ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ್!

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಮೈಸೂರಿನ ಸರಸ್ವತಿಪುರಂ ಬಳಿ ಇರುವ ಜವರೇಗೌಡ ಉದ್ಯಾನಕ್ಕೆ ಮಿತ್ರರೊಂದಿಗೆ ಸಾಯಂಕಾಲ ವಾಯುವಿಹಾರಕ್ಕೆ ಹೋಗಿದ್ದೆ. ವಾಯುವಿಹಾರ ಮುಗಿಸಿ ಆ ಉದ್ಯಾನದ ಪ್ರವೇಶ ದ್ವಾರದ ಬಳಿ ಇರುವ ಕೆನರಾ ಬ್ಯಾಂಕಿನ ಎದುರಿನ ಚುರುಮುರಿ ಗಾಡಿಯ ಬಳಿ ಬಂದು ಚುರುಮುರಿ ತೆಗೆದುಕೊಂಡೆವು.

ಅಲ್ಲಿಯೇ ನಿಂತುಕೊಂಡು ತಿನ್ನುವ ಬದಲು ಉದ್ಯಾನದ ಪ್ರವೇಶ ದ್ವಾರದ ಪಕ್ಕ ಇರುವ ಜಗಲಿಯ ಮೇಲೆ ಕುಳಿತು ತಿನ್ನೋಣ ಎಂದು ನಾವು ಮಾತನಾಡಿಕೊಳ್ಳುವಷ್ಟರಲ್ಲಿ ಆ ಚುರುಮುರಿ ಮಾರುತ್ತಿದ್ದ ವ್ಯಕ್ತಿ ಹೇಳಿದರು: ‘ಅಲ್ಲಿ ಕುಳಿತುಕೊಂಡು ತಿನ್ನಿ. ಆದರೆ ಪೇಪರ್ ಪೊಟ್ಟಣವನ್ನು ಮಾತ್ರ ಇಲ್ಲಿಯೇ ತಂದು ಹಾಕಬೇಕು’.

ಆ ವ್ಯಕ್ತಿಯ ಪರಿಸರ ಕಾಳಜಿ ನೋಡಿ ಆತನ ಮೇಲೆ ನಮಗೆ ಅಭಿಮಾನ ಮೂಡಿತು. ನಂತರ ಆತನ ಹೆಸರೇನು ಎಂದು ವಿಚಾರಿಸಿದೆವು. ‘ಶಿವ’ ಎಂದು ತಿಳಿಯಿತು. ಸರಸ್ವತಿಪುರಂ ಬಳಿ ಹೋದವರು ನಮ್ಮ ಶಿವನನ್ನು ಭೇಟಿ ಮಾಡಿ ಅಭಿನಂದಿಸುವಿರಾ?
-ಪಿ.ಜೆ. ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT