ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ಸಂಸ್ಥೆ ಮುಖ್ಯಸ್ಥನ ವಿರುದ್ಧ ಬಂಧನ ವಾರೆಂಟ್‌ಗೆ ಮನವಿ

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಸೋಲ್‌: ಲಂಚ ಹಗರಣವೊಂದಕ್ಕೆ ಸಂಬಂಧಿಸಿದಂತೆ ಸ್ಯಾಮ್ಸಂಗ್‌ ಸಂಸ್ಥೆಯ ಅಧ್ಯಕ್ಷರ ಮಗ ಲೀ ಜೆ ಯೊಂಗ್‌ ಅವರನ್ನು ಬಂಧಿಸಬೇಕಾಗಿದ್ದು, ಅವರ ವಿರುದ್ಧ ವಾರೆಂಟ್‌ ಜಾರಿ ಮಾಡುವಂತೆ ಸೋಮವಾರ ದಕ್ಷಿಣ ಕೊರಿಯಾದ ಸಿಯೊಲ್‌ ನ್ಯಾಯಾಲಯಕ್ಕೆ  ಅಧಿಕಾರಿಗಳು ಮನವಿ ಮಾಡಿದ್ದಾರೆ.

‘ನಮ್ಮ ಮನವಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದರೆ ಲೀ ಅವರು ಬಂಧನಕ್ಕೊಳಗಾಗುವ ಸ್ಯಾಮ್ಸಂಗ್‌ ಸಂಸ್ಥೆಯ ಮೊದಲ ಕಾರ್ಯನಿರ್ವಹಣಾಧಿಕಾರಿಯಾಗುತ್ತಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್‌ ಜಿಯುನ್‌ ಹೈ ವಾಗ್ದಂಡನೆಗೆ ಒಳಗಾಗಿದ್ದರು. ಪಾರ್ಕ್‌ ಅವರ ಆಪ್ತ ಚೊಯಿ ಸೂನ್‌ ಸಿಲ್‌ ಅವರು ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT