹೊಸ ರೂಲ್ಸಿನಿಂದಾಗಿ ಬ್ಲಾಕ್‌ ಮನೀ ವೇಸ್ಟಾಯ್ತು ಹಳೆ ನೋಟಿಗಂತೂ ವ್ಯಾಲ್ಯೂನೆ ಹೊರಟೋಯ್ತೂ ಬ್ಯಾಂಕಲ್ಲಿ ದುಡ್ಡಿಟ್ಟು ಚೆನ್ನಾಗಿರೀ.. ಕೈಯಲ್ಲಿ ಚಿಲ್ರೇನು ಇಟ್ಕೊಂಡಿರೀ..’ಎಂದು  ಈ ಹಾಡು ಆರಂಭವಾಗುತ್ತದೆ. ದೇಶಪ್ರೇಮದ ಕುರಿತು ಹೇಳುತ್ತಾ ನೋಟು ರದ್ದು ಕ್ರಮದಿಂದಾಗಿ ಉಂಟಾದ ಚಿಲ್ಲರೆ ಸಮಸ್ಯೆ ಹಾಗೂ ಮತ್ತಿತರೆ ತೊಂದರೆಗಳ ಬಗ್ಗೆಯೂ ಈ ವಿಡಿಯೊ ವಿವರಣೆ ನೀಡುತ್ತದೆ.

#Demonetisation ಹೆಸರಿನಲ್ಲಿ ಪೋಸ್ಟ್ ಆಗಿರುವ, 2 ನಿಮಿಷ 39 ಸೆಕೆಂಡುಗಳ ಈ ವಿಡಿಯೊವನ್ನು ಈಗಾಗಲೇ 28 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನಟಿ ಶ್ರುತಿ ಹರಿಹರನ್ ಸೇರಿದತೆ 834 ಮಂದಿ ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಕೀರ್ತಿ ರಚಿಸಿರುವ ಹಾಡಿಗೆ  ಗಾಯಕ ಗಣೇಶ್‌ ಕಾರಂತ ದನಿಯಾಗಿದ್ದಾರೆ.

ಲಿಂಕ್‌: http://bit.ly/2j6UREp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT