ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಕನಸುಗಳನ್ನು ಮರಳಿ ತರುತ್ತೇವೆ’

ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ
Last Updated 20 ಜನವರಿ 2017, 17:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಇಸ್ಲಾಮ್‌ ಉಗ್ರವಾದವನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ಕಿತ್ತೊಗೆಯಲಾಗುವುದು’ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

‘ನಾವು ನಮ್ಮ ಉದ್ಯೋಗ ಮರಳಿ ತರುತ್ತೇವೆ. ನಾವು ನಮ್ಮ ಗಡಿಗಳನ್ನು ಮರಳಿ ತರುತ್ತೇವೆ. ನಾವು ನಮ್ಮ ಸಂಪತ್ತನ್ನು ಮರಳಿ ತರುತ್ತೇವೆ. ನಾವು ನಮ್ಮ ಕನಸುಗಳನ್ನು ಮರಳಿ ತರುತ್ತೇವೆ’ ಎಂದು ಟ್ರಂಪ್‌ ಹೇಳಿದರು.

‘ನಾವು ಕಪ್ಪುವರ್ಣೀಯರಾಗಿರಲಿ, ಕಂದು ಬಣ್ಣದವರಾಗಿರಲಿ ಅಥವಾ ಬಿಳಿಯರಾಗಿರಲಿ ನಮ್ಮಲ್ಲಿ ಹರಿಯುತ್ತಿರುವುದು ಕೆಂಪು ರಕ್ತ’ ಎಂದು ತಿಳಿಸಿದರು.

‘ಇಂದಿನಿಂದ ಎಲ್ಲದರಲ್ಲೂ ಅಮೆರಿಕವೇ ಮೊದಲನೇ ಸ್ಥಾನದಲ್ಲಿರಬೇಕು. ರಾಷ್ಟ್ರದ ಪುನರ್‌ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದರು.

‘ಕೇವಲ ಭಾಷಣ ಮಾಡಿ ಕೆಲಸ ಮಾಡದ ರಾಜಕಾರಣಿಗಳನ್ನು ನಾವು ಒಪ್ಪುವುದಿಲ್ಲ. ನಾವೆಲ್ಲರೂ ಒಂದೇ ದೇಶ. ಗಾಡ್‌ ಬ್ಲೆಸ್‌ ಅಮೆರಿಕ’ ಎಂದು ಹೇಳಿದರು.

ಟ್ರಂಪ್‌ ಬೈಬಲ್‌ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಟ್ರಂಪ್‌ ಪ್ರಮಾಣ ವಚನಕ್ಕೂ ಮೊದಲು ಮೈಕ್‌ ಪೆನ್ಸ್‌ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT