ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡು ಬೆತ್ತಾಸು ಮಾರಾಟ ಜೋರು

ಯಲ್ಲಮ್ಮನಗುಡ್ಡದಲ್ಲಿ ಸಂಭ್ರಮದ ಬನದನ ಹುಣ್ಣಿಮೆ ಆಚರಣೆ
Last Updated 13 ಜನವರಿ 2017, 6:41 IST
ಅಕ್ಷರ ಗಾತ್ರ
ಸವದತ್ತಿ: ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಬನದ ಹುಣ್ಣಿಮೆ ನಿಮಿತ್ತ ಲಕ್ಷಾಂತರ ಭಕ್ತರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಶ್ರೀದೇವಿಯ ಮಂಗಲೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.  
 
ಕಳೆದ ಒಂದು ವಾರದಿಂದ ಯಲ್ಲ ಮ್ಮನಗುಡ್ಡಕ್ಕೆ ಭಕ್ತರು ಚಕ್ಕಡಿ, ವಿವಿಧ ವಾಹನಗಳ ಹಾಗೂ ಪಾದಯಾತ್ರೆಯ ಮೂಲಕ ಬಂದು ಸುತ್ತಲಿನ ಗುಡ್ಡದ ವಿಶಾಲವಾದ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು, ಕರಿಗಡಬು, ಕರಚಿಕಾಯಿ, ಹೋಳಿಗೆ ಸಿಹಿ, ತಿಂಡಿಗಳ ಮೀಸಲು ಅಡುಗೆ ಮಾಡುವ ದೃಶ್ಯ ಎಲ್ಲಿ ನೋಡಿದಲ್ಲಿ ಸರ್ವೇಸಾಮಾನ್ಯವಾಗಿತ್ತು.
 
ಭಕ್ತರು ವಿವಿಧ ವಾದ್ಯಗಳೊಂದಿಗೆ ಚೌಡಕಿ ಹಾಡುಗಳೊಂದಿಗೆ ಕುಣಿ ಯುತ್ತಾ, ನಲಿಯುತ್ತ ಪ್ರಾಂಗಣದಲ್ಲಿ ಎಲ್ಲಿ ನೋಡಿದರಲ್ಲಿ ‘ಯಲ್ಲಮ್ಮ ನಿನ್ ಹಾಲಕ್‌ ಉಧೋ, ಉಧೋ’ ಎಂಬ ಜಯ ಘೋಷ ಹಾಕುತ್ತ, ಬಂಢಾರ ಎರಚುತ್ತ, ಒಬ್ಬರನ್ನೊಬ್ಬರು ನಗೆಯಾಡುತ್ತ, ರೇಣುಕಾದೇವಿಯ ದರ್ಶನ ಭಾಗ್ಯ ಪಡೆದು ಧನ್ಯರಾದರು. 
 
ಬೆಳಿಗ್ಗೆ ಮಂಜು ಮಧ್ಯಾಹ್ನದ ಸುಡುಬಿಸಿಲು ಸಂಜೆ ಮೈ ಕೊರೆಯುವ ಚಳಿ ಲೆಕ್ಕಿಸದೇ ಭಕ್ತರು ತಮ್ಮ ಭಕ್ತಿಯ ಸಾಗರದಲ್ಲಿ ಲೀನರಾಗಿದ್ದು, ಯಲ್ಲಮ್ಮನ ಸ್ಮರಣೆಯಲ್ಲಿ ಎಲ್ಲವನ್ನು ಮರೆತ ಭಕ್ತರು, ಎಣ್ಣೆಹೊಂಡದಲ್ಲಿ ಪವಿತ್ರ ಸ್ನಾನ ಮಾಡಿದರು. ಇನ್ನೂ ಕೆಲವರು ವದ್ದೆ ಬಟ್ಟೆಯಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು.
 
ದರ್ಶನ ವ್ಯವಸ್ಥೆ: ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಆಡಳಿತ ಮಂಡಳಿ ಸುರಕ್ಷಿತ ಸರದಿಯಲ್ಲಿ ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು, ಇದರಿಂದ ಸಮಸ್ತ ಭಕ್ತರಿಗೆ ಗದ್ದಲದಿಂದ ಮುಕ್ತರಾಗಿ ಯಾವುದೇ ತೊಂದರೆಯಾಗಲಿಲ್ಲ. ಆದರೂ ಸರತಿಸಾಲು ತುಂಬಾ ದೂರವಾಗಿದ್ದರಿಂದ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಯಿತು.
 
ಏಕ ಸಂಚಾರ: ಭಕ್ತರ ವಾಹನಗಳು ವ್ಯವ ಸ್ಥಿತವಾಗಿ ಸಾಗಲು ಪೊಲೀಸರು ಏಕ ಮುಖ ರಸ್ತೆ ಸಂಚಾರ ವ್ಯವಸ್ಥೆ ಮಾಡಿ ದ್ದರು. ಸವದತ್ತಿ ಎ.ಪಿ.ಎಂ.ಸಿ.       ಶಾಂತಿನ ಗರ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಹೋಗುವುದು. ಜೋಗುಳಬಾವಿ ಮಾ ರ್ಗದ ಕೆಳಗಿನ ರಸ್ತೆಯಿಂದ ಹೊರ ಬರು ವ ಸೌಕರ್ಯ ಕಲ್ಪಿಸಲಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಯಿತು.
 
ಸೌಕರ್ಯ: ಭಕ್ತರ ಸಂಖ್ಯೆಗೆ ಅನುಗುಣ ವಾಗಿ ಆಡಳಿತ ಮಂಡಳಿ ಮೂಲ ಸೌಕ ರ್ಯಗಳ ಜತೆಗೆ ವಾಹನ ನಿಲ್ಲುಗಡೆ, ವಸತಿ ವ್ಯವಸ್ಥೆ, ಬೆಳಕು ಹಾಗೂ ಕುಡಿ ಯುವ ನೀರಿಗೆ ಇನ್ನಷ್ಟು ಅನುಕೂಲ ವಾ ಗಲಿ ಎಂದು ಟ್ಯಾಂಕರ್‌ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು. 
 
ಹರಿಜಾತ್ರೆ: ಗುರುವಾರ ಕೃಷಿ ಮಾರುಕಟ್ಟೆ ಚುನಾವಣೆಯ ಮತದಾನ ಇರುವು ದರಿಂದ ಬಹುತೇಕ ಭಕ್ತರು ಹುಣ್ಣಿಮೆ ಯನ್ನು ಮಂಗಳವಾರ ಮಾಡಿದರೆ, ಇನ್ನೂ ಕೆಲವರು ಶುಕ್ರವಾರ ದೇವಿಯ ವಾರಗಳಂದು ಮಾಡುವುದರಿಂದ ಜಾತ್ರೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT