ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾವಲೋಕನ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
52 ಆಕ್ಷೇಪ
ಕೇಂದ್ರ ಸರ್ಕಾರ ಜಾರಿ ಮಾಡಿರುವ ರೇರಾ (ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಅಂಡ್ ಡೆವಲಪ್‌ಮೆಂಟ್ ಆ್ಯಕ್ಟ್‌) ಕಾಯ್ದೆಯ ಮಾರ್ಗಸೂಚಿ ಅನುಸರಿಸಿ ಮಹಾರಾಷ್ಟ್ರ ಸರ್ಕಾರ ರಚಿಸುವ ಮಾರ್ಗಸೂಚಿಗಳಿಗೆ ಮುಂಬೈ ಗ್ರಾಹಕ ಪಂಚಾಯಿತಿ (ಎಂಜಿಪಿ) 52 ಆಕ್ಷೇಪಗಳನ್ನು ಸಲ್ಲಿಸಿದೆ.
 
ಈ ಮಾರ್ಗಸೂಚಿಗಳು ಮೂಲ ಕಾಯ್ದೆಯ ಆಶಯಕ್ಕೆ ಧಕ್ಕೆ ತರುವಂತಿವೆ. ಬಿಲ್ಡರ್‌ಗಳ ಹಿತವನ್ನೇ ಲಕ್ಷ್ಯದಲ್ಲಿ ಇರಿಸಿಕೊಂಡಿವೆ. ಗ್ರಾಹಕರ ಒಳಿತನ್ನು ನಿರ್ಲಕ್ಷಿಸಲಾಗಿದೆ ಎಂಬುದು ಎಂಜಿಪಿಯ ಆರೋಪ.
 
**
ಹೂಡಿಕೆಗೆ ಲೋಧಾ ಫಂಡ್
ನಿರ್ಮಾಣ ಮತ್ತು ಸ್ಮಾರ್ಟ್‌ ಸಿಟಿ ಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿರುವ ನವೋದ್ಯಮಗಳಲ್ಲಿ ಹೂಡಿಕೆ ಮಾಡಲೆಂದು ‘ಲೋಧಾ ಗ್ರೂಪ್’ ಪ್ರತ್ಯೇಕ ಹೂಡಿಕೆ ನಿಧಿ (ಇನ್‌ವೆಸ್ಟ್‌ಮೆಂಟ್ ಫಂಡ್) ತೆಗೆದಿರಿಸಿದೆ. ಆರಂಭಿಕ ಸಂಚಿತ ನಿಧಿಯ ಮೊತ್ತು ₹50 ಕೋಟಿ.
 
ದೇಶದ ಪ್ರಮುಖ ರಿಯಲ್‌ ಎಸ್ಟೇಟ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಲೋಧಾ ಗ್ರೂಪ್ ನವೋದ್ಯಮಗಳಿಗೆ ಬಂಡವಾಳ ಒದಗಿಸುವುದರ ಜೊತೆಗೆ ವ್ಯಾಪಾರಿ ಅವಕಾಶಗಳು, ಉದ್ಯಮಿಗಳ ಸಂಪರ್ಕ ಮತ್ತು ತರಬೇತಿಯನ್ನು ಒದಗಿಸುವುದಾಗಿ ತಿಳಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT