ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸಿರಿ ಸಂಕ್ರಾಂತಿ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ರಾಜಾಜಿನಗರದ ಗ್ರಾಮೀಣ ಅಂಗಡಿಯು ಈಚೆಗೆ ರಾಮಮಂದಿರ ಮೈದಾನದಲ್ಲಿ ಮೂರು ದಿನಗಳ ‘ಗ್ರಾಮೀಣ ಸಿರಿ ಸಂಕ್ರಾಂತಿ ಸುಗ್ಗಿ ಸಂಭ್ರಮ’ ಸಿರಿಧಾನ್ಯಗಳ ಪ್ರದರ್ಶನ ಹಮ್ಮಿಕೊಂಡಿತ್ತು.

‘ಸಿರಿಧಾನ್ಯಗಳ ಮಹತ್ವ ಮತ್ತು ಪ್ರಯೋಜನ’ ವಿಷಯ ಕುರಿತು ವಿವಿಧ ಆಹಾರ ತಜ್ಞರ ಲೇಖನಗಳ ಸಂಗ್ರಹ ಹಾಗೂ ‘ಉತ್ತಮ ಆರೋಗ್ಯಕ್ಕಾಗಿ ಆಹಾರ ಜಾಗೃತಿ’  ಸಿ.ಡಿ. ಬಿಡುಗಡೆ ಮಾಡಲಾಯಿತು.

ಅಪ್ಪಗೆರೆ ತಿಮ್ಮರಾಜು ಅವರು ಜಾನಪದ ಗೀತೆಗಳನ್ನು ಹಾಡಿ ಪ್ರದರ್ಶನಕ್ಕೆ ರಂಗು ತುಂಬಿದರು. ಶಾಸಕ ಎಸ್‌.ಸುರೇಶ್‌ ಕುಮಾರ್‌ ಮೇಳವನ್ನು ಉದ್ಘಾಟಿಸಿದರು.

ರಾಜಾಜಿನಗರ ಹಾಗೂ ಜಯನಗರ ಗ್ರಾಮೀಣ ಅಂಗಡಿಯಲ್ಲಿ ಜ.30ರವರೆಗೆ ಸಿರಿಧಾನ್ಯಗಳು, ಖಾದಿ, ಕೈಮಗ್ಗ ಉತ್ಪನ್ನಗಳ ಮೇಲೆ ಶೇ30ರವರೆಗೂ ರಿಯಾಯಿತಿ ಘೋಷಿಸಿದ್ದಾರೆ.
 

*
ಸಂಕ್ರಾಂತಿ ಸಡಗರ
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸುಂಕದಕಟ್ಟೆಯ ಓಂ ಸಾಯಿ ಕಾಲೇಜಿನಲ್ಲಿ ಜಾನಪದ ಹಬ್ಬ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಜೊತೆಗೆ ಜನಪದ ಆಟಗಳಾದ ಹಗ್ಗಜಗ್ಗಾಟ, ಮಡಕೆ ಹೊಡೆಯುವ ಆಟ, ಲಗೋರಿ ಆಟ ಆಡಿ ಸಂಭ್ರಮಿಸಿದರು.

*
‘ಗುರುವಂದನಾ’ ನೃತ್ಯ ಕಾರ್ಯಕ್ರಮ
ಪದ್ಮಿನಿ ರಾಮಚಂದ್ರ ಅವರ ನೆನಪಿನಲ್ಲಿ ‘ಗುರುವಂದನಾ’ ನೃತ್ಯ  ಕಾರ್ಯಕ್ರಮ ನೃಪತುಂಗಾ ರಸ್ತೆಯಲ್ಲಿರುವ ಯವಾನಿಕ ಸಭಾಂಗಣದಲ್ಲಿ ನಡೆಯಿತು. ಕೃತಿಕಾ, ಅನ್ವಿತಾ ಪ್ರಿಯಾ ಹಾಗೂ ವೈಷ್ಣವಿ ಭಟ್ ನೃತ್ಯ ಪ್ರಸ್ತುತ ಪಡಿಸಿದರು.

ಶ್ರೀ ಲಕ್ಷ್ಮಿ ನೃತ್ಯ ಸಂಯೋಜನೆ ಮಾಡಿದ್ದರು. ಗಜೇಂದ್ರ ಮೋಕ್ಷ, ಅಹಲ್ಯೆ ಬಗ್ಗೆ ಅನ್ವಿತಾ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಕಾಳಿ ಸ್ತುತಿ ಮಾಡುವ ನೀಲಪದ್ಮ ನೃತ್ಯ ರೂಪಕವನ್ನು ಕೃತಿಕಾ ಪ್ರಸ್ತುತ ಪಡಿಸಿದರೆ, ಕೃಷ್ಣ ಬಗ್ಗೆ ವೈಷ್ಣವಿ ಭಟ್ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಮೂರು ನೃತ್ಯಗಾರ್ತಿಯರು ಸಮೂಹನ ನೃತ್ಯದೊಂದಿಗೆ ಏಕವ್ಯಕ್ತಿ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT