ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ; ಶೇ 37 ಮತದಾನ

ಜಿಲ್ಲೆಯ ವಿವಿಧೆಡೆ ಶಾಂತಿಯುತ ಮತದಾನ *ಕೆಲವು ಮತಗಟ್ಟೆಗಳಲ್ಲಿ ನೀರಸ ಪ್ರತಿಕ್ರಿಯೆ *ಮತ ಎಣಿಕೆ ನಾಳೆ
Last Updated 13 ಜನವರಿ 2017, 8:35 IST
ಅಕ್ಷರ ಗಾತ್ರ
ಹಾಸನ: ಜಿಲ್ಲೆಯ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿಗಳ ವಿವಿಧ ಸ್ಥಾನಗಳ ಚುನಾವಣೆಯ ಮತದಾನ ಗುರುವಾರ ಶಾಂತಿಯುತವಾಗಿ ನಡೆಯಿತು.
 
ಬೆಳಿಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭಗೊಂಡರೂ ಮಧ್ಯಾಹ್ನದ ವರೆಗೂ ಮತಗಟ್ಟೆ ಬಳಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿಲ್ಲ. ಮಂದಗತಿಯಲ್ಲಿ ಸಾಗಿ ಮಧ್ಯಾಹ್ನದ ವೇಳೆಗೆ ಚುರುಕು ಪಡೆಯಿತು. ಮತಗಟ್ಟೆ ಬಳಿ ಅಭ್ಯರ್ಥಿಗಳು ಕರಪತ್ರ ವಿತರಿಸಿ ತಮಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು. ಯಾವ ಕೇಂದ್ರಗಳಲ್ಲೂ ಗದ್ದಲ, ಗೊಂದಲ ಉಂಟಾದ ಬಗ್ಗೆ ವರದಿಯಾಗಿಲ್ಲ.   
 
ಹಾಸನ–ಅಲೂರು ಎಪಿಎಂಸಿಯ 14, ಚನ್ನರಾಯ ಪಟ್ಟಣ 14, ಬೇಲೂರು 14 ಹಾಗೂ ಸಕಲೇಶಪುರ ತಾಲ್ಲೂಕಿನ 12 ಸ್ಥಾನಗಳ ಆಯ್ಕೆಗೆ ಮತದಾನ ನಡೆಯಿತು. ಒಟ್ಟು 52 ಅಭ್ಯರ್ಥಿಗಳ ಹಣೆಬರಹವನ್ನು 3,15,510 ಮತದಾರರು ನಿರ್ಧರಿಸಿದ್ದಾರೆ.
 
ಜಿಲ್ಲೆಯಾದ್ಯಂತ 442 ಮತಗಟ್ಟೆ ತೆರೆಯಲಾಗಿತ್ತು. ತಲಾ ಒಂದು ಮತಗಟ್ಟೆಗೆ ಮೂರು ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರನ್ನು ನಿಯೋಜಿಸ ಲಾಗಿತ್ತು.  ಮತಗಟ್ಟೆಯಿಂದ 100 ಮೀಟರ್ ಆವರಣದಲ್ಲಿ ಖಾಸಗಿ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲಾಗಿತ್ತು.
 
ಹಾಸನ ತಾಲ್ಲೂಕಿನ ಬೂವನಹಳ್ಳಿ ಯಲ್ಲಿ ಒಟ್ಟು 383 ಮತಗಳಿದ್ದು, ಮಧ್ಯಾಹ್ನ 3.30ರ ವೇಳೆಗೆ 270 ಮತ ಚಲಾವಣೆ ಆಗಿದ್ದವು. ಸಂಕೇನಹಳ್ಳಿಯಲ್ಲಿ 504 ಮತಗಳ ಪೈಕಿ 216 ಮತ ಚಲಾವಣೆಯಾಗಿದ್ದರೆ, ದೊಡ್ಡಪುರದಲ್ಲಿ 552 ಮತಗಳಿದ್ದು ಸಂಜೆ 4ರ ವೇಳೆಗೆ 222 ಮತ ಚಲಾವಣೆ ಆಗಿದ್ದವು. ಬಿ. ಕಾಟಿಹಳ್ಳಿಯಲ್ಲಿ 238ರ ಪೈಕಿ ಕೇವಲ 97 ಮತಗಳು ಚಲಾವಣೆಗೊಂಡಿದ್ದವು.
 
ಆಲೂರು ವರದಿ: ತಾಲ್ಲೂಕಿನ ಮಲ ಗಳಲೆ ಕೇಂದ್ರದಲ್ಲಿ ಮತ ಚಲಾಯಿಸಿ ಮಾತನಾಡಿದ ಶಾಸಕ ಎಚ್.ಕೆ. ಕುಮಾರ ಸ್ವಾಮಿ, ತಾಲ್ಲೂಕಿನ 2 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಪಕ್ಷ ಬೆಂಬಲಿತ ಅಭ್ಯರ್ಥಿ ಗೆಲ್ಲುವುದು ಖಚಿತ. ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಗಳಿಂದ ಜನರ ವಿಶ್ವಾಸ ಗಳಿಸಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಜೆಡಿಎಸ್ ಜಯಭೇರಿ ಭಾರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ನೀರಸ ಪ್ರತಿಕ್ರಿಯೆ
ಬೇಲೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ನಡೆದ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಶೇ 36.48 ಮತದಾನವಾಗಿದೆ.
 
ಎಪಿಎಂಸಿಯ 12 ಕ್ಷೇತ್ರಗಳಿಗೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಶಾಂತಿಯುತ ಮತದಾನ ನಡೆಯಿತು. ಒಟ್ಟು 54,925 ಮತದಾರರ ಪೈಕಿ 16,425 ಪುರುಷರು ಮತ್ತು 3561 ಮಹಿಳೆಯರು ಸೇರಿದಂತೆ ಒತ್ತು 19,986 ಮಂದಿ ಮತ ಚಲಾಯಿಸಿದ್ದಾರೆ.
 
ವರ್ತಕರ ಕ್ಷೇತ್ರಕ್ಕೆ ನಡೆದ ಚುನಾವಣೆ ಯಲ್ಲಿ ಅತಿಹೆಚ್ಚು ಶೇ 97.66 ಮತದಾನ ವಾಗಿದೆ. 128 ಮತದಾರರ ಪೈಕಿ 115 ಪುರುಷರು, 10 ಮಹಿಳೆಯರು ಸೇರಿ ದಂತೆ 125 ಮಂದಿ ಮತಚಲಾಯಿಸಿ ದ್ದಾರೆ. ಅತಿ ಕಡಿಮೆ ಮತದಾನ ಹನಿಕೆ ಕ್ಷೇತ್ರದಲ್ಲಿ ಶೇ 29.84 ಆಗಿದೆ. ಉಳಿದಂತೆ ಬೇಲೂರು ಕಸಬಾದಲ್ಲಿ ಶೇ 39.28, ಐರವಳ್ಳಿಯಲ್ಲಿ ಶೇ. 45.99, ಹೆಬ್ಬಾಳಿನಲ್ಲಿ ಶೇ 39.66, ಹಳೇಬೀಡಿ ನಲ್ಲಿ  ಶೇ 32.16, ಕೋಡಿಹಳ್ಳಿಯಲ್ಲಿ ಶೇ 31.83, ಹಗರೆಯಲ್ಲಿ ಶೇ 42.64, ಆಂದಲೆಯಲ್ಲಿ ಶೇ 30.96, ಬಿಕ್ಕೋಡಿ ನಲ್ಲಿ ಶೇ 41.36, ಅರೇಹಳ್ಳಿಯಲ್ಲಿ ಶೇ 37.40, ಹುನುಗನಹಳ್ಳಿಯಲ್ಲಿ ಶೇ 30.18 ಮತದಾನವಾಗಿದೆ.
 
ಮತ ಏಣಿಕೆ: ಜ.14ರಂದು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಣಿಕೆ ನಡೆಯಲಿದೆ. ಇದಕ್ಕಾಗಿ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್‌ ಬಿ.ಎಸ್‌. ಪುಟ್ಟಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
 
ಮತ ಎಣಿಕೆ ಎರಡು ಕೊಠಡಿಗಳ 11 ಟೇಬಲ್‌ಗಳಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರದ ಎಲ್ಲಾ ಮತಪೆಟ್ಟಿಗೆಯಲ್ಲಿನ ಮತ ಗಳನ್ನು ಮಿಶ್ರಣ ಮಾಡಿ ನಂತರ 25ರಂತೆ ಬಂಡಲ್‌ ಮಾಡಿ ಎಣಿಕೆ ಮಾಡಲಾಗು ತ್ತದೆ. ವರ್ತಕರ ಕ್ಷೇತ್ರದ ಮತಗಳ ಎಣಿಕೆ 11ನೇ ಟೇಬಲ್‌ನಲ್ಲಿ ಅಂತಿಮ ಸುತ್ತಿನಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಯಿದೆ ಎಂದು ಹೇಳಿದರು.
 
ಶಾಂತಿಯುತ 
ಚನ್ನರಾಯಪಟ್ಟಣ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 12 ಸ್ಥಾನಗಳಿಗೆ ಗುರುವಾರ ಶಾಂತಿಯುತ ಮತದಾನ ನಡೆಯಿತು. 
 
ವರ್ತಕರ ಕ್ಷೇತ್ರದ ಚುನಾವಣೆ ನಡೆಯುವ ಎಪಿಎಂಸಿಯಲ್ಲಿನ ಮತಗಟ್ಟೆ ಬಳಿ ಶಾಸಕ ಸಿ.ಎನ್‌.ಬಾಲಕೃಷ್ಣ, ಪತ್ನಿ ಕುಸುಮಾ ಬಾಲಕೃಷ್ಣ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಬಿ.ತಿಮ್ಮೇಗೌಡ ಪರ ಮತಯಾಚಿಸಿದರು.
 
ಮತ್ತೊಂದು ಬದಿಯಲ್ಲಿ ಕಾಂಗ್ರೆಸ್‌ ನಾಯಕರಾದ ವಿಧಾನ ಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ಮುಖಂಡರಾದ ಎ.ಈ. ಚಂದ್ರಶೇಖರ್‌, ಎಂ.ಕೆ.ಮಂಜೇ ಗೌಡ ಅವರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎ.ಸಿ.ಆನಂದ್‌ಕುಮಾರ್‌ ಪರ ಮತ ಯಾಚಿಸಿದರು.
 
ಶಾಸಕ ಸಿ.ಎನ್‌.ಬಾಲಕೃಷ್ಣ ಕಸಬಾ ವ್ಯವಸಾಯಗಾರರ ಕ್ಷೇತ್ರದ ವ್ಯಾಪ್ತಿಗೆ ಬರುವ ಪಟ್ಟಣದ ಪೇಟೆ ಶಾಲೆಯ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರೆ, ವಿಧಾನ ಪರಿಷತ್ತು ಸದಸ್ಯ ಎಂ.ಎ. ಗೋಪಾಲಸ್ವಾಮಿ ನುಗ್ಗೇಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಲಿಕೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.
 
ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಶ್ರೀರಾಮನಗರದ ಮತಗಟ್ಟೆಯಲ್ಲಿ ಮತಚಲಾಯಿಸಿದರು. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 32 ಅಭ್ಯರ್ಥಿ ಕಣದಲ್ಲಿದ್ದಾರೆ. ಪಟ್ಟಣದ ನವೋದಯ ವಿದ್ಯಾಸಂಸ್ಥೆಯಲ್ಲಿ ಜ.14ರಂದು ಮತ ಎಣಿಕೆ ನಡೆಯಲಿದೆ.
 
ಕೆಲವೆಡೆ ನೀರಸ, ಹಲವೆಡೆ ಬಿರುಸು
ಹಳೇಬೀಡು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಮತದಾರರು ಶಾಂತಿಯುತವಾಗಿ ಮತ ಚಲಾಯಿಸಿದರು.
 
ಹಳೇಬೀಡು ಹೋಬಳಿಯ ಮೂರು ಕ್ಷೇತ್ರಗಳಲ್ಲಿ 17 ಮತಗಟ್ಟೆಗಳಿದ್ದವು. ಬಹುತೇಕ ಎಲ್ಲ ಮತಗಟ್ಟೆಯಲ್ಲಿಯೂ ನಿರಸ ಮತದಾನ ಕಂಡಬಂದಿತು. ಕೆಲವೆಡೆ ಮಧ್ಯಾಹ್ನದ ನಂತರ ಚುರುಕು ಗೊಂಡಿತು. ಘಟ್ಟದಹಳ್ಳಿ ಮತಗಟ್ಟೆಯಲ್ಲಿ ಮಾತ್ರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿರುಸಿನಿಂದ ಮತದಾನ ನಡೆಯಿತು.
 
ಸಿಬ್ಬಂದಿ ಚುನಾವಣಾ ಕೆಲಸಕ್ಕೆ ನೇಮಕವಾಗಿದ್ದರಿಂದ ಪಟ್ಟಣದ ನಾಡಕ ಚೇರಿ ಬಿಕೊ ಎನುತ್ತಿತ್ತು. ಅಟಲ್‌ ಜೀ ಜನಸ್ನೇಹಿ ಕೇಂದ್ರ ಮಾತ್ರ ತೆರದಿತ್ತು. ಅರ್ಜಿ ನೋಂದಣಿ ಹಾಗೂ ಮಂಜೂ ರಾಗಿ ಬಂದಂತಹ ದೃಢೀಕರಣ ಪತ್ರ ಮಾತ್ರ ವಿತರಣೆ ಮಾಡಲಾಯಿತು.
 
**
ಸರ್ವೆ ನಂಬರ್ ಎಲ್ಲಿರುತ್ತದೋ ಅಲ್ಲಿನ ಕೇಂದ್ರದಲ್ಲಿ ಮತ ಹಾಕಬಹುದು.  ಚುನಾವಣಾಧಿಕಾರಿ ಗಳು ಮೊದಲೇ ಎಚ್ಚೆತ್ತುಕೊಂಡಿದ್ದರೆ ಮತದಾರರ ಸಂಖ್ಯೆ ನಿಖರ ಮಾಹಿತಿ ತಿಳಿಯಬಹುದಿತ್ತು.
–ವೇಣುಗೋಪಾಲ್
ಸಂಕೇನಹಳ್ಳಿ ಗ್ರಾಮಸ್ಥ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT