ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಪಟ್ಟು ಓದಿದರೆ ಪರೀಕ್ಷೆ ಸುಲಭ

ಸಿಂದಗಿ: ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ– ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
Last Updated 13 ಜನವರಿ 2017, 5:52 IST
ಅಕ್ಷರ ಗಾತ್ರ
ಸಿಂದಗಿ: ವಿದ್ಯಾರ್ಥಿಗಳು ಸಣ್ಣ–ಪುಟ್ಟ ಕೊರತೆಗಳನ್ನು ಮುಂದಿಟ್ಟುಕೊಂಡು ದೂಷಿಸುವುದು ಸರಿಯಲ್ಲ. ಇಷ್ಟಪಟ್ಟು ಓದಿದರೆ ಪರೀಕ್ಷಾ ಭಯ ತನ್ನಿಂದ ತಾನೆ ದೂರಾಗುತ್ತದೆ ಎಂದು ಕಳೆದ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯಪುರದ ಸಹನಾ ಕುಲಕರ್ಣಿ  ಹೇಳಿದರು.
 
ಗುರುವಾರ ಪಟ್ಟಣದ ಊರನಹಿರಿಯಮಠದ ಸಭಾಭವನ ದಲ್ಲಿ ಕುವೆಂಪು ವಿದ್ಯಾಲಯ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ  ಉಚಿತ ಪರೀಕ್ಷಾಪೂರ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಬೇಕೆಂದರೆ ಮೊದಲಿಗೆ ಪರೀಕ್ಷಾ ಯೋಜನೆ ರೂಪಿಸಿ ಕೊಂಡು ಕಠಿಣ ವಿಷಯ ಮೊದಲು ಓದಬೇಕು. ಅಲ್ಲದೇ ಬರವಣಿಗೆಯನ್ನು ಹೆಚ್ಚು ಹೆಚ್ಚು ರೂಢಿಸಿಕೊಳ್ಳಬೇಕು. ಓದಿ ದ್ದನ್ನು ಯೋಚಿಸಿ ಮನನ ಮಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಸಹನಾ ಜೊತೆ ವಿದ್ಯಾರ್ಥಿಗಳು ಪರೀಕ್ಷಾ ವಿಷಯವಾಗಿ ಅರ್ಥಪೂರ್ಣ ಸಂವಾದ ನಡೆಸಿದರು. 
 
ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಸಮಾರಂಭವನ್ನು ಸಾಹಿತಿ ಡಾ.ಬಿ.ಆರ್.ನಾಡಗೌಡ ಉದ್ಘಾಟಿಸಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ನಿರಂತರ ಅಧ್ಯಯನಶೀಲರಾಗಿ, ಚಾರಿತ್ರ್ಯ ಸಂಪನ್ನರಾಗಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರೊಜೆಕ್ಟರ್ ಆಧಾರಿತ ಶಿಕ್ಷಣದ ಅಗತ್ಯತೆ ಇದೆ ಎಂದು ತಿಳಿಸಿದರು.
 
ಪಿಯು ಹಂತ ಅತ್ಯಂತ ಮಹತ್ವದ್ದು ಅಷ್ಟೇ ಸೂಕ್ಷ್ಮವಾದುದು ಈ ಹಂತದಲ್ಲಿ ವಿದ್ಯಾರ್ಥಿಗಳು ಸಂಯಮಶೀಲರಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದರು. ರೈತ ಮುಖಂಡ ಅಶೋಕ ಅಲ್ಲಾಪೂರ ಉಪನ್ಯಾಸ ನೀಡಿ, ಯುವ ಪೀಳಿಗೆಯಲ್ಲಿ ನಕಾರಾತ್ಮಕ ಮನೋಭಾವ ದೂರಾಗಬೇಕು. ಉತ್ತಮನಾಗಿ ಉಪಕಾರಿಯಾಗಿ ಎಂಬಂತೆ ಬಾಳಬೇಕು.
 
ಅಲ್ಲದೇ ವ್ಯಸನಮುಕ್ತ ಬದುಕು ತಮ್ಮದಾಗಿಸಿಕೊಂಡು ದೇಶದ ಪರಂಪರೆ ಉತ್ಥಾನಕ್ಕಾಗಿ ಕಂಕಣಬದ್ಧರಾಗಬೇಕು ಎಂದು  ಕೇಳಿಕೊಂಡರು.
 
ನಂತರ ವಿದ್ಯಾರ್ಥಿನಿ ಸಹನಾ ಕುಲಕರ್ಣಿ ಜೊತೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಬಗ್ಗೆ ಸುದೀರ್ಘ ಸಂವಾದ ನಡೆಸಿದರು. ವಿದ್ಯಾಲಯದ ವತಿಯಿಂದ ಸಹನಾಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
 
ವೇದಿಕೆಯಲ್ಲಿ ಸುರೇಖಾ ಕುಲಕರ್ಣಿ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಯದ ನಿರ್ದೇಶಕ ಮಹೇಶ ದುತ್ತರಗಾಂವಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸುರೇಖಾ ಹತ್ತಳ್ಳಿ ನಿರೂಪಿಸಿ ವಂದಿಸಿದರು.
 
**
ಇಂದಿನ ಬಹುತೇಕ ಕನ್ನಡ ಭಾಷಾ ಉಪನ್ಯಾಸಕರಿಗೆ ಭಾಷಾ ಪ್ರಭುತ್ತ ಇಲ್ಲದಿರುವುದು ವಿಷಾದದ ಸಂಗತಿ
-ಡಾ.ಬಿ.ಆರ್.ನಾಡಗೌಡ
ಸಾಹಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT