ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

249 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಎಪಿಎಂಸಿ ಚುನಾವಣೆ: ಜಿಲ್ಲೆಯ ಏಳು ತಾಲ್ಲೂಕುಗಳ 83 ಸ್ಥಾನಗಳಿಗೆ ಮತದಾನ
Last Updated 12 ಜನವರಿ 2017, 11:33 IST
ಅಕ್ಷರ ಗಾತ್ರ
ಶಿವಮೊಗ್ಗ: ಜಿಲ್ಲೆಯ ಏಳು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ 83 ಸ್ಥಾನಗಳಿಗೆ ಜ.12ರಂದು ಚುನಾವಣೆ ನಡೆಯಲಿದ್ದು, 249 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆ ಸೇರಲಿದೆ.
 
ಜಿಲ್ಲೆಯಲ್ಲಿ ಒಟ್ಟು 98 ಸ್ಥಾನಗಳಿವೆ. ಅವುಗಳಲ್ಲಿ ನಾಮಪತ್ರ ಹಿಂತೆಯುವ ವೇಳೆಯಲ್ಲೇ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಹೊಸನಗರ ಹಾಗೂ ಸೊರಬ ತಾಲ್ಲೂಕಿನ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಉಳಿದ 83 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 406 ಮತಗಟ್ಟೆಗಳಲ್ಲಿ 2,80,115 ಮತದಾರರು ಮತ ಚಲಾಯಿಸಲಿದ್ದಾರೆ.
 
ಶಿವಮೊಗ್ಗ ತಾಲ್ಲೂಕಿನಲ್ಲಿ 48,908 ಮತದಾರರು, ಭದ್ರಾವತಿ 42,676, ತೀರ್ಥಹಳ್ಳಿ 32,426, ಸಾಗರ 35566, ಹೊಸನಗರ 21,700, ಸೊರಬ 47,007, ಶಿಕಾರಿಪುರ 50,953 ಮತದಾರರು ಮತ ಚಲಾಯಿಸಲಿದ್ದಾರೆ.
 
ಶಿವಮೊಗ್ಗದಲ್ಲಿ 58 ಮತಗಟ್ಟೆ, ಭದ್ರಾವತಿ 68 ಮತಗಟ್ಟೆ, ತೀರ್ಥಹಳ್ಳಿ 52, ಸಾಗರ 62, ಹೊಸನಗರ 32, ಸೊರಬ 78 ಹಾಗೂ ಶಿಕಾರಿಪುರದಲ್ಲಿ 56 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
 
ಚುನಾವಣಾ ಕರ್ತವ್ಯಕ್ಕೆ 1,748 ಸಿಬ್ಬಂದಿ: 437 ಪ್ರಧಾನ ಮತಗಟ್ಟೆ ಅಧಿಕಾರಿ, 874 ಮತಗಟ್ಟೆ ಅಧಿಕಾರಿ ಹಾಗೂ 437 ಸಹಾಯಕ ಮತಗಟ್ಟೆ ಅಧಿಕಾರಿ ಸೇರಿದಂತೆ 1,748 ಅಧಿಕಾರಿಗಳು, ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿದೆ. 
 
115 ವಾಹನಗಳು: ಮತಗಟ್ಟೆ ಹಾಗೂ ಮತಗಟ್ಟೆ ಸಿಬ್ಬಂದಿ ಸಾಗಿಸಲು 56 ಬಸ್‌, ಅಧಿಕಾರಿಗಳಳಿಗಾಗಿ 59 ಜೀಪ್‌ ವ್ಯವಸ್ಥೆ ಮಾಡಲಾಗಿದೆ. 
 
ಮತ ಕ್ಷೇತ್ರಗಳು: ಶಿವಮೊಗ್ಗ: ಕಸಬಾ, ನಿದಿಗೆ, ಗಾಜನೂರು, ಕಡೇಕಲ್‌, ಹಸೂಡಿ, ಅಬ್ಬಲಗೆರೆ, ಮೇಲಿನ ಹನಸವಾಡಿ, ಹೊಳಲೂರು, ಹಾರನಹಳ್ಳಿ, ಆಯನೂರು, ಕುಂಸಿ.
 
ಭದ್ರಾವತಿ: ಆನವೇರಿ, ಹೊಳೆ ಹೊನ್ನೂರು, ಹನುಮಂತಾಪುರ, ಅರಬಿಳಚಿ, ಕಾಗೆಕೊಡಮಗ್ಗಿ, ಕೂಡ್ಲಿಗೆರೆ, ಬಾರಂದೂರು, ಸಿಂಗನಮನೆ, ಹಿರಿಯೂರು, ಸಿರಿಯೂರು, ಭದ್ರಾವತಿ.
 
ತೀರ್ಥಹಳ್ಳಿ: ಮಾಳೂರು, ಲಿಂಗಾಪುರ, ಆರಗ, ಕೋಣಂದೂರು, ಹಾದಿಗಲ್ಲು, ಮುಳಬಾಗಿಲು, ಅರಳಾಪುರ, ದೇವಂಗಿ, ಸಾಲ್ಗುಡಿ, ಮೇಗರವಳ್ಳಿ, ಬಿದರಗೋಡು.
 
ಸಾಗರ: ತುಮರಿ, ತಾಳಗುಪ್ಪ, ಶಿರವಂತೆ, ಮಾಸೂರು, ತ್ಯಾಗರ್ತಿ,  ಬರೂರು, ಭೀಮನೇರಿ, ಗೌತನಪುರ, ಆನಂದಪುರ, ಹೆಗ್ಗೋಡು, ಆವಿನಹಳ್ಳಿ.
 
ಹೊಸನಗರ: ಅರಸಾಳು, ಹೆದ್ದಾರಿಪುರ, ಹುಂಚ, ಜೇನಿ, ಖೈರುಗುಂದ, ಕಳೂರು, ಕೋಡೂರು, ಮಾರುತಿಪುರ, ಮೂಡುಗೊಪ್ಪ, ನಿಟ್ಟೂರು, ರಿಪ್ಪನ್‌ಪೇಟೆ. 
 
ಸೊರಬ: ಚಂದ್ರಗುತ್ತಿ, ಹೊಸಬಾಳೆ, ಹಳೇಸೊರಬ, ಉಳವಿ, ಮಾವಲಿ, ಕುಪ್ಪಗುಡ್ಡೆ, ದ್ಯಾವನಹಳ್ಳಿ, ಜಡೆ, ಆನವಟ್ಟಿ, ಎಣ್ಣೆಕೊಪ್ಪ, ಮೂಡಿ. 
 
ಶಿಕಾರಿಪುರ: ತಾಳಗುಂದ, ಕೊರಟಿಗೆರೆ, ಸುಣ್ಣದಕೊಪ್ಪ, ಶಿರಾಳಕೊಪ್ಪ, ಕಪ್ಪನಹಳ್ಳಿ, ಸಾಲೂರು, ಅಂಜನಾಪುರ, ಹೊಸೂರು, ಮತ್ತಿಕೋಟೆ, ಕಾಗಿನಲ್ಲಿ, ಹಳಿಯೂರು.
 
ವೆಚ್ಚಕ್ಕೆ ಮಿತಿ ಇಲ್ಲ: ಅಭ್ಯರ್ಥಿಗಳು ಚುನಾವಣೆಗಾಗಿ ಮಾಡುವ ವೆಚ್ಚದ ಮೇಲೆ ಯಾವುದೇ ಮಿತಿ ಇಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ₹ 2 ಲಕ್ಷ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ₹ 50 ಸಾವಿರ ಮಿತಿ ನಿಗದಿ ಮಾಡಲಾಗಿತ್ತು.
 
ಅಲ್ಲದೇ, ಇದು ಪಕ್ಷಾತೀತ ಚುನಾವಣೆ. ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲ ಪಡೆಯಬಹುದು ಅಷ್ಟೆ. ಆಯೋಗ ನೀಡಿದ ಚಿಹ್ನೆಯ ಆಧಾರದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದ್ದಾರೆ.
 
ಬಂದೋಬಸ್ತ್‌: ಪ್ರತಿ ಮತಗಟ್ಟೆಗೂ ಇಬ್ಬರು, ಮೂವರು ಪೊಲೀಸ್‌ ಸಿಬ್ಬಂದಿ, ಡಿಎಆರ್, ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ವಿಚಕ್ಷಣ ದಳ ಜಿಲ್ಲೆಯ ಹಲವೆಡೆ ಗಸ್ತು ತಿರುಗಲಿದೆ. 
 
***
14ರಂದು ಮತ ಎಣಿಕೆ; ಫಲಿತಾಂಶ 
ಮತದಾನದ ನಂತರ ಎಲ್ಲ ಮತಗಟ್ಟೆಗಳನ್ನೂ ಆಯಾ ತಾಲ್ಲೂಕಿನ ಎಪಿಎಂಸಿ ಕಚೇರಿಗಳ ಕೊಠಡಿಯಲ್ಲಿ ಭದ್ರವಾಗಿ ಇಡಲಾಗುತ್ತದೆ. ಅದೇ ಕೇಂದ್ರ
ಗಳಲ್ಲೇ ಜ.14ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಸಂಜೆಯ ವೇಳೆಗೆ ಎಲ್ಲ ಫಲಿತಾಂಶ ಹೊರ ಬೀಳಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT