ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ–ಅಧ್ಯಾತ್ಮದ ಬೆಸುಗೆ ಅಗತ್ಯ

Last Updated 17 ಜನವರಿ 2017, 9:11 IST
ಅಕ್ಷರ ಗಾತ್ರ

ಚಿಂತಾಮಣಿ: ‘ಸಾಹಿತ್ಯದೊಂದಿಗೆ ಅಧ್ಯಾತ್ಮ ಬೆರೆತರೆ ವಿಶಿಷ್ಟ ಅನುಭವ ದೊರೆಯುತ್ತದೆ’ ಎಂದು ಹಿರಿಯ ವೇದಾಂತಿ ಗಡದಾಸನಹಳ್ಳಿ ಈರೇಗೌಡ ಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್‌ ನಗರದ  ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತ ನಾಡಿದರು.

‘ಸಮಾಜ ಬದಲಾವಣೆಗಾಗಿ ವಯೋ ಮಿತಿಯಿಲ್ಲದೆ ಪ್ರತಿಯೊಬ್ಬರೂ ಸಾಹಿತ್ಯಾ ಭ್ಯಾಸದೊಂದಿಗೆ ಅಧ್ಯಾತ್ಮಿಕ ವಿಚಾರ ಗಳನ್ನು ತಿಳಿದು ಕೊಳ್ಳಬೇಕು. ಇತ್ತೀಚೆಗೆ ಜನರಲ್ಲಿ ಅಧ್ಯಾತ್ಮ ವಿಚಾರಗಳನ್ನು ಕಡೆ ಗಣಿಸುತ್ತಿರುವುದು ಸಮಾಜದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದರು.

ನಿವೃತ್ತ ಬ್ಯಾಂಕ್‌ ಅಧಿಕಾರಿ ಶಿವರಾಂ ಮಾತನಾಡಿ, ‘ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲು ಸಾಹಿತ್ಯ ಹಾಗೂ ಸಂಗೀತ ಅಭ್ಯಾಸ ಅಗತ್ಯ. ಹಿರಿಯರು ಮತ್ತು ಕಿರಿಯರು ಎನ್ನದೆ ಎಲ್ಲರಿಗೂ ಸಂಗೀತದ ಜ್ಞಾನ ಅಗತ್ಯವಾಗಿ ಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮಹಾಭಾರತದ ಕುರುಕ್ಷೇತ್ರದ ಯುದ್ದದಲ್ಲಿ ಸೋಲಿಗೀಡಾಗಿದ್ದ ದುರ್ಯೋಧನ ಪ್ರಲಾಪ ಮತ್ತು ನಿಂದನೆ ಗಳನ್ನು ಶಿಕ್ಷಕ ವೆಂಕಟೇಶ್ವರರಾವ್‌ ಸ್ವಾರಸ್ಯವಾಗಿ ಬಣ್ಣಿಸಿದರು.

ಕವಿಗೋಷ್ಠಿಯಲ್ಲಿ ಕೋಲಾರದ ಪಿ.ನಾರಾಯಣಪ್ಪ, ರಾಜೇಶ್ವರಿ, ಭೋಜರಾಜ್‌, ರಮೇಶ್‌, ಮೈಲಾಂಡ್ಲಹಳ್ಳಿ ಅಶ್ವತ್ಥನಾರಾಯಣ, ಶಿಕ್ಷಕ ಸದಾಶಿವ, ಬಾಲಾಜಿ, ಎಂ. ಸುರೇಶ್‌, ವೆಂಕಟೇಶ್ವರ ರಾವ್‌, ಸಿರಿ ಕುಮಾರ್‌, ಕಾಗತಿ ವೆಂಕಟರತ್ನಂ, ಎಸ್‌.ಸಿ.ಶ್ರೀನಿವಾಸರೆಡ್ಡಿ  ಕವನ,  ವಾಚಿಸಿದರು.  ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ ಸ್ವಾಗತಿಸಿದರು. ನಂಜುಂಡೇ ಗೌಡ ನಿರೂಪಿಸಿದರು. ಸಿ.ಎಂ.ಉಮಾ ಶಂಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT