ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಎಸ್‌ಜಿ ಸದಸ್ಯತ್ವ ಉಡುಗೊರೆಯಲ್ಲ’

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್‌ : ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳನ್ನು ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಗೊಳಿಸಲಾಗದು.  ಎರಡು ದೇಶಗಳ ನಡುವೆ ‘ವಿದಾಯದ ಉಡುಗೊರೆ’ ರೂಪದಲ್ಲಿ ಎನ್‌ಎಸ್‌ಜಿ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಚೀನಾ ಹೇಳಿದೆ.

ಅಧಿಕಾರದಿಂದ ಕೆಳಗಿಳಿಯುತ್ತಿರುವ ಒಬಾಮ ಆಡಳಿತವನ್ನು ಟೀಕಿಸುವ ರೀತಿಯಲ್ಲಿ ಚೀನಾ ಈ ಹೇಳಿಕೆ ನೀಡಿದೆ. ಎನ್‌ಎಸ್‌ಜಿಗೆ ಭಾರತವನ್ನು ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಳಿಸಿಕೊಳ್ಳುವ ಯತ್ನದಲ್ಲಿ ಬೀಜಿಂಗ್‌ ಅಡ್ಡಿಯಾಗಿದೆ ಎಂದು ಒಬಾಮ ಆಡಳಿತ ಹೇಳಿತ್ತು. ಇದಕ್ಕೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.  ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು, ಎನ್‌ಪಿಟಿಗೆ ಸಹಿ ಹಾಕದಿರುವ ಕಾರಣ  ಚೀನಾ ಅಡ್ಡಿ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT