ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಸಿಟಿ ರೈಲು ನಿಲುಗಡೆಗೆ ಆಗ್ರಹ

ಬ್ಯಾಡಗಿ: ರೈಲ್ವೆ ಸುಧಾರಣೆ ಹಾಗೂ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಟನೆ, ಸಂಘಟನೆಗಳ ಬೆಂಬಲ
Last Updated 12 ಜನವರಿ 2017, 8:46 IST
ಅಕ್ಷರ ಗಾತ್ರ
ಬ್ಯಾಡಗಿ: ಬ್ಯಾಡಗಿಯಲ್ಲಿ ಧಾರವಾಡ– ಬೆಂಗಳೂರು ಇಂಟರ್‌ಸಿಟಿ ರೈಲನ್ನು  ಜ. 17ರಿಂದ ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ರೈಲ್ವೆ ಸುಧಾರಣೆ ಹಾಗೂ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬುಧವಾರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
 
12 ವರ್ಷಗಳಿಂದ ಧಾರವಾಡ– ಬೆಂಗಳೂರು ಇಂಟರ್‌ಸಿಟಿ ಸೇರಿದಂತೆ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಒತ್ತಾ ಯಿಸಿ ಹತ್ತಾರು ಬಾರಿ ನೈಋತ್ಯ ರೈಲ್ವೆ ಅಧಿ ಕಾರಿಗಳಿಗೆ ಹಾಗೂ ಸಂಸದ ಶಿವಕುಮಾರ ಉದಾಸಿಯವರಿಗೆ ಮನವಿ ಸಲ್ಲಿಸಲಾ ಗಿದೆ. ಆದರೆ, ಯಲವಿಗಿ, ಅಜ್ಜಂಪುರ ದಂತಹ ಸಣ್ಣ ನಿಲ್ದಾಣಗಳಲ್ಲಿ ಇಂಟರ್‌ ಸಿಟಿ ನಿಲುಗಡೆಗೆ ಆದೇಶ ನೀಡಲಾಗಿದೆ. ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಬ್ಯಾಡಗಿಯನ್ನು ಸಂಸದರು ನಿರ್ಲಕ್ಷಿಸಿ ದ್ದಾರೆ ಎಂದು ಆರೋಪಿಸಿದರು. 
 
ಘಟಕದ ಅಧ್ಯಕ್ಷ ಡಾ.ಪ್ರಕಾಶ ಭಸ್ಮೆ ವಿಜಯಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. 
 
ಪ್ರತಿಭಟನೆಯಲ್ಲಿ ರೋಟರಿ ಕ್ಲಬ್‌ ತಾಲ್ಲೂಕು ಅಧ್ಯಕ್ಷ ಸುರೇಶ ಗೌಡರ, ಕಾರ್ಯದರ್ಶಿ ಕಿರಣ ವೇರ್ಣೇಕರ, ಮಾಲತೇಶ ಅರಳಿಮಟ್ಟಿ, ಮಹಾಂತೇಶ ಮೇಲ್ಮುರಿ, ಪುರಸಭೆ ಸದಸ್ಯ ಬಸವರಾಜ ಹಂಜಿ, ಮಂಜುನಾಥ ಶಿರವಾಡಕರ, ನಾಗರಾಜ ಬಾರ್ಕಿ, ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ವೀರಭದ್ರಗೌಡ ಹೊಮ್ಮರಡಿ ಇದ್ದರು.
 
ಸಂಘಟನೆಗಳ  ಬೆಂಬಲ: ಬ್ಯಾಡಗಿ ರೈಲು ನಿಲ್ದಾಣದಲ್ಲಿ ಧಾರವಾಡ–ಬೆಂಗ ಳೂರು ಇಂಟರ್‌ಸಿಟಿ ಸೇರಿದಂತೆ ಎಕ್ಸ್‌ ಪ್ರೆಸ್‌ ರೈಲು ಗಾಡಿಗಳ ನಿಲುಗಡೆಗೆ ಆಗ್ರ ಹಿಸಿ ತಾಲ್ಲೂಕಾ ರೈಲ್ವೆ ಸುಧಾರಣೆ ಹಾಗೂ ಪ್ರಯಾಣಿಕರ ಕ್ಷೇಮಾಭಿವೃಧ್ದಿ ಸಂಘದ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ತಾಲ್ಲೂಕಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 
 
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಡಾ.ರಾಜಕುಮಾರ ಅಭಿಮಾನಿ ಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸವಿತಾ ಸಮಾಜ, ನಿವೃತ್ತ ನೌಕರರ ಸಂಘ, ನಿವೃತ್ತ ಸೈನಿಕರ ಸಂಘ, ಟಿಪ್ಪು ಸುಲ್ತಾನ ವೇದಿಕೆ, ಅಂಜುಮನ್ ಸಮಿತಿ, ರೋಟರಿ ಕ್ಲಬ್‌, ವಕೀಲರ ಸಂಘ, ಜೈನ ಸಂಘ, ಕೋಮು ಸೌಹಾರ್ಧ ವೇದಿಕೆ, ಎಬಿವಿಪಿ, ಎಸ್‌ಎಫ್‌ಐ, ಗಾನಯೋಗಿ ಕಲಾ ತಂಡ, ವರ್ತಕರ ಸಂಘ ಸೇರಿವಇನ್ನಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 
 
ಬುಧವಾರ ಮುಂಜಾನೆ ಇಲ್ಲಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ರೈಲು ನಿಲುಗಡೆಗೆ ಜ. 17ರವರೆಗೆ ಕಾಯ್ದು ಮುಂದಿನ ಹೋರಾಟಕ್ಕೆ ಅಣಿಯಾಗುವ ಕುರಿತು ಚರ್ಚಿಸಲಾಯಿತು. 
 
ನಿವೃತ್ತ ಪ್ರಾಚಾರ್ಯ ಎಸ್‌.ಬಿ. ತವರದ, ಹೋರಾಟ ಸಮಿತಿಯ ಡಾ.ಪ್ರಕಾಶ ಭಸ್ಮೆ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಅರಳಿಮಟ್ಟಿ, ವಕೀಲ ಬಸವರಾಜ ಬಳ್ಳಾರಿ, ಪುರಸಭೆ ಸದಸ್ಯ ನಾರಾಯ ಣಪ್ಪ ಕರ್ನೂಲ, ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ, ವೀರಭದ್ರಗೌಡ ಹೊಮ್ಮರಡಿ, ಮಹಾಂತೇಶ ಮೇಲ್ಮುರಿ, ಸುರೇಶ ಗೌಡರ, ಪರಶುರಾಮ ಮೇಲ್ಮುರಿ ಅವರು ಅಭಿಪ್ರಾಯ ಮಂಡಿಸಿದರು.
 
***
ಯಲವಿಗಿಯಲ್ಲಿ ರೈಲು ನಿಲುಗಡೆ
ಹುಬ್ಬಳ್ಳಿ:
ಧಾರವಾಡ–ಬೆಂಗಳೂರು ನಡುವೆ ಸಂಚರಿಸುವ ಸಿದ್ಧಗಂಗಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ಯಲವಿಗಿಯಲ್ಲಿ ಒಂದು ನಿಮಿಷ ನಿಲುಗಡೆಗೆ ನೈರುತ್ಯ ರೈಲ್ವೆ ಅವಕಾಶ ಕಲ್ಪಿಸಿದೆ.

ಸಿದ್ಧಗಂಗಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 12725/12726) ಜ. 17ರಿಂದ ಜುಲೈ 16ರವರೆಗೆ ಯಲವಿಗಿ ಈ ಸೌಲಭ್ಯ ಇರಲಿದೆ. ಧಾರವಾಡದಿಂದ ಬೆಂಗಳೂರಿಗೆ ಹೋಗುವಾಗ ಬೆಳಿಗ್ಗೆ 6.39ರಿಂದ 6.40ರ ಅವಧಿಯಲ್ಲಿ, ಬೆಂಗಳೂರಿನಿಂದ ಧಾರವಾಡಕ್ಕೆ ಬರುವಾಗ ರಾತ್ರಿ 8.9ರಿಂದ 8.10ರ ಅವಧಿಯಲ್ಲಿ ಯಲವಿಗಿಯಲ್ಲಿ ರೈಲು ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT