ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಂದು ಆಧ್ಯಾತ್ಮಿಕ ಪ್ರವಚನ ಉದ್ಘಾಟನೆ

Last Updated 17 ಜನವರಿ 2017, 7:45 IST
ಅಕ್ಷರ ಗಾತ್ರ

ದಾವಣಗೆರೆ: ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳ ಸೇವಾ ಬಳಗದಿಂದ ವಿಜಯ ಪುರದ ಸಿದ್ಧೇಶ್ವರ ಸ್ವಾಮೀಜಿಯವರ ಒಂದು ತಿಂಗಳ ಆಧ್ಯಾತ್ಮಿಕ ಪ್ರವಚನ ಉದ್ಘಾಟನೆ ಹರಿಹರ ಮಹಿಳಾ ಕಾಲೇಜು ಆವರಣದ ಗಿರಿಯಮ್ಮ ಆರ್‌. ಕಾಂತಪ್ಪ ಶ್ರೇಷ್ಠಿ ಸಭಾಂಗಣದಲ್ಲಿ ಜ.20ರಂದು ಬೆಳಿಗ್ಗೆ 6.30ಕ್ಕೆ ನಡೆಯಲಿದೆ.

ಜ.20ರಿಂದ ಫೆ.19ರ ವರೆಗೆ ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರ ವರೆಗೆ ಪ್ರವಚನ ನಡೆಯಲಿದೆ. ಬಳಿಕ ದೊಡ್ಡಬಾತಿಯಲ್ಲಿ ಅವರು ಉಳಿದುಕೊಂಡಿರುವ ತಪೋವನದಲ್ಲಿ ನಿರಂತರ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿ ಭಾನುವಾರ ಬೇರೆ ಸ್ವಾಮೀಜಿ ಯವರಿಂದ ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಸೇವಾ ಬಳಗ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಚ್‌. ಪ್ಯಾಟಿ ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಉದ್ಘಾಟನೆಯಲ್ಲಿ ಹರಿಹರ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಐರಣಿ ಹೊಳೆಮಠ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸದ್ಭಕ್ತ ಮಂಡಳಿ, ಹೊಸಳ್ಳಿ ವೇಮನಾನಂದ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದೇಶಾನಂದಜೀ ಮಹಾರಾಜ್‌, ಗುತ್ತೂರು ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮೀಜಿ, ಯಲವಟ್ಟಿ ಯೋಗಾನಂದ ಸ್ವಾಮೀಜಿ, ಲಿಂಗೇಶ್ವರ ದೇವಸ್ಥಾನದ ಶರಣಬಸಲಿಂಗ ಶಿವಯೋಗಿ ಸ್ವಾಮೀಜಿ, ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಅಲ್‌ಹಜ್‌ ಶಂಷುದ್ದೀನ್‌ ಮೌಲಾನಾ, ಮರಿಯಾ ಸದನದ ರೆ.ಫಾ. ಫ್ರಾಂಕ್ಲಿನ್‌ ಡಿಸೋಜಾ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಸೇವಾ ಸಮಿತಿ ಅಧ್ಯಕ್ಷ ಶರದ್‌ ಕೊಣ್ಣೂರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಚ್‌.ಎಸ್‌. ಶಿವಶಂಕರ್‌, ಶಾಮನೂರು ಶಿವ ಶಂಕರಪ್ಪ, ಡಾ.ವೈ.ನಾಗಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್‌, ಹರಿಹರ ನಗರಸಭೆಯ ಅಧ್ಯಕ್ಷೆ ಆಶಾ ಮರಿಯೋಜಿರಾವ್‌, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ದಾವಣಗೆರೆ ಉದ್ಯಮಿ ಬಿ.ಸಿ. ಉಮಾಪತಿ, ನೂತನ ವಿದ್ಯಾಸಂಸ್ಥೆಯ ಮಠಪತಿ, ಮಾನ್ಯತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ನಾಡಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಉಳಿದ ದಿನಗಳಲ್ಲಿ  ಒಂದೂವರೆ ಸಾವಿರ ಮಂದಿ ಸೇರಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ಧೇಶ್ವರ ಶ್ರೀಗಳ ಸೇವಾ ಬಳಗದ ಅಧ್ಯಕ್ಷ ಶರದ್‌ ಕೊಣ್ಣೂರು, ಸತ್ಯನಾರಾಯಣ, ಎಂ.ಜೆ. ನಾರಾಯಣ ಗೌಡ,  ತಿಪ್ಪೇಸ್ವಾಮಿ, ಡಿ.ಹೇಮಂತರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT