ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸೆಲೆಂಟಾಗಿ ಎಕ್ಸೆಲ್ ಬಳಸಿ

ಕಲಿಯೋಣ ಬನ್ನಿ
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಮೈಕ್ರೋಸಾಫ್ಟ್ ಆಫೀಸ್‌ನ ಭಾಗವಾಗಿ ದೊರೆಯುವ ಎಕ್ಸೆಲ್ ಎಂಬ ತಂತ್ರಾಂಶದ ಸಾಧ್ಯತೆಗಳು ಬಹಳಷ್ಟು. ಆದರೆ ಹೆಚ್ಚಿನ ಬಳಕೆದಾರರು ಇದನ್ನು ಕೇವಲ ಕೋಷ್ಠಕಗಳನ್ನು ಸೃಷ್ಟಿಸುವುದಕ್ಕಷ್ಟೇ ಬಳಸುತ್ತಾರೆ. ಹೆಚ್ಚೆಂದರೆ ಕೆಲವು ಬಗೆಯ ಚಾರ್ಟ್‌ಗಳನ್ನು ಇದರ ಮೂಲಕ ಸೃಷ್ಟಿಸುವುದನ್ನು ತಿಳಿದಿರುತ್ತಾರೆ.

ಆದರೆ ಈ ತಂತ್ರಾಂಶದ ವೃತ್ತಿಪರ ಬಳಕೆ ಬಹಳ ವಿಶಾಲವಾದುದು. ಇದನ್ನು ತಿಳಿಸುವುದಕ್ಕಾಗಿಯೇ ಮೈಕ್ರೋಸಾಫ್ಟ್ ಅಕಾಡೆಮಿ ಹಲವು ಕೋರ್ಸ್‌ಗಳನ್ನು ರೂಪಿಸಿದೆ. ದೊಡ್ಡ ಪ್ರಮಾಣದ ದತ್ತಾಂಶವನ್ನು ಈ ತಂತ್ರಾಂಶ ಬಳಸಿ ವಿಶ್ಲೇಷಿಸಬಹುದು. ಉದಾಹರಣೆಗೆ ಕಂಪೆನಿಯೊಂದರ ನೌಕರರ ಹಾಜರಾತಿಯಂಥ ವಿಚಾರಗಳು. ಹಾಗೆಯೇ ಜನಸಂಖ್ಯೆಯ ಏರಿಳಿತಗಳನ್ನು ಹೇಳುವ ಹತ್ತಾರು ವರ್ಷಗಳ ದಾಖಲೆಯಂಥವನ್ನು ಈ ತಂತ್ರಾಂಶ ಬಳಸಿ ವಿಶ್ಲೇಷಿಸಲು ಸಾಧ್ಯವಿದೆ. ಆದರೆ ಇದನ್ನು ಕಲಿಯಬೇಕಾಗುತ್ತದೆ.

ಇದಕ್ಕಾಗಿಯೇ ಮೈಕ್ರೋಸಾಫ್ಟ್ ಒಂದು ಕೋರ್ಸ್‌ ರೂಪಿಸಿದೆ. ದತ್ತಾಂಶ ವಿಜ್ಞಾನ ಪ್ರಮಾಣ ಪತ್ರ ಯೋಜನೆಯ ಭಾಗವಾಗಿ ರೂಪುಗೊಂಡಿರುವ ಈ ಕೋರ್ಸ್ ಸಂಪೂರ್ಣ ಉಚಿತ. ಆರು ವಾರಗಳಷ್ಟು ಅಧ್ಯಯನಾವಧಿಯನ್ನು ಬೇಡುವ ಈ ಕೋರ್ಸ್ ಅನ್ನು ನಿಮ್ಮದೇ ವೇಗದಲ್ಲಿ ಪೂರ್ಣಗೊಳಿಸಬಹುದು. ನೋಂದಾಯಿಸಿಕೊಳ್ಳುವುದಕ್ಕೆ ಇಲ್ಲಿರುವ ಲಿಂಕ್ ಬಳಸಿ: http://bit.ly/2jr996h

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT