ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ ರಥಯಾತ್ರೆಗೆ ಅದ್ಧೂರಿ ಸ್ವಾಗತ

Last Updated 12 ಜನವರಿ 2017, 10:54 IST
ಅಕ್ಷರ ಗಾತ್ರ

ಹುಣಸಗಿ: ಸ್ವಾಮಿ ವಿವೇಕಾನಂದರು ಅದಮ್ಯ ದೇಶಭಕ್ತರಾಗಿದ್ದು, ಯುವ ಕರಿಗೆ ಅವರ ಆದರ್ಶಗಳು ಸ್ಫೂರ್ತಿ ಯಾಗಿವೆ ಎಂದು ಕೊಡೇಕಲ್ಲ ದುರ ದುಂಡೇಶ್ವರ ವಿರಕ್ತಮಠದ ನೀಲ ಕಂಠಸ್ವಾಮಿ ಹೇಳಿದರು.

ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮಕ್ಕೆ ಬಂದ ಸಮರ್ಥ ಭಾರತ ಸೇವಾ ಸಮಿತಿಯ ವಿವೇಕ ರಥಯಾತ್ರೆ ಕಾರ್ಯ ಕ್ರಮದಲ್ಲಿ ರಥಕ್ಕೆ ಸ್ವಾಗತಿಸಿ ಮಾತ ನಾಡಿದರು.
ಸ್ವಾಮಿ ವಿವೇಕಾನಂದ ಅವರ 154 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ರಥ ಯಾತ್ರೆಯ ಮೂಲಕ ಎಲ್ಲ ಯುವಕರಲ್ಲಿ ದೇಶ ಭಕ್ತಿಯ ಬಗ್ಗೆ ಜಾಗೃತಿ ಮೂಡಿ ಸುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ತಾ.ಪಂ ಸದಸ್ಯ ಮೋಹನ ಪಾಟೀಲ್ ಮಾತ ನಾಡಿ, ಗುರು ರಾಮಕೃಷ್ಣ ಪರ ಮಹಂಸರ ಮಾರ್ಗದರ್ಶನದಲ್ಲಿ ವಿವೇಕಾ ನಂದರು ವೀರ ಸನ್ಯಾಸಿಯಾಗಿ ಹಿಂದೂ ಧರ್ಮದ ವಿಶಾಲತೆಯನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರ ಜೀವನ ಆದರ್ಶಪ್ರಾಯವಾಗಿವೆ ಎಂದರು.

ಈ ವೇಳೆ ಮಹಲಿನಮಠದ ವೃಷ ಬೇಂದ್ರಸ್ವಾಮಿ, ಸಂತೋಷ ತಮದೊಡ್ಡಿ,  ಪವನ ಬಬಲೇಶ್ವರ, ಬಸವರಾಜ ಬದ್ರಗೋಳ,  ಸಂತೋಷ ಮಂಗಳೂರು ಶಿವಣ್ಣ ಕರಡಕಲ್ಲ, ಓಂಕಾರ.ಎನ್.ಕೆ, ಕೆ.ಬಿ.ಗಡ್ಡದ್,  ನಾಗರಾಜ ದ್ಯಾಮನಾಳ, ವಿಶಾಲ್ ಅಂಗಡಿ, ಮಲ್ಲಿಕಾರ್ಜುನ, ಬಸವರಾಜ ಪೂಜಾರಿ, ಶಂಕರ್ ಸೇರಿ ದಂತೆ ಯುವಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ರಾಜನಕೋಳೂರ ಗ್ರಾಮದಲ್ಲಿ ರಥವನ್ನು ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT