ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪ್ಕೊ: ಮಿತಿರಹಿತ ಅಡಿಕೆ ಖರೀದಿ

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ತನ್ನ ಸದಸ್ಯರಿಂದ ಮಿತಿರಹಿತ ಅಡಿಕೆ ಖರೀದಿಸಲು ಕ್ಯಾಂಪ್ಕೊ ತೀರ್ಮಾನಿಸಿದ್ದು,  ಈಗಾಗಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೋಟು ರದ್ದತಿಯ ನಂತರ ಮಾರುಕಟ್ಟೆ ಧಾರಣೆಯ ಸ್ಥಿರತೆ ಕಾಯ್ದುಕೊಳ್ಳಲು, ವಾರಕ್ಕೆ ₹24ಸಾವಿರ ಮೌಲ್ಯದ ಅಡಿಕೆ ಖರೀದಿಸಲು ನಿರ್ಧರಿಸಿತ್ತು.

ನಂತರ ಇದೇ 9ರಿಂದ ಖರೀದಿಯ ಮಿತಿಯನ್ನು ತಿಂಗಳಿಗೆ 5 ಕ್ವಿಂಟಲ್‌ಗೆ ನಿಗದಿಗೊಳಿಸಿತ್ತು. ಸಂಸ್ಥೆಯ ಸದಸ್ಯರ ಅಹವಾಲು ಮತ್ತು ತೊಂದರೆಗಳನ್ನು ಪರಿಗಣಿಸಿ, ಖರೀದಿ ಮಿತಿಯನ್ನು ಹಿಂಪಡೆದಿರುವ ಕ್ಯಾಂಪ್ಕೊ, ಮಿತಿರಹಿತ ಖರೀದಿ ಮಾಡುವುದಾಗಿ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT