ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖೇಲೋ ಇಂಡಿಯಾ’ ಕ್ರೀಡಾಕೂಟಕ್ಕೆ ತೆರೆ

Last Updated 11 ಜನವರಿ 2017, 11:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭಾರತ ಸರ್ಕಾರದ ‘ಖೇಲೋ ಇಂಡಿಯಾ ಯೋಜನೆ’ ಅಡಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಮಂಗಳವಾರ ತೆರೆ ಬಿದ್ದಿತು.

ಸೋಮವಾರ 14 ವರ್ಷದೊಳಗಿನ ಕ್ರೀಡಾಪಟುಗಳಿಗೆ ಮತ್ತು ಮಂಗಳವಾರ 17 ವರ್ಷದೊಳಗಿನವರಿಗೆ ಸ್ಪರ್ಧೆಗಳನ್ನು ನಡೆಸಲಾಯಿತು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ ಜತೆಗೆ ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಸ್ಪರ್ಧೆಗಳು ನಡೆದವು.

ಜಿಲ್ಲೆ ವಿವಿಧೆಡೆಯಿಂದ ಸುಮಾರು 300 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ವಿಜೇತರ ವಿವರ:
14 ವರ್ಷದೊಳಗಿನವರ ಬಾಲಕರ ವಿಭಾಗ: 100 ಮೀಟರ್‌ ಓಟ– ಎಸ್‌.ಮೋಹಿತ್ ನಾಯಕ್ ಶಿಡ್ಲಘಟ್ಟ, ಪ್ರಥಮ. ವಿ.ಚಂದು ಶಿಡ್ಲಘಟ್ಟ, ದ್ವಿತೀಯ.  ಹರಿಪ್ರಸಾದ್ ಚಿಂತಾಮಣಿ, ತೃತೀಯ. 400 ಮೀಟರ್‌ ಓಟ– ಎಸ್‌.ಮೋಹಿತ್ ನಾಯಕ್, ಶಿಡ್ಲಘಟ್ಟ, ಪ್ರಥಮ. ದಿಲೀಪ್‌ ಕುಮಾರ್ ಚಿಕ್ಕಬಳ್ಳಾಪುರ, ದ್ವಿತೀಯ. ಕೆ.ಬಿ.ರಾಜು ಚಿಕ್ಕಬಳ್ಳಾಪುರ, ತೃತೀಯ. ಉದ್ದ ಜಿಗಿತ– ವಿ. ಚಂದು ಶಿಡ್ಲಘಟ್ಟ, ಪ್ರಥಮ. ಪವನ್ ಕುಮಾರ್ ಬಾಗೇಪಲ್ಲಿ, ದ್ವಿತೀಯ. ಗುರುಕಿರಣ್ ಮಂಡಿಕಲ್ಲು, ತೃತೀಯ. ಗುಂಡು ಎಸೆತ– ಮನೋಜ್ ಚಿಕ್ಕಬಳ್ಳಾಪುರ, ಪ್ರಥಮ. ಮಹಮ್ಮದ್ ಯೂಸೂಫ್, ದ್ವಿತೀಯ. ರೋಹಿತ್ ನಾಯಕ್ ಶಿಡ್ಲಘಟ್ಟ, ತೃತೀಯ. ಕಬ್ಬಡಿ– ಪೆರೇಸಂದ್ರ ತಂಡ, ಪ್ರಥಮ. ಬಿಜಿಎಸ್ ತಂಡ ಚಿಕ್ಕಬಳ್ಳಾಪುರ, ದ್ವಿತೀಯ. ವಾಲಿಬಾಲ್– ಮಂಡಿಕಲ್ ತಂಡ ಚಿಕ್ಕಬಳ್ಳಾಪುರ, ಪ್ರಥಮ, ಸಯ್ಯದ್‌ ಸಬೀರ್ ತಂಡ  ಚಿಕ್ಕಬಳ್ಳಾಪುರ, ದ್ವಿತೀಯ.

14 ವರ್ಷದೊಳಗಿನವರ ಬಾಲಕಿಯರ ವಿಭಾಗ: 100 ಮೀಟರ್ ಓಟ– ಎಸ್.ಆರ್.ಚೈತನ್ಯ ಶಿಡ್ಲಘಟ್ಟ, ಪ್ರಥಮ. ಹಂಸಾ ಚಿಕ್ಕಬಳ್ಳಾಪುರ, ದ್ವಿತೀಯ. ಪೂಜಾ ಲಕ್ಷ್ಮಿ ಚಿಕ್ಕಬಳ್ಳಾಪುರ, ತೃತೀಯ. 400 ಮೀಟರ್ ಓಟ– ನವ್ಯಶ್ರೀ ಚಿಕ್ಕಬಳ್ಳಾಪುರ, ಪ್ರಥಮ. ಸ್ನೇಹಾ, ದ್ವಿತೀಯ. ದಿವ್ಯ, ತೃತೀಯ. ಉದ್ದ ಜಿಗಿತ– ನವ್ಯಶ್ರೀ, ಪ್ರಥಮ. ಎನ್.ಸಾನಿ, ದ್ವಿತೀಯ. ಎಸ್.ಕೆ.ಪೂಜಾ ಲಕ್ಷ್ಮಿ, ತೃತೀಯ. ಗುಂಡು ಎಸೆತ– ವಿ.ಗಂಗೋತ್ರಿ, ಪ್ರಥಮ. ಜಿ.ಕೆ.ಪ್ರಣತಿ, ದ್ವಿತೀಯ. ಕಬ್ಬಡಿ– ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಂಡ ಪರೇಸಂದ್ರ, ಪ್ರಥಮ. ಚಿಂತಾಮಣಿ ತಂಡ, ದ್ವಿತೀಯ ಸ್ಥಾನ ಪಡೆದರು.

17 ವರ್ಷದೊಳಗಿನ ಬಾಲಕರ ವಿಭಾಗ:
100 ಮೀಟರ್ ಓಟ– ಭಗತ್ ಕುಮಾರ್, ಪ್ರಥಮ. ಆರ್.ಜಸ್ವಂತ್ ಸೇನ್, ದ್ವಿತೀಯ. ವಿ.ಅಶೋಕ್, ತೃತೀಯ. 400 ಮೀಟರ್ ಓಟ– ಆರ್.ಆದಿ, ಪ್ರಥಮ. ಕೆ.ಎನ್.ಮನುಕುಮಾರ್, ದ್ವಿತೀಯ. ಬೀರಣ್ಣ ಚಿಂತಾಮಣಿ, ತೃತೀಯ. ಉದ್ದ ಜಿಗಿತ–ಎಸ್.ದಿಲೀಪ್, ಪ್ರಥಮ. ಆರ್.ಜಸ್ವಂತ್ ಸೇನ್, ದ್ವಿತೀಯ. ಪೆಲಿನಾನ್ ರೋಯಲ್, ತೃತೀಯ. ಗುಂಡು ಎಸೆತ– ಕೆ.ಎಂ.ರಾಮು, ಪ್ರಥಮ. ಕೆ.ಎಂ.ಲಕ್ಷ್ಮೀಪತಿ, ದ್ವಿತೀಯ. ಚಂದ್ರಶೇಖರ್, ತೃತೀಯ. 400 ಮೀಟರ್ ರಿಲೇ–ಭಗತ್ ಕುಮಾರ್ ತಂಡ, ಪ್ರಥಮ. ಸೋಮಶೇಖರ್ ತಂಡ, ದ್ವಿತೀಯ. ಅರುಣ್ ಕುಮಾರ್ ತಂಡ, ತೃತೀಯ. ವಾಲಿವಾಲ್– ಪಿ.ಪಿ.ಎಚ್‌.ಎಸ್ ತಂಡ, ಪ್ರಥಮ. ನ್ಯೂ ಹಾರಿಜನ್ ತಂಡ, ದ್ವಿತೀಯ. ಬಾಸ್ಕೆಟ್ ಬಾಲ್– ಅಶೋಕ್ ತಂಡ, ಪ್ರಥಮ. ಮನುಕುಮಾರ್ ತಂಡ, ದ್ವಿತೀಯ ಬಹುಮಾನ ಪಡೆದರು.

17 ವರ್ಷದೊಳಗಿನ ಬಾಲಕಿಯರ ವಿಭಾಗ: 100 ಮೀಟರ್ ಓಟ– ಪಿ.ಎಂ.ಯುಕ್ತಾರೆಡ್ಡಿ, ಪ್ರಥಮ. ಎಸ್.ದೀಪಿಕಾ, ದ್ವಿತೀಯ. ಸುನಿತಾ, ತೃತೀಯ. 400 ಮೀಟರ್ ಓಟ– ವೇದನಾ ಚಿಕ್ಕಬಳ್ಳಾಪುರ, ಪ್ರಥಮ. ಎಂ.ಎನ್.ಸುನಿತಾ ಮಂಡಿಕಲ್ಲು, ದ್ವಿತೀಯ. ಕೆ.ಕಾವ್ಯ, ತೃತೀಯ. ಲಾಂಗ್ ಜಂಪ್– ಸಿ.ಎನ್.ಉಷಾ, ಪ್ರಥಮ. ಆರ್.ಸವಿತಾ ಅಗಲಗುರ್ಕಿ, ದ್ವಿತೀಯ. ಶಾಲಿನಿ ಮಂಡಿಕಲ್ಲು, ತೃತೀಯ. ಗುಂಡು ಎಸೆತ–ಎಂ.ಶೃತಿ, ಪ್ರಥಮ. ಕೆ.ಮೌನಿಕ, ದ್ವಿತೀಯ. 400 ಮೀಟರ್ ರಿಲೇ– ಜಿ.ಎಂ.ವಂದನಾ ತಂಡ, ಪ್ರಥಮ. ಕೆ.ಎಸ್.ಸಂಧ್ಯಾ ತಂಡ, ದ್ವಿತೀಯ. ಬಿಂದು ತಂಡ, ತೃತೀಯ. ಕಬ್ಬಡಿ– ಸರ್ಕಾರಿ ಪ್ರೌಢಶಾಲೆ ಆವಲಗುರ್ಕಿ, ಪ್ರಥಮ. ಕಡದನಮರಿ, ಚಿಂತಾಮಣಿ ತಂಡ, ದ್ವಿತೀಯ. ವಾಲಿಬಾಲ್– ಎನ್.ವಿ.ಎಸ್.ಕಡದನಮರಿ ತಂಡ, ಪ್ರಥಮ. ಸರ್ಕಾರಿ ಪ್ರೌಢಶಾಲೆ ನಂದಿ, ದ್ವಿತೀಯ. ಬಾಸ್ಕೆಟ್ ಬಾಲ್– ಸರ್ಕಾರಿ ಪ್ರೌಢಶಾಲೆ ಗಿಡ್ನಹಳ್ಳಿ, ಪ್ರಥಮ. ಸ್ವಾತಿ ಮತ್ತು ತಂಡ, ದ್ವಿತೀಯ. ಷಟಲ್ ಬ್ಯಾಡ್ಮಿಂಟನ್– ಸುಷ್ಮಾ ಮತ್ತು ತಂಡ, ಪ್ರಥಮ. ಶಾಲಿನಿ ಮತ್ತು ತಂಡ, ದ್ವಿತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT