ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಸಮಾಜ ಆಗ್ರಹ

ನ್ಯಾ. ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನ ಬೇಡ: ಮನವಿ ಸಲ್ಲಿಕೆ
Last Updated 19 ಜನವರಿ 2017, 5:52 IST
ಅಕ್ಷರ ಗಾತ್ರ

ಮುದ್ದೇಬಿಹಾಳ:  ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಂತೆ ಆಗ್ರಹಿಸಿ ತಾಲ್ಲೂಕಿನ ಭೋವಿ ವಡ್ಡರ ಸಮಾಜದ ನೂರಾರು ಸದಸ್ಯರು ತಹಶೀಲ್ದಾರ್ ಎಂ.ಎ.ಎಸ್ ಬಾಗವಾನ ಅವರಿಗೆ ಸಲ್ಲಿಸಿದರು.

ನ್ಯಾ. ಸದಾಶಿವ ಆಯೋಗದ ವರದಿ ಜಾರಿಯಾದರೆ ಭೋವಿ ವಡ್ಡರ, ಲಂಬಾಣಿ, ಭಜಂತ್ರಿ, ಕೊರಚ, ಕೋರಮ ಇನ್ನಿತರ ಪರಿಶಿಷ್ಟ ಜಾತಿ, ಸಮಾಜಗಳ ಮೀಸಲಾತಿಯಿಂದ 99 ಪರಿಶಿಷ್ಟ ಜಾತಿಗಳು ಹೊರಗುಳಿಯುತ್ತವೆ. ಇದು ಜಾರಿಯಾದರೆ ಜಾತಿ, ಜಾತಿಗಳಲ್ಲಿ ಒಡಕು ಮೂಡುತ್ತದೆ, ಜಾತಿಗಳಲ್ಲಿ ವಿಷ ಬೀಜ ಬಿತ್ತುವ ತಂತ್ರಗಾರಿಕೆಯನ್ನು ಕೆಲ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ದೂರಿದರು.

‘ಈ ವರದಿ ಜಾರಿಯಿಂದ ಕೇವಲ ಎರಡು ಜಾತಿಯವರಿಗೆ ಅನುಕೂಲ ವಾಗುತ್ತದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಆಯೋಗದ ವರದಿ ಬಳಸಿಕೊಳ್ಳು ತ್ತಿದ್ದಾರೆ. ಅಲ್ಲದೆ ಎಸ್.ಸಿ ಸಮುದಾಯದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬಾರದು ಎಂಬ ದುರುದ್ದೇಶ ಈ ವರದಿ ಜಾರಿಯಾಗಲಿ ಎಂಬ ಒತ್ತಾಯದ ಹಿಂದಿದೆ’ ಎಂದೂ ಟೀಕಿಸಿದರು.

ಸದರಿ ವರದಿ ಜಾರಿಯನ್ನು ತಡೆ ಹಿಡಿಯುವಂತೆ ಒತ್ತಾಯಿಸಿ ಮುಂಬರುವ ದಿನಗಳಲ್ಲಿ  ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ನಾಲತವಾಡ, ಪಂಡಿತ ಇರಕಲ್, ಶ್ರೀನಿವಾಸ ಗೌಂಡಿ, ಶಿವಾನಂದ ವಡ್ಡರ, ರವಿ ನಾಲತವಾಡ, ನಾಗಪ್ಪ ವಡ್ಡರ, ಹಣಮಂತ ಬಾಗೇ ವಾಡಿ, ಲಕ್ಷ್ಮಣ ವಡ್ಡರ, ಸದಾನಂದ ವಾಲಿಕಾರ, ಎನ್.ಎಚ್.ವಡ್ಡರ, ಶೇಖರ ಢವಳಗಿ, ರಾಜು ವಡ್ಡರ, ಮುದಕಪ್ಪ ಗೂಡಿಹಾಳ, ಸಿದ್ದರಾಮಪ್ಪ ಹಡಲಗೇರಿ, ಸಂಜು ಬಾಗೆವಾಡಿ, ಹಣಮಂತ ಹಡಲಗೇರಿ, ಹೊನ್ನಪ್ಪ ದೊಡಮನಿ, ರಾಘವೇಂದ್ರ ಹುಲಗೇರಿ, ಶಿವಾನಂದ ಗೌಂಡಿ, ಬಾಗಪ್ಪ ಬೈರವಾಡಿಗಿ  ಇದ್ದರು.

*
ನ್ಯಾ. ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡದಂತೆ ನಡೆದಿರುವ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುವುದು.
–ಪರಶುರಾಮ ನಾಲತವಾಡ,
ಅಧ್ಯಕ್ಷ, ಭೊವಿ ಸಮಾಜದ ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT