ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮನ ಮೆಚ್ಚುಗೆ ಗಳಿಸಿದ ‘ಆಕೆ’

ಸಿನಿಟ್ರೇಲರ್
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಚಂದನವನದ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿರುವ ನಿರ್ದೇಶಕ ಕೆ.ಎಂ.ಚೈತನ್ಯ ಅವರ ‘ಆಕೆ’ ಸಿನಿಮಾದ ಟ್ರೇಲರ್ ಅನ್ನು ಯುಟ್ಯೂಬ್‌ನಲ್ಲಿ ಎರಡು ಲಕ್ಷ ಮಂದಿ ವೀಕ್ಷಿಸಿದ್ದಾರೆ.
 
‘ಆ ದಿನಗಳು’ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಚೈತನ್ಯ, ನಂತರವೂ ಅನೇಕ ಪ್ರಯೋಗಾತ್ಮಕ ಚಿತ್ರಗಳನ್ನೇ ತೊಡಗಿಕೊಂಡವರು. ಇದೀಗ ‘ಆಕೆ’ ಎನ್ನುವ ಪಕ್ಕಾ ಹಾರರ್‌ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಥ್ರಿಲ್‌ ಅನುಭವ ನೀಡಲು ಮುಂದಾಗಿದ್ದಾರೆ ಚೈತನ್ಯ.
 
ರಾಜಮನೆತನದ ನಂಟಿನ ಯುವತಿಯ ಬಗ್ಗೆ ಲೇಖಕಿ ಕೇಟ್‌ ಕುರಿತ ಪುಸ್ತಕದ ಹೂರಣವೇ ಚಿತ್ರದ ಜೀವಾಳ. ಅಲ್ಲಲ್ಲಿ ನಿರೂಪಣಾ ಧಾಟಿಯಲ್ಲಿರುವಂತೆ ತೋರುವ ಸಿನಿಮಾದ ಟ್ರೇಲರ್, ಪಕ್ಕಾ ಹಾಲಿವುಡ್‌ ಮಾದರಿಯ ಹಾರರ್ ಫೀಲ್ ನೀಡುತ್ತದೆ.
 
ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ, ಅಚ್ಯುತಕುಮಾರ, ಪ್ರಕಾಶ್‌ ಬೆಳವಾಡಿ ಅವರಂಥ ಪ್ರತಿಭಾವಂತ ಕಲಾವಿದರ ಪಡೆಯೇ ಚಿತ್ರದಲ್ಲಿದೆ. ಕಲೈ ಮತ್ತು ಸೂರ್ಯ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಗುರುಕಿರಣ್‌ ಸಂಗೀತ ನಿರ್ದೇಶನವಿದೆ. 
 
ಕತ್ತಲ ರಾತ್ರಿ, ಸಮಾಧಿ, ಆಸ್ಪತ್ರೆ, ಅಲ್ಲಲ್ಲಿ ಭೂತದ ಚೇಷ್ಟೆಗಳನ್ನು ಬಿಂಬಿಸುವ ‘ಆಕೆ’ ಟ್ರೇಲರ್‌ಗೆ ಈಗಾಗಲೇ ವೀಕ್ಷಕರಿಂದ ಪ್ರತಿಕ್ರಿಯೆಗಳೂ  ವ್ಯಕ್ತವಾಗಿವೆ.
‘ವಾವ್ಹ್‌,  ಕನ್ನಡ ಸಿನಿಮಾ ಟ್ರೇಲರ್ ಹೀಗೂ ಇರುತ್ತೆ ಅಂತ ತೋರಿಸಿ ಕೊಟ್ಟಿದ್ದೀರ. ಸಿನಿಮಾನೂ ಹೀಗೆ ಇರಲಿ, ವೇಟಿಂಗ್ ಚಿರು ಬ್ರದರ್’ ಎಂದು  ರವಿ ಎಸ್‌.ಟಿ.  ಪ್ರತಿಕ್ರಿಯಿಸಿದ್ದರೆ, ‘ಸೂಪರ್ ಮೇಕಿಂಗ್, ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ’ ಎಂದು ಸುಮಂತ್ ಸಾಗರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 
ತಮಿಳಿನಲ್ಲಿ ಈಗಾಗಲೇ ಬಂದಿರುವ ನಟಿ ನಯನತಾರಾ ಅಭಿನಯದ ‘ಮಾಯಾ’ ಸಿನಿಮಾವನ್ನೇ ‘ಆಕೆ’ ಹೋಲುತ್ತದೆ ಎಂಬ ಗಾಳಿಸುದ್ದಿಯೂ ಇದೆ. ಒಟ್ಟಿನಲ್ಲಿ ಕನ್ನಡಕ್ಕೊಂದು ಪಕ್ಕಾ ಥ್ರಿಲ್ಲರ್, ಹಾರರ್‌ ಸಿನಿಮಾ ಬರುತ್ತಿರುವುದು ಸಿನಿಪ್ರಿಯರಿಗಂತೂ ಸಂತಸ ತಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT