ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಹರಿದಾಸ ಹಬ್ಬ

Last Updated 14 ಜನವರಿ 2017, 6:09 IST
ಅಕ್ಷರ ಗಾತ್ರ
ಚಿತ್ರದುರ್ಗ: ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜ. 15 ರಿಂದ 22ರವರೆಗೆ ‘ಹರಿದಾಸ ಹಬ್ಬ’ -2017 ಹರಿವಾಯುಸ್ತುತಿ ಪಾರಾಯಣದ 16ನೇ ವಾರ್ಷಿಕೋತ್ಸವ  ಹಮ್ಮಿಕೊಳ್ಳಲಾಗಿದೆ.
 
‌ಹರಿವಾಯು ಗುರು ಸೇವಾ ಸಂಘದಿಂದ  ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ  ‘ದಾಸ ಸುಜ್ಞಾನ ದೀಪ’ದ ಉದ್ಘಾಟನಾ ಸಮಾರಂಭವನ್ನು  ತಂಬಿಹಳ್ಳಿ ಮಾಧವತೀರ್ಥ ಮಠದ    ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ ಹಾಗೂ ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಉದ್ಘಾಟಿಸುವರು. 
 
ವ್ಯಾಸ ಪೀಠ ಪ್ರತಿಷ್ಠಾನದ  ಕಂಬಾಲೂರು ಸಮೀರಾಚಾರ್ಯರು, ಚತುರ್ವೇದಿ ವೇದ ವ್ಯಾಸಾಚಾರ್ಯರು, ಉತ್ತರಾದಿ ಮಠದ ವ್ಯವಸ್ಥಾಪಕ ಎಚ್.ಜೆ.ಮೋಹನಾಚಾರ್  ಅತಿಥಿ ಗಳಾಗಿ ಭಾಗವಹಿಸುವರು. 
 
ಅಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿದ್ಯಾಸಿಂಧು ಸ್ವಾಮೀಜಿ ಅವರ ನೇತೃತ್ವದಲ್ಲಿ ಹರಿವಾಯುಸ್ತುತಿ ಪುನಃಶ್ಚರಣ ಹೋಮ ನಡೆಯಲಿದೆ. ಬೆಳಿಗ್ಗೆ 5ಕ್ಕೆ ಪುಣ್ಯಾಹ, ಹೋಮ. ಬೆಳಿಗ್ಗೆ 8.45 ಕ್ಕೆ ಪೂರ್ಣಾಹುತಿ ನಡೆಯಲಿದೆ. ನಂತರ ಬೆಳಿಗ್ಗೆ 10ಕ್ಕೆ ‘ವ್ಯಾಸ ವಿಜ್ಞಾನ ದೀಪ’ ಉದ್ಘಾಟನೆಯಾಗಲಿದೆ. 
 
ಸಂಜೆ 5ಕ್ಕೆ ದಾಸವರೇಣ್ಯರ ಭಾವಚಿತ್ರಗಳೊಂದಿಗೆ ಸ್ವಾಮೀಜಿ ಅವರ ಶೋಭಾಯಾತ್ರೆ ನಗರದ ಆನೆಬಾಗಿಲು ಬಳಿ ಇರುವ ಸುವೃಷ್ಠಿ ಪ್ರಾಣದೇವರ ದೇಗುಲದಿಂದ ಹೊರಟು ವಾಸವಿ ವಿದ್ಯಾಸಂಸ್ಥೆ ತಲುಪಲಿದೆ. 
 
ಪ್ರತಿದಿನ ಸಂಜೆ 6ರಿಂದ 6.30 ರವರೆಗೆ ಸಾಮೂಹಿಕ ವಿಷ್ಣುನಾಮ ಸ್ತೋತ್ರ ಪಾರಾಯಣ ಗೋದೂಳಿಯಲ್ಲಿ ಗೋವಿಂದ ಗೀತಾಮೃತ ಕಾರ್ಯಕ್ರಮ ನಡೆಯಲಿದೆ.
ಬ್ರಹ್ಮ ಚೈತನ್ಯ ಭಜನಾ ಮಂಡಳಿ ಯಿಂದ ಪುರಂದರ ದಾಸರ ಕೃತಿಗಳು, ಸಪ್ತಗಿರಿ ಭಜನಾ ಮಂಡಳಿಯಿಂದ ಕನಕದಾಸರ ಕೃತಿಗಳು, ವಾರಿ ಭಜನಾ ಮಂಡಳಿಯಿಂದ ವಿಜಯದಾಸರ ಕೃತಿಗಳು, ಪಾಂಡುರಂಗ ಭಜನಾ ಮಂಡಳಿಯಿಂದ ಗೋಪಾಲದಾಸರ ಕೃತಿಗಳು, ಸರಸ್ವತಿ ಭಜನಾ ಮಂಡಳಿಯಿಂದ ಜಗನ್ನಾಥದಾಸರ ಕೃತಿಗಳು ಪ್ರಸ್ತುತಗೊಳ್ಳಲಿವೆ.  ಕನಕದಾಸರ ಮೇರುಕೃತಿ ಹರಿಭಕ್ತ ಸಾರದ ಕುರಿತು ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರವಚನ ಇರಲಿದೆ. ಸಂಜೆ 7ರಿಂದ 8.45ರವರೆಗೆ ಶ್ರೀಮದ್ ಭಾಗವತ ಸಂದೇಶ ಕುರಿತು ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಪ್ರವಚನ ಸಪ್ತಾಹ ನಡೆಯಲಿದೆ.
 
**
ಪ್ರವಚನ 
 21ರಂದು ಸಂಜೆ 6.30ಕ್ಕೆ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪ್ರವಚನ ಮಂಗಳ, ಶ್ರೀರಾಮ ಡೋಲೋತ್ಸವ, ಗುರುವಂದನಾ, ತ್ರಿಮತಸ್ಥ ವಿಪ್ರ, ಹಿರಿಯ ನಾಗರಿಕ ಸನ್ಮಾನ, ಸಾಧನೆ ಸನ್ಮಾನ ಕಾರ್ಯಕ್ರಮವಿದೆ. 
 
22ರಂದು ಬೆಳಿಗ್ಗೆ 6ಕ್ಕೆ ಪುಣ್ಯಾಹ, ಹೋಮ, ಪೂರ್ಣಾ ಹುತಿ ನಂತರ ಲೋಕ ಕಲ್ಯಾಣಾ ರ್ಥವಾಗಿ ಗಾಯಿತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಧನ್ವಂತರಿ ಮಹಾಯಾಗವನ್ನು ಚನ್ನಗಿರಿ ಮಧು ಸೂದನಾ ಚಾರ್ಯರು ನೆರವೇರಿಸುವರು. ಅಂದು ಸಂಜೆ 6.30 ಕ್ಕೆ ಸಮಾರೋಪ ನಡೆಯಲಿದೆ. ಬಿ.ಹುಸೇನ್‌ಸಾಬ್ ಕನಕಗಿರಿ ಅವರಿಂದ ದಾಸವಾಣಿ ಆಯೋಜಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT