ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಲಯನ್ಸ್‌ನಿಂದ ರಕ್ತ ತಪಾಸಣಾ ಶಿಬಿರ

Last Updated 19 ಜನವರಿ 2017, 6:17 IST
ಅಕ್ಷರ ಗಾತ್ರ

ಕೊಪ್ಪ: ಸ್ಥಳೀಯ ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿಯಿಂದ ಮಂಗಳವಾರ ಲಯನ್ಸ್ ಜಿಲ್ಲಾ ಗವರ್ನರ್ ಎಂ.ಅರುಣ್ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮದ ಅಂಗವಾಗಿ ವಿವಿಧ ಸೇವಾ ಕಾರ್ಯ ಕ್ರಮಗಳನ್ನು ಅಧ್ಯಕ್ಷೆ ಪ್ರಭಾ ಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಬಾಳಗಡಿಯ ಪ್ರಥಮದರ್ಜೆ ಕಾಲೇ ಜಿನ 1,200 ವಿದ್ಯಾರ್ಥಿಗಳ ರಕ್ತದ ತಪಾಸಣೆ, ಗುಂಪು ವರ್ಗೀಕರಣ, ರಕ್ತದಾನ ಶಿಬಿರ,  ಮೇಲಿನಪೇಟೆಯ ಕುವೆಂಪು ವೃತ್ತದಲ್ಲಿ ಮಾರ್ಗಸೂಚಿ ಫಲಕ ಅಳವಡಿಕೆ, ಅರಣ್ಯ ಇಲಾಖೆಯ ಬಾಲವನ ದುರಸ್ತಿ, ಚಿಟ್ಟಿಕೊಡಿಗೆಯ ಬುದ್ದಿಮಾಂದ್ಯ ಮಕ್ಕಳ ಆಶ್ರಮಕ್ಕೆ ₹5 ಸಾವಿರ ದೇಣಿಗೆ, ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಲಕ್ಕವಳ್ಳಿ ಮಂಜಪ್ಪ ನಾಯ್ಕ್ ಸ್ಮಾರಕ ಲಯನ್ಸ್ ಸೇವಾ ಭವನ ದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಪ್ರಭಾ ಪ್ರಕಾಶ್ ಮಾತನಾಡಿ, ‘ಸಹ್ಯಾದ್ರಿ ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಛ ಭಾರತ್ ಆಂದೋಲನದಡಿ ಪ್ರಥಮ ದರ್ಜೆ ಕ್ರೀಡಾಂಗಣ ಸಂಪೂರ್ಣ ಸ್ವಚ್ಛ ಗೊಳಿಸಲಾಗಿದೆ. ಹಸಿವು ಮುಕ್ತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಪ್ರತೀ ಕಾರ್ಯಕ್ರಮದಲ್ಲಿ ಬಡವರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಹುಲುಮಕ್ಕಿಯ ಮಾ ಕುಟೀರ ಬುದ್ದಿಮಾಂದ್ಯ ಮಕ್ಕಳ ಆಶ್ರ ಮಕ್ಕೆ ಪ್ರತಿ ತಿಂಗಳು ₹2 ಸಾವಿರ ದೇಣಿಗೆ ನೀಡಲಾಗುತ್ತಿದ್ದು, ಬಸವಾ ನಿಯ ವೃದ್ಧಾಶ್ರಮಕ್ಕೆ ₹11.500 ವೆಚ್ಚದಲ್ಲಿ ಇನ್‍ವರ್ಟರ್ ಅಳವಡಿಸಲಾಗಿದೆ’ ಎಂದರು.

‘ರಾಜ್ಯಮಟ್ಟದ ಸಾಧನೆ ಮಾಡಿದ ಬಿಸಿಎಂ ಹಾಸ್ಟೆಲ್‌ನ ಇಬ್ಬರು ಕ್ರೀಡಾ ಪಟುಗಳಿಗೆ ₹3 ಸಾವಿರ ವೆಚ್ಚದಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಲಾಗಿದೆ. ಪ್ರತಿಭಾ ಪುರ ಸ್ಕಾರ, ಸಾಧಕರಿಗೆ ಸನ್ಮಾನ, ಗ್ರಾಮೀಣ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ಹದಿಹರೆಯದ ಸಮಸ್ಯೆಗಳ ಬಗ್ಗೆ ಜಾಗೃತಿ ಶಿಬಿರ, ನೇತ್ರ ಚಿಕಿತ್ಸೆ, ದಂತ ಚಿಕಿತ್ಸಾ ಶಿಬಿರ, ಸಾರ್ವ ಜನಿಕರಿಗಾಗಿ ಹೃದ್ರೋಗ, ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ಮಾತನಾಡಿ, ‘ನಮ್ಮ ಲಯನ್ಸ್ ಜಿಲ್ಲೆಯಲ್ಲಿ ‘ಅಸೆಂಟ್ ಟು ಗ್ಲೋರಿ’ ಘೋಷ ವಾಕ್ಯ ದಡಿ ಸೇವಾ ಚಟುವಟಿಕೆ ಹಮ್ಮಿಕೊಳ್ಳ ಲಾಗಿದೆ. ನೇತ್ರಚಿಕಿತ್ಸೆಗೆ ಆದ್ಯತೆಯ ಜತೆಗೆ ಪುತ್ತೂರು ತಾಲ್ಲೂಕಿನ ಈಶ್ವರ ಮಂಗಲದ ಪಂಚಲಿಂಗೇಶ್ವರ ಕಾಲೇಜಿಗೆ ₹35 ಲಕ್ಷ ವೆಚ್ಚದಲ್ಲಿ ತರಗತಿ ಕೊಠಡಿಗಳ ನಿರ್ಮಾಣ, ಮಂಗಳೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇ-ಲೈಬ್ರೆರಿ ಸ್ಥಾಪನೆ ಮಾಡಲಾಗುವುದು ’ ಎಂದರು.

ಲಯನ್ಸ್ ವಲಯಾಧ್ಯಕ್ಷ ಎಚ್.ಆರ್. ರತ್ನಾಕರ್, ಖಜಾಂಚಿ ಸುಧಾ ಅಶೋಕ್, ಪ್ರಮುಖರಾದ ಎಲ್.ಎಂ. ಪ್ರಕಾಶ್, ಇಂದಿರಾ ಅರುಣ್ ಶೆಟ್ಟಿ, ಡಾ. ನಟರಾಜ್, ಡಾ. ಅನಿತಾ ನಟರಾಜ್, ಎಚ್.ಎಸ್. ಕಳಸಪ್ಪ, ಗೋಪಾಲ ಗೌಡ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT