ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ

Last Updated 11 ಜನವರಿ 2017, 6:27 IST
ಅಕ್ಷರ ಗಾತ್ರ

ಯಾದಗಿರಿ:  ಜಿಲ್ಲಾ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಹಮ್ಮಿಕೊಂಡಿರುವ ಅನಿ ರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗ ಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ವಕೀಲರ ಪ್ರತಿಭಟನೆಯಿಂದಾಗಿ ನಗರದಲ್ಲಿನ ನ್ಯಾಯಲಯ ಬಿಕೋ ಎನ್ನುತ್ತಿದೆ. ನ್ಯಾಯಲಯಕ್ಕೆ ಬಂದ ಕಕ್ಷಿದಾರರು ಕಲಾಪ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೂಡಲೇ ಜಿಲ್ಲಾಡಳಿತ ನೂತನ ನ್ಯಾಯಾಲಯದ ಸಂಕೀರ್ಣಕ್ಕೆ ನಿವೇಶನ ನೀಡುವ ಮೂಲಕ ವಕೀಲರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾ ಡಳಿತವನ್ನು ಪುನಃ ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ, ವಕೀಲರ ಸಂಘದ ಕಾರ್ಯದರ್ಶಿ ನಿಂಗಣ್ಣ ಬಂದಳ್ಳಿ, ಜಿ.ಭೀಮರಾವ್, ಉಪಾಧ್ಯಕ್ಷ ಎಂ.ಕೃಷ್ಣಾ ಗುರುಮಠಕಲ್, ರಾಜು ದೊಡ್ಡಮನಿ, ಅಮೀನ್‌ರೆಡ್ಡಿ ಪಾಟೀಲ್, ಪ್ರಸನ್ನ ದೇಶಮುಖ್, ಸುಷ್ಮಾ ಜಾಧವ್, ಸಾವಿತ್ರಿ ಪಾಟೀಲ್, ಶಿವರಾಜ್ ಕಟ್ಟಿಮನಿ, ಮಹ್ಮದ್ ಅಕ್ಬರ್, ಎಂ.ಎಂ.ಕಾಂತಿಮನಿ, ಮಾರುತಿ ಈಟೆ, ನಿರಂಜನ್, ಗೋವಿಂದ್ ಜಾಧವ್, ಅಶ್ವಿನಿ ಆವಂತಿ, ದೇವಿಂದ್ರ ದೊಡ್ಮನಿ, ಬಂಗಾರೆಪ್ಪ, ಬಿ.ಬಿ. ಕಿಲ್ಲನಕೇರಾ, ಎಸ್.ಎಸ್. ಪಾಟೀಲ್, ಸಿ.ಎಸ್.ಪಾಟೀಲ್ ಅವರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಜಿಲ್ಲಾ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ ತಿಳಿಸಿದರು.
ಧರಣಿಗೆ ಬೆಂಬಲ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಾಸಕ ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲ ರಡ್ಡಿ ನಾಯ್ಕಲ್, ಸಿದ್ದಣ್ಣ ಕಾಡನ್ಮೂರು ಮಂಗಳವಾರ ವಕೀಲರು ಮಾಡುತ್ತಿರುವ ಧರಣಿಗೆ ಬೆಂಬಲ ಸೂಚಿಸಿದರು.

ಕೂಡಲೇ ಸರ್ಕಾರ ಗಮನಹರಿಸಿ ವಕೀಲರ ಬೇಡಿಕೆಯನ್ನು ಈಡೇರಿಸಬೇಕು. ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ವಕೀಲರಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಮುರಿದುಬಿದ್ದ ಮಾತುಕತೆ
ಯಾದಗಿರಿ: ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್‌ ಚೌಧರಿ ಪ್ರತಿಭಟನಾ ನಿರ ತರೊಂದಿಗೆ ಮಾತುಕತೆಗೆ ಆಹ್ವಾನಿಸಿ ಧರಣಿ ಕೈಬಿಡುವಂತೆ ಸಲಹೆ ನೀಡಿದರು. ಸರ್ಕಾರಕ್ಕೆ ಮತ್ತು ಪ್ರಾದೇಶಿ ಆಯುಕ್ತರಿಗೆ ಕೂಡ ಲೇ ಪತ್ರ ಬರೆಯುವುದಾಗಿ ತಿಳಿ ಸಿದರೂ ಪ್ರತಿಭಟನಾಕಾರರು ಜಿಲ್ಲಾ ಧಿಕಾರಿ ಅವರ ಮಾತಿಗೆ ಮಣಿ ಯಲಿಲ್ಲ. ಬರಹ ರೂಪದಲ್ಲಿ ಭರವಸೆ ನೀಡುವುದಾಗಿ ಜಿಲ್ಲಾ ಧಿಕಾರಿ ಮನವಿ ಮಾಡಿದರೂ ಹಿರಿಯ ವಕೀಲರು,‘ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೂಡ ಇದೇ ರೀತಿ ಭರವಸೆ ನೀಡಿ ವಂಚಿ ಸಿದ್ದಾರೆ. ನಮಗೆ ನ್ಯಾಯ ಸಿಗು ವವರೆಗೆ ಧರಣಿ ಕೈಬಿಡುವುದಿಲ್ಲ’ ಎಂದು ಹಠ ಹಿಡಿದಿದ್ದರಿಂದ ಮಾತುಕತೆ ಮುರಿದುಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT