ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾತ್ಮರು ಜಾತಿಗೆ ಸೀಮಿತ ಸಲ್ಲ’

Last Updated 19 ಜನವರಿ 2017, 5:31 IST
ಅಕ್ಷರ ಗಾತ್ರ

ಹುಮನಾಬಾದ್: ಸಮಾಜ ಸುಧಾರಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ,  ಇಡೀ ಮನುಕುಲ ಅವರ ನೀಡಿದ ಆದರ್ಶಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಘಾಟಬೋರಾಳ್‌ ಗ್ರಾಮದ ಭೋವಿ ವಡ್ಡರ ಓಣಿಯಲ್ಲಿ ಭಾನುವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರು, ಮಹಾತ್ಮ ಬುದ್ಧ, ಡಾ.ಅಂಬೇಡ್ಕರ್‌ ಒಳಗೊಂಡಂತೆ ಎಲ್ಲರೂ ಮಾನವೀಯ ಮೌಲ್ಯಗಳನ್ನೇ ಹೇಳಿಕೊಟ್ಟಿದ್ದಾರೆ. ಕಾರಣ ಜಯಂತಿ ಆಚರಣೆಗಳು ಭಾವಚಿತ್ರ ಪೂಜೆ ಹಾಗೂ ಮೆರವಣಿಗೆಗೆ ಸೀಮಿತಗೊಳ್ಳದೇ ನಿಜ ಜೀನವದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಹಾತ್ಮರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಅಭಿಜೀತ್‌ ಪಾಟೀಲ, ಜ್ಞಾನೇಶ್ವರ ಭೋಸ್ಲೆ, ಶಿವಾಜಿರಾವ ರಘು, ವಿಜಯಕುಮಾರ ಪಾಟೀಲ, ವಿಷ್ಣು ಜಮಾದಾರ್, ಲಕ್ಷ್ಮಣ ಪವಾರ, ರಮೇಶ ಹೆಂಬಾಡೆ, ಉದ್ಭವ ಭುಜಂಗೆ, ಶಿವಾಜಿರಾವ ದಾಡ್ಗೆ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಬೀತಾ ಭುಜಂಗೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಪ್ರಭುರಾವರೆಡ್ಡಿ, ಅನುಸೂಯ್ಯ ಭೋಸ್ಲೆ, ದತ್ತಾ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಬುಳ್ಳಾ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ 51ಕ್ಕೂ ಮಾತೆಯರು ತುಂಬಿದ ಕಳಶಹೊತ್ತು ಶೋಭಾಯಾತ್ರೆ ನಡೆಸಿದರು. ಬಳಿಕ ಭಜನೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT