ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧಕರ ಜೀವನ ಪಠ್ಯದಲ್ಲಿ ಮೂಡಲಿ’

ಮಂಗಳೂರಿನಲ್ಲಿ ಸಿದ್ಧರಾಮೇಶ್ವರ ಜಯಂತಿ
Last Updated 16 ಜನವರಿ 2017, 5:34 IST
ಅಕ್ಷರ ಗಾತ್ರ

ಮಂಗಳೂರು: ಸಾಧಕರ, ಚಿಂತನಕಾರರ ಜಯಂತಿಗಳು ಕೇವಲ ಸಭೆ, ಸಮಾ ರಂಭಗಳಿಗೆ ಸೀಮಿತವಾಗಿರದೇ ಶೈಕ್ಷಣಿಕ ಸಾಲಿನ ಪಠ್ಯಕ್ರಮದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧ ರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಸಾಧಕರ ಜಯಂತಿಗೆ ರಜೆ ಘೋಷಣೆ ಮಾಡಿದಾಗ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಕಾಲಹರಣ ಮಾಡು ತ್ತಾರೆ. ಅದಕ್ಕೆ ಬದಲಾಗಿ ಶಾಲೆಯಲ್ಲೇ ಜಯಂತಿಯನ್ನು ಆಚರಣೆ ಮಾಡಿದಾಗ ವಿದ್ಯಾರ್ಥಿಗಳು ಸಾಧಕರನ್ನು ಆರಾಧಿ ಸುವುದರ ಜತೆಗೆ ಅವರ ತತ್ವಾದರ್ಶ ಗಳನ್ನು ಚಿಂತಿಸಲು ಅನುಕೂಲವಾ ಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳಲ್ಲಿ ಪೂರಕವಾದ ವಾತಾವರಣ ಸೃಷ್ಟಿಯಾ ಗಬೇಕು. ಪಠ್ಯಕ್ರಮದಲ್ಲಿ ವಿಷಯಗಳು ಬಂದಾಗ ಕಾರ್ಯಕ್ರಮ ಅರ್ಥಪೂರ್ಣ ವಾಗುತ್ತದೆ ಎಂದರು.

ಪ್ರಸ್ತುತ ಆಧುನಿಕತೆಯ ಭರಾಟೆ ಯಲ್ಲಿ ನಮ್ಮ ಹಿಂದಿನ ಪರಂಪರೆ, ಆಚಾ ರ-ವಿಚಾರವನ್ನು ಮರೆಯುತ್ತಿದ್ದೇವೆ. ದೇವರ ಬಗ್ಗೆ ಅಂಜಿಕೆ ಮೂಡಿದಾಗ ಮನುಷ್ಯ ಕೆಟ್ಟದ್ದನ್ನು ಮಾಡಲು ಮುಂದಾ ಗುವುದಿಲ್ಲ. ಈ ಸಲುವಾಗಿ ದೇವರ ಬಗ್ಗೆ ಒಲುವು ಮೂಡಿಸಿಕೊಳ್ಳುವುದು ಅನಿ ವಾರ್ಯವಾಗುತ್ತದೆ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಆರ್. ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಜಾಗತಿಕ ಬದಲಾವಣೆಗೆ ಪ್ರಯತ್ನಿಸಿದ್ದ 12 ಮತ್ತು 13ನೇ ಶತಮಾನವನ್ನು ಕ್ರಾಂತಿಕಾರಿಯುಗವೆಂದು ಗುರುತಿಸಲಾ ಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ವಚನ ಕಾರರು, ಸಾಹಿತ್ಯಗಳು ಹುಟ್ಟಿಕೊಂ ಡಿದ್ದರು. ಈ ಬದಲಾವಣೆಯ ಪರ್ವಕ್ಕೆ ಪ್ರಯತ್ನಿಸಿದ್ದ ಅಲ್ಲಮಪ್ರಭು, ಬಸವಣ್ಣ, ಸಿದ್ಧರಾಮೇಶ್ವರ ಪಾತ್ರ ಮಹತ್ತರವಾಗಿದೆ ಎಂದರು.

ಮಂಗಳೂರು ತಾಲ್ಲೂಕು ತಹಶೀ ಲ್ದಾರ ಸಿ. ಮಹಾದೇವಯ್ಯ, ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ ಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ನಿಲಯದ ಮೇಲ್ವಿಚಾರಕಿ ಅಂಬಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT