ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ದುಬಾರಿ ವಿಚ್ಛೇದನಗಳು

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಹೃತಿಕ್‌ ರೋಷನ್ ಮತ್ತು ಸೂಸೇನ್‌ ಖಾನ್‌
ಬಾಲಿವುಡ್‌ ಇತಿಹಾಸದಲ್ಲೇ ದುಬಾರಿ ಡೈವೋರ್ಸ್ ಅಂದ್ರೆ ನೆನಪಾಗುವುದು ಹೃತಿಕ್ ರೋಷನ್‌– ಸೂಸೇನ್‌ ಖಾನ್‌ ಜೋಡಿಯದ್ದು. ವಿಚ್ಛೇದನಕ್ಕಾಗಿ ಸೂಸೇನ್ ಖಾನ್‌ಗೆ ಹೃತಿಕ್ ಪಾವತಿಸಿದ್ದು ₹ 380 ಕೋಟಿ.

ಸೂಸೇನ್‌ ಅವರು ₹ 400 ಕೋಟಿ  ಬೇಡಿಕೆ ಇಟ್ಟಿದ್ದರು. ಹೃತಿಕ್ ₹380 ಕೋಟಿ ನೀಡಿ ವಿಚ್ಛೇದನ ಪಡೆದರು. ಅನೈತಿಕ ಸಂಬಂಧವೇ ಇವರ ವಿಚ್ಛೇದನಕ್ಕೆ ಕಾರಣ ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು. ಹೃತಿಕ್‌ ನಟಿ ಬಾರ್ಬರಾ ಮೋರಿ ಜತೆಯಲ್ಲಿ ಸಂಬಂಧ ಹೊಂದಿದ್ದರೆ, ಸೂಸೇನ್‌ ಖಾನ್‌ ನಟ ಅರ್ಜುನ್‌ ರಾಂಪಾಲ್‌ ಜತೆಯಲ್ಲಿ ಆತ್ಮೀಯ ಒಡನಾಟ ಹೊಂದಿದ್ದರು ಎಂಬ ಗಾಸಿಪ್ ಕೇಳಿ ಬಂದಿತ್ತು.

ಕರಿಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌

2003ರಲ್ಲಿ ಸಂಜಯ್ ಕಪೂರ್‌ ಅವರನ್ನು  ಮದುವೆಯಾಗಿದ್ದ  ಬಾಲಿವುಡ್ ಚೆಲುವೆ ಕರಿಷ್ಮಾ ಕಪೂರ್ 2016ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನಕ್ಕಾಗಿ ಕರಿಷ್ಮಾ ₹ 7 ಕೋಟಿ ಜೀವನಾಂಶ ಪರಿಹಾರ ಪಡೆದರು ಎಂಬ ಗುಲ್ಲು ಎದ್ದಿತ್ತು. ಇದರ ಜೊತೆಗೆ ಇಬ್ಬರು ಮಕ್ಕಳ ಶಿಕ್ಷಣ ಮತ್ತು ಯೋಗಕ್ಷೇಮಕ್ಕೆ ₹14 ಕೋಟಿ ಪ್ರತ್ಯೇಕವಾಗಿ ಪಡೆದುಕೊಂಡರಂತೆ.

ಅಂದರೆ ಈ ವಿಚ್ಛೇದನಕ್ಕೆ ಮೌಲ್ಯ  ₹ 21 ಕೋಟಿ ಎಂದಾಯಿತು. ಉದ್ಯಮಿ ಸಂಜಯ್‌ ಕಪೂರ್‌ ಜೊತೆಯಲ್ಲಿ 11 ವರ್ಷ ಸುಖ ಸಂಸಾರ ನಡೆಸಿದ್ದ ಕರಿಷ್ಮಾ  2014ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದ್ದರು. ವಿಚ್ಛೇದನದ ಬಳಿಕ ಕರಿಷ್ಮಾ ಕಪೂರ್ ತಂದೆ-ತಾಯಿ ಜತೆಯಲ್ಲಿ ವಾಸವಿದ್ದಾರೆ.


ಸಂಜಯ್‌ ದತ್‌  ಮತ್ತು ರಿಯಾ ಪಿಳ್ಳೈ

‘ಖಳನಾಯಕ್’ ಖ್ಯಾತಿಯ ಸಂಜಯ್ ದತ್‌ 2005ರಲ್ಲಿ ಪತ್ನಿ ರಿಯಾ ಪಿಳ್ಳೈ ಅವರಿಂದ ವಿಚ್ಛೇದನ ಪಡೆದರು. ಆಗ  ರಿಯಾಗೆ ಅವರು ನೀಡಿದ್ದು ₹ 8 ಕೋಟಿ  ಪರಿಹಾರ ಮತ್ತು ಒಂದು ಐಷಾರಾಮಿ ಕಾರು.

ರಿಯಾ ಪಿಳ್ಳೈ ಅವರು ಭಾರತದ ಖ್ಯಾತ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರ ಜೊತೆ ಸಂಬಂಧ ಹೊಂದಿದ್ದರು.  ನಂತರದ ದಿನಗಳಲ್ಲಿ  ಸಂಜಯ್ ದತ್ ಅವರು ಮಾನ್ಯತಾ ಅವರನ್ನು ಮದುವೆಯಾದರು.


ಸೈಫ್‌ ಅಲಿಖಾನ್‌ ಮತ್ತು ಅಮೃತಾ ಸಿಂಗ್‌

ಬಾಲಿವುಡ್‌ ಹಾಟ್ ಫೇವರಿಟ್‌ ಜೋಡಿ ಸೈಫ್‌ ಅಲಿಖಾನ್‌ ಪಟೌಡಿ ಮತ್ತು ಅಮೃತಾ ಸಿಂಗ್‌ ಅವರದ್ದು ಸಹ ದುಬಾರಿ ಮೊತ್ತದ ವಿಚ್ಛೇದನ.  2004ರಲ್ಲಿ ಈ ತಾರಾ ಜೋಡಿ ಬೇರೆಯಾಯಿತು. ಸೈಫ್‌ ಆಲಿಖಾನ್‌ ಅಮೃತಾ ಅವರ ಜೀವನಾಂಶಕ್ಕಾಗಿ ₹ 5 ಕೋಟಿ ಪರಿಹಾರ ನೀಡಿದರು.

ವಿಚ್ಛೇದನಕ್ಕಾಗಿ ಕೋರ್ಟ್‌ನಲ್ಲಿ ಅಮೃತಾ ಇಟ್ಟಿದ್ದ ಎಲ್ಲ ಬೇಡಿಕೆಗಳನ್ನು ಸೈಫ್‌  ಈಡೇರಿಸಿದ್ದರು. ₹ 5 ಕೋಟಿ ಜತೆಗೆ ಒಂದು ಬಂಗಲೆ ಕೊಟ್ಟಿದ್ದಾರೆ. ಮಾತ್ರವಲ್ಲ ಮಗನ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು ₹ 1 ಲಕ್ಷ ನೀಡುತ್ತಿದ್ದಾರೆ.  ನಟಿ ಕರೀನಾ ಕಪೂರ್‌ ಅವರನ್ನು ಮದುವೆಯಾಗಿರುವ ಸೈಫ್‌ಗೆ ಈಗ ಮಗ ಹುಟ್ಟಿದ್ದಾನೆ. ಅವನ ಹೆಸರು ತೈಮೂರ್.


ಪ್ರಭುದೇವ ಮತ್ತು ರಾಮಲತಾ

‘ಕಾದಲನ್’ ಖ್ಯಾತಿನ ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ್‌ ₹25 ಕೋಟಿ ಮೊತ್ತದ ಆಸ್ತಿ ನೀಡಿ ವಿಚ್ಛೇದನ ಪಡೆದುಕೊಂಡರು. 2011ರ ಜುಲೈನಲ್ಲಿ ಪ್ರಭುದೇವ ಮತ್ತು ಪತ್ನಿ ರಾಮಲತಾ ಅವರ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ ನೀಡಿತು.

ರಾಮಲತಾ ಅವರು ಪರಿಹಾರ ಮೊತ್ತವಾಗಿ ₹ 25 ಕೋಟಿ  ಮೊತ್ತದ ಆಸ್ತಿ  ಮತ್ತು ಎರಡು ಕಾರುಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಪ್ರಭುದೇವ ಅವರು ತಮಿಳು ನಟಿ ನಯನತಾರಾ ಅವರನ್ನು ಮದುವೆ ಆಗಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು. ಸದ್ಯ ಪ್ರಭುದೇವ ಮರು ಮದುವೆಯಾಗದೆ ಒಂಟಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT