ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರೇಡ್‌ಅಪ್’ ಜೊತೆ ಅಪ್‌ಗ್ರೇಡ್ ಆಗಿ

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

‘ಗ್ರೇಡ್‌ಅಪ್’ನಲ್ಲಿ ಬೇರೆ ಬೇರೆ ಪ್ರಕಾರದ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳು ಸಿಗುತ್ತವೆ. ಇದು ಕೆಲವೇ ತಿಂಗಳುಗಳಲ್ಲಿ ಈ ಆ್ಯಪ್ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಕಂಡಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಈ ಸಂಖ್ಯೆ ಮೂವತ್ತು ಲಕ್ಷ ಮೀರುವ ನಂಬಿಕೆ ಇದೆ’ ಎಂದರು ಸ್ಟಾರ್ಟ್‌ಅಪ್ ಉದ್ಯಮಿ, ‘ಗ್ರೇಡ್‌ಅಪ್’ ತಂತ್ರಾಂಶದ ಸಹ ಸಂಸ್ಥಾಪಕ ಶೋಭಿತ್ ಭಟ್ನಾಗರ್. ಪುಸ್ತಕಕ್ಕೆ ಪರ್ಯಾಯವಾಗಿ ಈ ಆ್ಯಪ್ ರೂಪಿಸಿದ್ದಾರೆ ಅವರು.

ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧತೆ ನಡೆಸುವವರು ಅಧ್ಯಯನಕ್ಕಾಗಿ ಗ್ರಂಥಾಲಯದಲ್ಲಿ ಪುಸ್ತಕಕ್ಕೆ ಮುಖವಿಟ್ಟು ಕೂರುವ ಕಾಲ ಬದಲಾಗಿದೆ. ತಂತ್ರಜ್ಞಾನ ಅಭಿವೃದ್ಧಿ ಆದಂತೆ ಪುಸ್ತಕಗಳಿಗೆ ಪರ್ಯಾಯ ವೆನ್ನುವಂತೆ ಅಂತರ್ಜಾಲವೇ ಹೇರಳವಾಗಿ ಅಧ್ಯಯನ ಸರಕನ್ನು ಒದಗಿಸಲು ಆರಂಭಿಸಿತು. ಪಠ್ಯಕ್ಕಾಗಿ ಕಂಪ್ಯೂಟರ್‌ನಲ್ಲಿ ವೆಬ್‌ಸೈಟ್ ತಡಕಾಡುವವರಿಗೆ ಇನ್ನಷ್ಟು ಅನುಕೂಲ ಆಗುವಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ಆ್ಯಪ್‌ಗಳೂ ಬಂದವು. ಅಂಥದ್ದೇ ಒಂದು ಆ್ಯಪ್ ‘ಗ್ರೇಡ್‌ಅಪ್’.

‘ಗ್ರೇಡ್‌ಅಪ್’ನಲ್ಲಿ ಬ್ಯಾಂಕಿಂಗ್, RBI, JEE, UPSC, IAS, CTET, SSC, GATE, TET (ಟೀಚಿಂಗ್) ಪರೀಕ್ಷೆ ತರಬೇತಿ ಜೊತೆಗೆ ಈಚೆಗೆ ಎಂಜಿನಿಯರಿಂಗ್ ಮತ್ತು ಎಂಬಿಎ ಪ್ರವೇಶ ಪರೀಕ್ಷಾ ಪಠ್ಯಗಳನ್ನೂ ಸೇರಿಸಲಾಗಿದೆ. ರಸಪ್ರಶ್ನೆಯ ಪ್ರಾಯೋಗಿಕ ಪರೀಕ್ಷೆಗಳನ್ನೂ ತೆಗೆದುಕೊಂಡು  ಸಾಮಾನ್ಯಜ್ಞಾನದ ಪರೀಕ್ಷೆ ಮಾಡಿಕೊಳ್ಳಬಹುದು.

ಎರಡು ವಾರಗಳ ಹಿಂದಷ್ಟೇ UPSC ಪಠ್ಯವನ್ನು ಹಿಂದಿಯಲ್ಲೂ ಬಿಡುಗಡೆ ಮಾಡಲಾಗಿದೆ. ಇನ್ನೆರಡು ತಿಂಗಳುಗಳಲ್ಲಿ ಎಲ್ಲ ವರ್ಗದ ಪರೀಕ್ಷಾರ್ಥಿಗಳಿಗೂ ಅಧ್ಯಯನ ಸಾಮಗ್ರಿ ಸಿಗುವಂತೆ ನೋಡಿಕೊಳ್ಳುವ ಯೋಚನೆ ‘ಗ್ರೇಡ್‌ಅಪ್’ ತಂಡದ್ದು.

‘ಗ್ರೇಡ್‌ಅಪ್’ನಲ್ಲಿನ ದೊರೆಯುವ ಬಹುತೇಕ ಪರೀಕ್ಷಾ ಸಾಮಗ್ರಿಗಳು ಉಚಿತವಾಗಿವೆ. ಮುಖ್ಯವಾಗಿ ಪಠ್ಯವನ್ನು ಆನ್‌ಲೈನ್‌ನಲ್ಲೇ ಓದುವುದಕ್ಕೆ ಯಾವುದೇ ಶುಲ್ಕವಿಲ್ಲ. ಅದೇ ಪಠ್ಯಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲಿಯೂ ಓದಬೇಕೆಂದುಕೊಂಡರೆ ಅದಕ್ಕೆ ನಿಗದಿತ ಶುಲ್ಕ ತೆರಬೇಕಾಗುತ್ತದೆ.

ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ತಮ್ಮಲ್ಲಿರುವ ಪರೀಕ್ಷಾ ಸಾಮಗ್ರಿಗಳನ್ನು ಅಪ್‌ಲೋಡ್ ಕೂಡ ಮಾಡಬಹುದು. ಇದರಿಂದಾಗಿ ನಿರಂತರವಾಗಿ ನವೀಕೃತ ಪಠ್ಯ ಲಭ್ಯವಾಗುತ್ತಿರುತ್ತದೆ. ಒಂದೇ ರೀತಿಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರಸ್ಪರ ಸಂವಹನಕ್ಕೆ ವೇದಿಕೆಯಂತೆಯೂ ಈ ಆ್ಯಪ್ ಕೆಲಸ ಮಾಡುತ್ತದೆ. ಯಾವುದೋ ವಿಷಯದಲ್ಲಿ ನೀವು ತಜ್ಞರಿಂದ ಉತ್ತರ ಬಯಸಿದಲ್ಲಿ ಮಾತ್ರ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ.

‘ಗ್ರೇಡ್‌ಅಪ್’ ಸಮೂಹದೊಂದಿಗೆ ಚರ್ಚಿಸಬಹುದು, ನಿಮ್ಮಲ್ಲಿನ ಪ್ರಶ್ನೆಗಳನ್ನು ಹಂಚಿಕೊಂಡು ತಕ್ಷಣಕ್ಕೆ ಗೊಂದಲ ಪರಿಹರಿಸಿಕೊಳ್ಳಬಹುದು. ಪ್ರತಿ ತಿಂಗಳು ಹೀಗೆ ಬಂದ ಐದು ಕೋಟಿಗೂ ಅಧಿಕ ಪ್ರಶ್ನೆಗಳನ್ನು ಪ್ರತಿಕ್ರಿಯಿಸಿದ್ದಾಗಿ ‘ಗ್ರೇಡ್‌ಅಪ್’ ಹೇಳಿಕೊಳ್ಳುತ್ತದೆ. ಒಂದೇ ವರ್ಷದ ಅವಧಿಯಲ್ಲಿ ಹದಿನಾರು ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಆ್ಯಪ್‌ನ ಸಹಾಯ ಪಡೆದಿದ್ದು, 4.6 ರೇಟಿಂಗ್ ನೀಡಿದ್ದಾರೆ. ಆ್ಯಪ್‌ನ ಜನಪ್ರಿಯತೆಗೆ ಇದೊಂದು ಉದಾಹರಣೆ.

ವಿವಿಧ ಪರೀಕ್ಷಾ ದಿನಾಂಕಗಳು, ಆಯಾ ಪರೀಕ್ಷೆಯ ವಿಷಯಾನುಕ್ರಮಣಿಕೆ, ಫಲಿತಾಂಶಗಳ ನೋಟಿಫಿಕೇಶನ್‌ ಅಲರ್ಟ್‌ಗಳನ್ನೂ ಗ್ರೇಡ್‌ಅಪ್ ಕೊಡುತ್ತಿರುತ್ತದೆ. ವಿಭು ಭೂಷಣ್ ಮತ್ತು ಸಂಜೀವ್ ಕುಮಾರ್ ಅವರನ್ನು ಸೇರಿಕೊಂಡು ಶೋಭಿತ್ ಭಟ್ನಾಗರ್ ಈ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ‘ಗ್ರೇಡ್‌ಅಪ್’ ಸದ್ಯ ಆ್ಯಂಡ್ರಾಯ್ಡ್ ಆವೃತ್ತಿಯ ಮೊಬೈಲ್‌ಗಳಿಗೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT