ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಲ್ಯಾಣ ಧರ್ಮಗಳ ಗುರಿ

ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ
Last Updated 17 ಜನವರಿ 2017, 8:55 IST
ಅಕ್ಷರ ಗಾತ್ರ

ಅಜ್ಜಂಪುರ: ಭಾರತ ಧರ್ಮ ಭೂಮಿ. ಇಲ್ಲಿ ಹಲವು ಮತ-ಧರ್ಮಗಳಿದ್ದು, ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ ಹಾಗೂ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸುವುದೇ ಆಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣ ಸಮೀಪದ ಬುಕ್ಕಾಂಬುಧಿ ಗ್ರಾಮದಲ್ಲಿ ನಡೆದ ಉಜ್ಜಯಿನಿ ಸಿದ್ದ ಲಿಂಗ ಜಗದ್ಗುರು ಪುಣ್ಯ ಸಂಸ್ಮರಣೋ ತ್ಸವ ಹಾಗೂ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಅವರು ಮಾತನಾಡಿ, ಸಕಲ ಜೀವರಾಶಿಗೂ ಲೇಸನ್ನೆ ಬಯಸಿದ ಪರಮ ತಪೋನಿಧಿ ಉಜ್ಜಯಿನಿ ಜಗದ್ಗುರುಗಳು, ಹಗಲಿ ರುಳು ಎನ್ನದೆ ಸಮಾಜದ ಶ್ರೇಯಸ್ಸಿಗೆ ಶ್ರಮಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಾಕಷ್ಟು ಕಾರ್ಯ ಗಳನ್ನು ಮಾಡಿ, ಜನಮನದ ಉನ್ನತಿಗೆ ಪ್ರಯತ್ನಿಸಿದ್ದರು ಎಂದು ಹೇಳಿದರು.

ಪಂಚಪೀಠಗಳು ಒಗ್ಗೂಡಿ ಸಾಮರಸ್ಯದಿಂದ ನಡೆದಾಗ ಸಮಾಜಕ್ಕೆ ಇನ್ನಷ್ಠು ಒಳಿತು ಮಾಡಬಹುದು. ಪ್ರತಿಯೊಂದು ಪೀಠಗಳು ತಮ್ಮ ಮೂಲ ಪರಂಪರೆಯನ್ನು ಅರಿತು ನಡೆಯಬೇಕು. ಈ ನಿಟ್ಟಿನಲ್ಲಿ ಪಂಚಪೀಠಗಳನ್ನು ಒಗ್ಗೂಡಿಸಲು ತಾವು ಸಕಲ ಪ್ರಯತ್ನಗ ಳನ್ನು ನಡೆಸಿದ್ದು ಪ್ರಯೋಜನವಾಗಿಲ್ಲ, ಕಾಲ ಕೂಡಿಬಂದಾಗ ಎಲ್ಲವು ಒಳಿತಾ ಗುತ್ತದೆ ಎಂದು ನಂಬಿ ನಮ್ಮ ಲೋಕ ಕಲ್ಯಾಣದ ಕಾರ್ಯಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಯಡಿಯೂರು ರೇಣುಕಾ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿ, ಏಪ್ರಿಲ್ 15,16 ರಂದು ತರೀಕೆರೆಯಲ್ಲಿ ರಂಭಾಪುರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ, ಇಷ್ಟಲಿಂಗ ಪೂಜೆ, ಸರಳ-ಸಾಮೂಹಿಕ ವಿವಾಹ, ಧರ್ಮ ಸಭೆ ನಡೆಯಲಿದ್ದು,  ಹೆಚ್ಚಿನ ಭಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ತಾವರೆಕೆರೆಯ ಅಭಿನವ ಸಿದ್ದಲಿಂಗ ಶಿವಚಾರ್ಯರು, ಹುಣಸಘಟ್ಟದ ಗುರು ಮೂರ್ತಿ ಶಿವಾಚಾರ್ಯರು ಬೀರೂರಿನ ರುದ್ರಮುನಿ ಶಿವಾಚಾರ್ಯರು, ಸೇರಿ ದಂತೆ ಹಣ್ಣೆ, ಹುಲಿಕೆರೆ, ಮಳಲಿ, ಬಿಳಿಕಿ, ಶಿವಗಂಗೆ, ಹಾರನಹಳ್ಳಿ, ಮಾದಿಹಳ್ಳಿ, ಅಂಬಲ ದೇವರಹಳ್ಳಿ, ಎಳಸೂರು ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಉಜ್ಜಯಿನಿ ಸಿದ್ದಲಿಂಗೇಶ್ವರ ಸ್ವಾಮಿ ಟ್ರಸ್ಟ್‌ ವೀರಭದ್ರಪ್ಪ, ಸುರೇಶ್, ರಾಜು, ಕಾಂತರಾಜು, ಚಂದ್ರಶೇಖರಪ್ಪ, ಗುರು ಮೂರ್ತಿ, ಕಾಂತರಾಜು, ಮಲ್ಲಿಕಾರ್ಜುನ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT