ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕು ರಕ್ಷಿಸುವುದು ಎಲ್ಲರ ಕರ್ತವ್ಯ: ಸತ್ಯವತಿ

Last Updated 12 ಜನವರಿ 2017, 9:54 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ‘ಸಂಕಷ್ಟದಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಅವರ ಬಾಲ್ಯವನ್ನು ಅರ್ಥಪೂರ್ಣವಾಗಿ ಅನುಭ ವಿಸುವಂತೆ ಮಾಡುವುದು ನಾಗರಿಕ ಸಮಾಜದ ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು. 
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋ ಜಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.  
 
ಮಕ್ಕಳು ಸಮಾಜದ ಆಸ್ತಿ. ಆದರೆ, ಅವರು ಹಲವು ಕಾರಣಗಳಿಂದ ತೊಂದರೆ, ಹಿಂಸೆ, ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು. 
 
ಸರ್ಕಾರದ ಯೋಜನೆಗಳು ಹಾಗೂ ಕಾರ್ಯಗಳು ಮಕ್ಕಳ ಅಭಿವೃದ್ಧಿ ಪರ ವಾಗಿವೆ. ಹೀಗಿದ್ದರೂ ಅವರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ವಿವಿಧ ಇಲಾಖೆಗಳಲ್ಲಿನ ಕಾರ್ಯಗಳು ಪೂರ್ಣವಾಗಿ ಸಫಲವಾ ಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಮಕ್ಕಳ ಹಕ್ಕುಗಳ ಉಲ್ಲಂಘನೆ ಯಾದಾಗ ಅದರ ಸ್ವರೂಪ ಬಹಳ ಅಮಾನುಷವಾಗಿರುತ್ತದೆ. ಮಕ್ಕಳ ಪರ ಕಾನೂನುಗಳು ಇವೆ. ಹೀಗಿದ್ದರೂ ಈ ಬಗ್ಗೆ ಸಾರ್ವಜನಿಕರಿಗೆ, ಪೋಷಕರಿಗೆ, ಸರ್ಕಾರಿ ಅಧಿಕಾರಿಗಳಿಗೆ, ಸ್ವಯಂ ಸೇವಾ ಸಂಸ್ಥೆ ಕಾರ್ಯಕರ್ತರು ಸೇರಿದಂತೆ ಮುಂತಾದವರಿಗೆ ಈ ಕಾನೂನುಗಳ ಬಗ್ಗೆ ತಿಳಿವಳಿಕೆಗಳಿಲ್ಲ. ಈ ಬಗ್ಗೆ ಅರಿವು ಮೂಡಿಸಲು ಮಕ್ಕಳ ಹಕ್ಕು ಕಾಯ್ದೆ ಬಗ್ಗೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊ ಳ್ಳಬೇಕು ಎಂದು ತಿಳಿಸಿದರು. 
 
ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿ ಸುತ್ತಿರುವ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯು ತ್ತಿರುವ ಬಗ್ಗೆ ದೂರುಗಳು ಕೇಳಿ ಬರು ತ್ತಿವೆ. ಅಲ್ಲದೇ, ಕಾರ್ಮಿಕರಿಗೆ ಸಮರ್ಪಕ ವಾಗಿ ಕೂಲಿ ನೀಡುತ್ತಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು. 
 
ಕಾರ್ಮಿಕ ಇಲಾಖೆಯ ಅಧಿಕಾರಿ ಗಳು ಇತರೆ ಇಲಾಖೆಯವರು ಕರೆದಾಗ ಮಾತ್ರ ಕಾರ್ಯ ಚಟುವಟಿಕೆ ಮಾಡದೆ ಸ್ವಯಂಪ್ರೇರಿತವಾಗಿ ಕರ್ತವ್ಯ ನಿರ್ವಹಿ ಸಬೇಕು ಎಂದು ಸೂಚಿಸಿದ ಅವರು, ಕಳೆದ ಏಪ್ರಿಲ್ ತಿಂಗಳಿನಿಂದ ಎಷ್ಟು ಕಾಫಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೀರಾ? ಆ ಬಗ್ಗೆ ವರದಿ ನೀಡಿ ಎಂದು ತಾಕೀತು ಮಾಡಿದರು.
 
ಮಕ್ಕಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದಾಗ ನಿರ್ಲಕ್ಷ್ಯ ವಹಿಸಬಾರದು. ತಕ್ಷಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ನೀಡಲು ಸ್ನೇಹ ಕ್ಲಿನಿಕ್ ಶಾಲೆಗಳಲ್ಲಿಯೇ ವಾರದಲ್ಲೊಮ್ಮೆ ಕೈಗೊಳ್ಳಬೇಕೆಂದು ಎಂದರು.  
 
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಸಿ.ನಟರಾಜ್ ಮಾತನಾಡಿ, ಬಾಲ ಮಂದಿರದಲ್ಲಿರುವ ಮಕ್ಕಳು ಮುಕ್ತ ವಾತಾವರಣದಲ್ಲಿ ಬೆಳೆಯಬೇಕೆಂಬ ಆಶಯದೊಂದಿಗೆ ಶಾಲೆಗೆ ದಾಖಲಿಸ ಲಾಗುತ್ತದೆ. ಆದರೆ, ಮಕ್ಕಳು ಶಾಲೆಯಿಂದ ಹಿಂದಿರುಗದೇ ಕಾಣೆಯಾ ಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಸಹಕಾರ ಅಗತ್ಯ. ಕಾಫಿ ತೋಟದ ಕಾರ್ಮಿಕರು ವಾಸಿಸು ವಂತಹ ಕೂಲಿ ಲೈನ್‌ಗಳಲ್ಲಿ ಪೋಷಕರು ಕೆಲಸಕ್ಕೆ ಹೋದಾಗ ಮಕ್ಕಳು ಶಾಲೆಗೆ ಹೋಗದೆ ಆಟವಾಡಿಕೊಂಡಿರುತ್ತಾರೆ. ಇವರುಗಳಿಗೆ ಟೆಂಡ್ ಶಾಲೆ ತೆರೆದು ಶಿಕ್ಷಣ ನೀಡಬೇಕು. ಮಕ್ಕಳ ಮೇಲಾಗುವ ದೌರ್ಜನ್ಯ ಮತ್ತು ಶೋಷಣೆ ತಪ್ಪಿಸಲು ‘ಆಪರೇಷನ್ಸ್‌ ಸ್ಮೈಲ್’ ಕಾರ್ಯಕ್ರಮ ಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.  
 
ಸಭೆಯಲ್ಲಿ ಉಪ ಕಾರ್ಯದರ್ಶಿ ರಾಜಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿ ರ್ದೇಶಕ ಕೆ.ಸಿ.ಬಸವರಾಜಯ್ಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಂಗನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯೆ ಯಶೋಧಾ ಲಕ್ಷ್ಮಣ್ ಗೌಡ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT