ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರಭರಿತ ಶಿಕ್ಷಣದಿಂದ ಮಕ್ಕಳು ವಂಚಿತ

ಸಮ್ಮೇಳನದಲ್ಲಿ ಪ್ರೊ.ಎಂ.ರಾಮಚಂದ್ರ ಕಳವಳ
Last Updated 14 ಜನವರಿ 2017, 5:29 IST
ಅಕ್ಷರ ಗಾತ್ರ
ಪುಂಡಲೀಕ ಹಾಲಂಬಿ ವೇದಿಕೆ (ಬ್ರಹ್ಮಾವರ): ‘ಮನೆಗಳಲ್ಲಿ ಕನ್ನಡ ವಾತಾವರಣ ಇದ್ದರೆ ಮಕ್ಕಳು ಅದನ್ನೇ ಉಸಿರಾಡುತ್ತಾರೆ. ಹಿಂದೆಲ್ಲಾ ಮಕ್ಕಳಿಗೆ ಮನೆಯಲ್ಲೇ ಸಂಸ್ಕಾರಭರಿತ ಶಿಕ್ಷಣ ದೊರೆಯುತ್ತಿತ್ತು. ರಂಜನೆಯೂ ಸಿಗು ತ್ತಿತ್ತು. ಆದರೆ, ಇಂದಿನ ಮಕ್ಕಳು ನೀತಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾರ ಣ ಅವರು ಆಂಗ್ಲ ಭಾಷೆಯ ಬಗ್ಗೆ ವ್ಯಾ ಮೋಹ ಬೆಳೆಸಿಕೊಳ್ಳುತ್ತಿದ್ದಾರೆ’ ಎಂದು ಸಾಹಿತಿ ಹಾಗೂ ಸಂಘಟಕ ಕಾರ್ಕಳದ ಪ್ರೊ.ಎಂ.ರಾಮಚಂದ್ರ ಹೇಳಿದರು.
 
ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಮೂರು ದಿನಗಳ ಕಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ ಮತ್ತು ಕೋಟ ಮಣೂರು ಸುಜ್ಞಾನದ ಸಹಯೋಗದಲ್ಲಿ ನಡೆಯುವ 11ನೇ  ಜಿಲ್ಲಾ ಕನ್ನಡ ಸಾಹಿ ತ್ಯ ಸಮ್ಮೇಳನ ನುಡಿ ಹಬ್ಬ 2017ರ ಅಧ್ಯ ಕ್ಷತೆ ವಹಿಸಿ ಅವರು ಮಾತನಾ ಡಿದರು.
 
ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ. ಆಡಳಿತ, ವ್ಯವಹಾರ, ಶಿಕ್ಷಣ ರಂಗದಲ್ಲಿ ಕನ್ನಡಕ್ಕೆ ಪಾರಮ್ಯ ಇರಬೇಕು. ಅದಕ್ಕೆ ತಕ್ಕಂತೆ ನೀತಿ ಸೂತ್ರಗಳ ರಚನೆ ಆಗಬೇಕು. ಇಂತಹ ಮಾತುಗಳೆಲ್ಲವೂ ರಾಜ್ಯೋತ್ಸವದ ಭಾಷಣಗಳಲ್ಲಿ ಕೇಳಿದಷ್ಟು, ಪತ್ರಿಕೆಗಳ ಘೋಷಣೆಗಳಲ್ಲಿ ಕಂಡಷ್ಟು ನಿಜ ಜೀವನದಲ್ಲಿ ಅನುಭವಕ್ಕೆ ಬರುತ್ತಿಲ್ಲ. ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಸರ್ಕಾರದ್ದು ಡೋಲಾಯಮಾನ ಮನಃಸ್ಥಿತಿ. ಬೆಂಗಳೂರು ಒಂದರಲ್ಲೇ ಪ್ರತಿ ವರ್ಷ ನೂರಾರು ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿ ಮೆರೆಯು ತ್ತಿರುವುದೇ ಇದಕ್ಕೆ ನಿದರ್ಶನ. ಸರ್ಕಾರ ಅವುಗಳ ಕೊರಳು ಒತ್ತಬೇಕಿಲ್ಲ, ನಿಯಂತ್ರಿಸಲಿ. ಲಾಲ್‌ಬಾಗ್‌ನಲ್ಲಿ ಕನ್ನಡದ ಗಾಳಿ ಹೆಚ್ಚು ಬೀಸಲಿ, ಕನ್ನಡದ ಕಂಪು ಹೆಚ್ಚು ಹರಡಲಿ. ಅದಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸಲಿ ಎಂದು ಅವರು ಹೇಳಿದರು.
 
ಸರ್ಕಾರಿ ಮಾದರಿ ಶಾಲೆ ಎಂಬ ಫಲಕ ಮಾತ್ರದಿಂದ ಏನನ್ನೂ ಸಾಧಿಸ ಲಾಗುವುದಿಲ್ಲ. ಅಲ್ಲಿ ಮೂಲ ಸೌಕರ್ಯದ ವ್ಯವಸ್ಥೆಯನ್ನೂ ಒದಗಿಸಬೇಕು ಎಂದರು.
 
ಕೇವಲ ಮಕ್ಕಳನ್ನು ತೇರ್ಗಡೆ ಗೊಳಿಸುವುದಷ್ಟೇ ಶಿಕ್ಷಕರ ಕೆಲಸವಾ ಗಬಾರದು. ಭಾಷಾ ಸಾಹಿತ್ಯ ಪಾಠ ವೆಂಬುದು ವಿಷಯಜ್ಞಾನ ಮುಖ್ಯವಾದ ಇತರ ಪಾಠಗಳಂತಲ್ಲ. ಭಾಷಾ ಪಾಠ ರಸವತ್ತಾಗಿದ್ದರೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಕನ್ನಡ ಭಾಷೆಯ ಪ್ರೀತಿ ಬೆಳೆಯುತ್ತದೆ. ನಮ್ಮ ಹುಡುಗರಲ್ಲಿ ಕನ್ನಡದ ಬಗ್ಗೆ ಆಸಕ್ತಿಯಿಲ್ಲ, ಅಭಿರು ಚಿಯಿಲ್ಲ  ಎಂದು ದೂರುವುದಕ್ಕಿಂತ ಆಸಕ್ತಿ ಮೂಡಿಸುವ, ಅಭಿರುಚಿ ಹೆಚ್ಚಿಸುವ ಕಾರ್ಯದಲ್ಲಿ ಅಧ್ಯಾಪಕರು ನಿರತರಾಗಬೇಕು ಎಂದು ಹೇಳಿದರು.
 
ಅಂತರಾಷ್ಟ್ರೀಯ ಭಾಷೆ, ರಾಷ್ಟ್ರ ಭಾಷೆ, ರಾಜ್ಯ ಭಾಷೆ ಹೀಗೆ ಮೂರು ಭಾಷೆ ಕಲಿಯುವುದು ಕಷ್ಟಕರ. ಯಾವು ದಾದರೂ ಒಂದು ಭಾಷೆ ಹೆಚ್ಚೆಂದರೆ ಎರಡು ಭಾಷೆ ಸಾಕು. ಸರ್ವೋಚ್ಛ ನ್ಯಾಯಾಲಯ ಶಿಕ್ಷಣದಲ್ಲಿ ಭಾಷೆಗಳ ಆಯ್ಕೆ ಹೆತ್ತವರ, ವಿದ್ಯಾರ್ಥಿಗಳ ಮೂಲ ಭೂತ ಹಕ್ಕಿಗೆ ಸಂಬಂಧಿಸಿದ್ದು ಎಂದು ತೀರ್ಪು ನೀಡಿರುವುದು ದುರದೃಷ್ಟಕರ. ಇದರ ವಿರುದ್ಧ ಜಯ ದೊರಕುವ ತನಕ ಸಂಘಟಿತವಾದ ಆಂದೋಲನ ಮಾಡ ಬೇಕು ಎಂದು ಅವರು ಹೇಳಿದರು.
 
**
ಅಧ್ಯಾಪಕರ ಅನ್ಯಕಾರ್ಯಗಳ ಹೊರೆಯನ್ನು ಕೊಂಚ ಇಳಿಸಿ, ಪಾಠದ ಪುಣ್ಯ ಕಾರ್ಯವನ್ನು ಅವರು ಹೆಚ್ಚಾಗಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು.
-ಪ್ರೊ.ಎಂ.ರಾಮಚಂದ್ರ
ಸಾಹಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT