ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ಊಟದ ತಾಣ ‘ದೊನ್ನೆ ಬಿರಿಯಾನಿ ಮನೆ’

ರಸಾಸ್ವಾದ
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಚರ್ಚ್‌ಸ್ಟ್ರೀಟ್‌ನಲ್ಲಿರುವ ‘ದೊನ್ನೆ ಬಿರಿಯಾನಿ ಮನೆ’ ಮಧ್ಯಾಹ್ನದ ಹೊತ್ತಿಗೆ ಗಿಜಿಗುಡುತ್ತಿರುತ್ತದೆ. ಎಂ.ಜಿ.ರಸ್ತೆ,  ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರಸ್ತೆಯ  ವಿವಿಧ ಕಚೇರಿಗಳಲ್ಲಿ ದುಡಿಯುತ್ತಿರುವ ಅನೇಕರು  ಮಧ್ಯಾಹ್ನದ ಊಟಕ್ಕೆ ‘ದೊನ್ನೆ ಬಿರಿಯಾನಿ ಮನೆ’ಯನ್ನು ಅವಲಂಬಿಸಿದ್ದಾರೆ. ಕಡಿಮೆ ಬೆಲೆಗೆ ರುಚಿಕಟ್ಟಾದ ಬಿರಿಯಾನಿ, ಮಾಂಸಾಹಾರಿ ಊಟ ಸಿಗುವುದು ಇದಕ್ಕೆ ಕಾರಣ.

ಮಂಡ್ಯ ಮೂಲದ ಸ್ವಾಮಿ ಅವರು ಬಿರಿಯಾನಿ ಮನೆಯ ಮಾಲೀಕ. ಒಂದು ವರ್ಷದ ಹಿಂದೆ ಆರಂಭಿಸಿರುವ ಬಿರಿಯಾನಿ ಮನೆಯಲ್ಲಿ ದಿನಕ್ಕೆ ಸುಮಾರು 150 ಪ್ಲೇಟ್‌ ಬಿರಿಯಾನಿ ವ್ಯಾಪಾರವಾಗುತ್ತಿದೆಯಂತೆ. ಬಿರಿಯಾನಿ ಅಷ್ಟೇ ಅಲ್ಲ, ಪರೋಟ ಕೂಡಾ ಇದೆ. ಪರೋಟದ ಜೊತೆ ಚಿಕನ್‌ಕರಿ, ಮಟನ್‌ ಚಾಪ್ಸ್‌, ಎಗ್‌ ಮಸಾಲಾ ಇರುತ್ತದೆ. ಪೆಪ್ಪರ್‌ ಚಿಕನ್‌, ಚಿಕನ್‌ ಕ್ಷತ್ರಿಯ ಕಬಾಬ್‌(ಗ್ರೀನ್‌ ಕಬಾಬ್‌), ಮೀನಿನ ಸೀಸನ್‌ನಲ್ಲಿ ಫಿಷ್ ಲಾಲಿಪಾಪ್‌ ಮತ್ತು ಫಿಷ್‌ ಕಬಾಬ್‌ ಕೂಡಾ ಸಿಗುತ್ತದೆ.
 
ಮಧ್ಯಾಹ್ನ 12ರಿಂದ ಸಂಜೆ 3ರವರೆಗೆ  ಮತ್ತು ಸಂಜೆ 7ರಿಂದ 10ರವರೆಗೆ ಬಿರಿಯಾನಿ ಮನೆ ತೆರೆದಿರುತ್ತದೆ. ಸೋಮವಾರ ಮಾತ್ರ ಮಧ್ಯಾಹ್ನ 3 ಗಂಟೆಯ ನಂತರ ರಜೆ.
 
‘ನಮ್ಮಲ್ಲಿ ಚಿಕನ್‌ ಮತ್ತು ಮಟನ್‌ ದೊನ್ನೆ ಬಿರಿಯಾನಿ ಇದೆ. ಚಿಕನ್‌ ಬಿರಿಯಾನಿಗೆ ಹೆಚ್ಚು ಬೇಡಿಕೆ ಇದೆ. ದೊನ್ನೆ ಬಿರಿಯಾನಿಗೆ ನಾವೇ ಮಸಾಲೆ ಪುಡಿ ಸಿದ್ಧಪಡಿಸುತ್ತೇವೆ.  ಒಂದು ಬಾರಿಗೆ ಐದು ಕೇಜಿ ಬಿರಿಯಾನಿ  ಮಾತ್ರ ತಯಾರಿಸುತ್ತೇವೆ. ದೊನ್ನೆ ಬಿರಿಯಾನಿ ತಾಜಾ ಇದ್ದರೆ ಮಾತ್ರ  ರುಚಿ ಅದ್ಭುತವಾಗಿರುತ್ತದೆ. ಹಾಗಾಗಿ ಒಂದೇ ಸಲಕ್ಕೆ ಹೆಚ್ಚು ಬಿರಿಯಾನಿ ತಯಾರಿಸುವುದಿಲ್ಲ’  ಎನ್ನುತ್ತಾರೆ ದೊನ್ನೆ ಬಿರಿಯಾನಿ ಮನೆ ರಾಜೇಶ್‌.
 
ದೊನ್ನೆ ಬಿರಿಯಾನಿ ಮನೆಯ ಮತ್ತೊಂದು ಶಾಖೆ ವಸಂತನಗರದಲ್ಲಿ ಇದೆ. ಅಲ್ಲಿ  ಚಿಕನ್‌ ಬಿರಿಯಾನಿಗೆ ₹100, ಮಟನ್‌ ಬಿರಿಯಾನಿಗೆ ₹140. 
 
ಪಾರ್ಸೆಲ್‌ ವ್ಯವಸ್ಥೆ
‘ಬಿರಿಯಾನಿ ಪಾರ್ಸೆಲ್‌ ವ್ಯವಸ್ಥೆ  ಕೂಡಾ ಇದೆ.  ದಿನಕ್ಕೆ ಸುಮಾರು 40ರಷ್ಟು ಬಿರಿಯಾನಿ ಪಾರ್ಸೆಲ್‌ಗೆ ಆರ್ಡರ್‌ ಇರುತ್ತದೆ. ಮೂರು ಕಿ.ಮೀ ವ್ಯಾಪ್ತಿಯವರೆಗೆ ಉಚಿತವಾಗಿ ಪಾರ್ಸೆಲ್‌ ವಿತರಿಸುತ್ತೇವೆ. ಕನಿಷ್ಠ ₹300ಕ್ಕಿಂತ ಹೆಚ್ಚು ಮೌಲ್ಯದ ಆರ್ಡರ್‌ ಮಾಡುವವರಿಗೆ ಮಾತ್ರ ಪಾರ್ಸೆಲ್‌ ನೀಡುತ್ತೇವೆ’ ಎಂದು   ರಾಜೇಶ್‌ ಹೇಳುತ್ತಾರೆ.
 
ಫ್ಯಾಮಿಲಿ ಪ್ಯಾಕ್
‘ಫ್ಯಾಮಿಲಿ ಪ್ಯಾಕ್‌ ಕಾಂಬೊ’ ಇಲ್ಲಿನ ವಿಶೇಷ. ಚಿಕನ್‌ ಬಿರಿಯಾನಿಯ ಕಾಂಬೊದಲ್ಲಿ  ನಾಲ್ಕು ಬಿರಿಯಾನಿ, ಒಂದು ಪೆಪ್ಪರ್  ಚಿಕನ್‌, ಒಂದು ಚಿಕನ್‌ ಕ್ಷತ್ರಿಯ ಕಬಾಬ್‌, 500 ಮಿ.ಲೀ. ತಂಪು ಪಾನೀಯ ಇರುತ್ತದೆ.
 
ಮಟನ್‌ ಕಾಂಬೊದಲ್ಲಿ ನಾಲ್ಕು ಮಟನ್‌ ಬಿರಿಯಾನಿ, ಒಂದು ಮಟನ್‌ ಚಾಪ್ಸ್‌, ಒಂದು ಪೆಪ್ಪರ್‌ ಚಿಕನ್‌ ಮತ್ತು 500 ಮಿ.ಲೀ. ತಂಪು ಪಾನೀಯ ಇರುತ್ತದೆ.   ಆರ್ಡರ್‌ ಮಾಡಲು ವಾಟ್ಸ್ಆ್ಯಪ್‌ ಸಂಖ್ಯೆ: 7259724393/ 9019814549. ವಿಳಾಸ: ನಂ.48, ಟ್ರಿಂಫ್‌ ಟವರ್‌, ಎಂಪಯರ್‌ ಹೋಟೆಲ್‌ ಬಳಿ, ಚರ್ಚ್‌ ರಸ್ತೆ.
 
**
ದರ ವಿವರ 
* ಚಿಕನ್‌ ಬಿರಿಯಾನಿ–₹120
* ಮಟನ್‌ ಬಿರಿಯಾನಿ–₹150
* ಚಿಕನ್‌ ಕಾಂಬೊ–₹600
* ಮಟನ್‌ ಕಾಂಬೊ–₹800
* ಪರೋಟಾ (ಚಿಕನ್‌, ಮಟನ್‌, ಎಗ್‌, ವೆಜ್‌ ಕರಿ)– ₹80
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT