ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಪರೀಕ್ಷೆ ಸಾಮೂಹಿಕ ನಕಲು: ಆರೋಪ

Last Updated 18 ಜನವರಿ 2017, 5:55 IST
ಅಕ್ಷರ ಗಾತ್ರ

ಬೀದರ್‌:  ನಗರದ ಬಿಲಾಲ್ ಕಾಲೊನಿಯಲ್ಲಿರುವ ಶಾಸಕ ರಹೀಂ ಖಾನ್ ಸಹೋದರನ ಜಾಸ್ಮಿನ್‌ ಬಿಇಡಿ ಕಾಲೇಜು ಹಾಗೂ ಕಾಂಗ್ರೆಸ್ ಮುಖಂಡ ರೋಹಿದಾಸ್ ಘೋಡೆ ಅವರ ರಾಜೀವ್ ಗಾಂಧಿ ಬಿಇಡಿ ಕಾಲೇಜಿನಲ್ಲಿ ಮಂಗಳವಾರ ಬಿಇಡಿ ಪ್ರಥಮ ಸೆಮಿಸ್ಟರ್‌ ಪರೀಕ್ಷೆಯಲ್ಲಿ ನಕಲು ನಡೆದಿದೆ.

ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜನವರಿ 10 ರಿಂದ ಪರೀಕ್ಷೆಗಳು ನಡೆಯುತ್ತಿವೆ. ಮಂಗಳವಾರ ನಡೆದ  ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ  ಸಾಮೂಹಿಕ ನಕಲು ನಡೆಸಲು ಕೆಲವರು ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಜನವರಿ 12 ರಂದು ಜಾಸ್ಮಿನ್‌ ಬಿಇಡಿ ಕಾಲೇಜಿನಲ್ಲಿ ಒಡಿಶಾ ಮೂಲದ  ವಿದ್ಯಾರ್ಥಿನಿಯ ಬಳಿ ಚೀಟಿ ಪತ್ತೆಯಾಗಿದೆ. ಇಷ್ಟು ಬಿಟ್ಟರೆ ಸಾಮೂಹಿಕ ನಕಲು ನಡೆದಿಲ್ಲ. ಚೀಟಿ ಪತ್ತೆಯಾದ ತಕ್ಷಣ ಅವಳನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕಳಿಸಲಾಗಿದೆ. ಈ ಘಟನೆ ಮಂಗಳವಾರ ನಡೆದಿಲ್ಲ ಎಂದು ಜಾಸ್ಮಿನ್‌ ಬಿಇಡಿ ಕಾಲೇಜು ಅಧ್ಯಕ್ಷ ಅಜೀಜ್‌ ಖಾನ್‌ ತಿಳಿಸಿದ್ದಾರೆ.

ಸಾಮೂಹಿಕ ನಕಲು ನಡೆಯುತ್ತಿರುವ ದೂರು ಬಂದಿತ್ತು. ಪರೀಕ್ಷಾ ಜಾಗೃತ ದಳವನ್ನು ಸಂಪರ್ಕಿಸಿ ತಕ್ಷಣ ಮಾಹಿತಿ ಪಡೆದಿದ್ದೇನೆ. ಸಾಮೂಹಿಕ ನಕಲು ನಡೆದಿಲ್ಲ. ಆದರೆ ಒಬ್ಬ ವಿದ್ಯಾರ್ಥಿನಿ ನಕಲು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾಳೆ. ಅವಳ ವಿರುದ್ಧ  ಕ್ರಮಕೈಗೊಳ್ಳಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಸಿ.ಎಸ್‌.ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಲಾಗುವುದು. ತಪ್ಪು ಕಂಡು ಬಂದರೆ ತಕ್ಷಣದಿಂದ ಜಾರಿಗೆ ಬರುವಂತೆ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT