ಬೆಂಗಳೂರು: ರಾಜ್ಯ ಸಾಹಿತ್ಯ ಅಕಾಡೆಮಿ ನನ್ನ 'ಬಹುವಚನ ಭಾರತ' ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ ಎಂದು ಜಿ. ರಾಜಶೇಖರ್ ಅವರು ಹೇಳಿದ್ದಾರೆ.

ಈ ಬಗ್ಗೆ ಫೋನ್ ಮೂಲಕ 'ಪ್ರಜಾವಾಣಿ' ಜತೆ ಮಾತನಾಡಿದ ರಾಜಶೇಖರ್ ಅವರು 2015ರಲ್ಲಿ ಅಸಹನೆಯ ವಾತಾವರಣವಿತ್ತು.

ಈಗ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಮಾತ್ರವಲ್ಲದೆ ಭಿನ್ನಮತ ತಲೆ ಎತ್ತದಂತೆ ಮಾಡುತ್ತಿದ್ದಾರೆ. ಇದು ಅಸಹನೆಯ ಇನ್ನೊಂದು ಆವೃತ್ತಿ. ಈ ಪರಿಸ್ಥಿತಿ ಸರಿಹೋಗುತ್ತದೆ ಎಂಬ ಯಾವುದೇ ಆಶಾವಾದ ಇಲ್ಲ. ಹಾಗಾಗಿ ನಾನು ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.