ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮೂರ ಹಬ್ಬ’ ಕರಾವಳಿ ಉತ್ಸವ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಜ.21ರಿಂದ ಜ.22ರವರೆಗೆ ‘ನಮ್ಮೂರ ಹಬ್ಬ 2017’ ಕರಾವಳಿ ಉತ್ಸವ ಆಯೋಜಿಸಿದೆ.

ಶನಿವಾರ (ಜ.21) ಬೆಳಿಗ್ಗೆ 10.30ಕ್ಕೆ ಭುಜಂಗ ಕೊರಗ ಅವರಿಂದ ಕಾರ್ಯಕ್ರಮ ಉದ್ಘಾಟನೆ. ಆಹಾರೋತ್ಸವ–ಜಿ.ಶ್ರೀನಿವಾಸರಾವ್‌, ನಮ್ಮೂರ ಸಂತೆ– ಕೆ. ಚಂದ್ರಶೇಖರ್‌, ಫೋಟೊ ಸಂತೆ– ಮಾಲತಿ ಮತ್ತು ಸೋಮಶೇಖರ್‌, ಬಯಲಾಟ–ಸುಕೇಶ ಹೆಗ್ಡೆ, ಸೆಲ್ಫಿ ಮನೆ–ದಿನೇಶ್‌ ವೈದ್ಯ ಅಂಪಾರು, ಅಧ್ಯಕ್ಷತೆ– ಪ್ರಮೋದ್‌ ಮಧ್ವರಾಜ್‌.  
 
ಮಧ್ಯಾಹ್ನ 3ರಿಂದ ‘ಮುದ್ದು ರಾಧೆ ಮುದ್ದು ಕೃಷ್ಣ’ ಮೂರು ವರ್ಷದೊಳಗಿನ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ.  ಮಧ್ಯಾಹ್ನ 4ರಿಂದ ಗಾಳಿಪಟ ಸ್ಪರ್ಧೆ. ಸಂಜೆ 6ಕ್ಕೆ ಸಿಟಿ ಗೈಸ್‌ ಗುರುಪುರ ತಂಡದಿಂದ ಕರಾವಳಿ ವೈಭವ ವಿಶೇಷ ನೃತ್ಯ ರೂಪಕ. ಹಾಡು ಹಬ್ಬ–ವಿನಯ್‌ ನಾಡಿಗ್‌, ಸುಪ್ರಿಯಾ ರಘುನಂದನ್‌, ಸಾನ್ವಿಶೆಟ್ಟಿ, ಅಭಿನವ ಭಟ್‌. ಹಿಮ್ಮೇಳ–ಮೆಲ್ಲೋಟ್ರೀ. ಮರಳು ಚಿತ್ರಕಲೆ–ರಾಘವೇಂದ್ರ ಹೆಗಡೆ, ಕನ್ನಡ ರ್‌್ಯಾಪ್‌– ಚಂದನ್‌ ಶೆಟ್ಟಿ.
 
ಕಿರೀಟ ಪ್ರಶಸ್ತಿ ಪ್ರದಾನ: ಡಾ.ಬಿ.ವಿ. ಆಚಾರ್ಯ, ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ, ವಿಶೇಷ ಗೌರವ– ಗಣೇಶ್‌ ಕುಂಭಾಶಿ, ರವಿಶೆಟ್ಟಿ.
 
ಭಾನುವಾರ (ಜ.22) ಬಯಲಾಟ–ನಮ್ಮೂರ ಹಬ್ಬದ ಕ್ರೀಡೋತ್ಸವ.
ಮಧ್ಯಾಹ್ನ 2 ರಿಂದ 3 ಮಕ್ಕಳಾಟ– ಚಿತ್ರಕಲಾ ಸ್ಪರ್ಧೆ.
5ರಿಂದ 10 ವರ್ಷದೊಳಗಿನ ಮಕ್ಕಳಿಗೆ: ವಿಷಯ–ಕರಾವಳಿಯ ಪ್ರಕೃತಿ.
10ರಿಂದ 16 ವರ್ಷದೊಳಗಿನ ಮಕ್ಕಳಿಗೆ: ವಿಷಯ–ಕರಾವಳಿಯ ಕಲಾ ಪ್ರಕಾರಗಳು. ಮನರಂಜನಾ ಕ್ರೀಡೆಗಳು.
17ರಿಂದ 50 ವರ್ಷದೊಳಗಿನವರಿಗಾಗಿ ದೊಡ್ಡಾಟ. ಜೋಡಾಟ– ಆದರ್ಶ ದಂಪತಿಗಳು.
 
ಸಂಜೆ 6ರಿಂದ ರಂಗಸ್ಥಳದಲ್ಲಿ ಸಾಂಸ್ಕೃತಿಕ ಹಬ್ಬ. ಕರಾವಳಿಯ ಕಲಾವಿದರಿಂದ ನೃತ್ಯೋತ್ಸವ. ಎಂ.ಡಿ. ಪಲ್ಲವಿ ಅವರಿಂದ ಗಾಯನ. ಡ್ರಾಮಾ ಜೂನಿಯರ್‌ನಲ್ಲಿ ಮಿಂಚಿದ ಅಚಿಂತ್ಯ, ಮಹೇಂದ್ರ, ತುಷಾರ್‌, ಸೂರಜ್‌ ಅವರಿಂದ ‘ನಮ್ಮೂರ್‌ ಡ್ರಾಮಾ’. ಸರವಣ ಧನಪಾಲ್‌ ಅವರಿಂದ ವಿಶೇಷ ನೃತ್ಯ. 
 
ಧೀಂ ಕಿಟ: ಕರಾವಳಿ ಮತ್ತು ಪಾಶ್ಚಾತ್ಯ ವಾದ್ಯಗಳ ಜುಗಲ್‌ಬಂದಿ. ಸಂಯೋಜನೆ– ರವಿ ಬಸ್ರೂರ್‌, ಚೆಂಡೆ–ಕೋಟ ಶಿವಾನಂದ ತಂಡ, ಡೋಲು– ಗಣೇಶ ಕುಂಭಾಶಿ ತಂಡ, ರಿದಂ– ಪ್ರದ್ಯುಮ್ನ ಸೊರಬ ತಂಡ. 
 
ಅತಿಥಿಗಳು– ಜಯಪ್ರಕಾಶ್‌ ಹೆಗ್ಡೆ, ರವಿ ಹೆಗಡೆ, ಜೋಗಿ, ಜಗನ್ನಾಥ ಪೈ, ಮಣೂರು ವಾಸುದೇವ ಮಯ್ಯ, ಯಜ್ಞನಾರಾಯಣ ಕಮ್ಮಾಜೆ, ಎ.ವಿ. ನಾವಡ, ವಿ.ಕೆ. ಮೋಹನ್‌, ಬಿ. ಸೋಮಶೇಖರ್‌, ಸದಾಶಿವ ಶೆಣೈ, ಭಾವನಾ, ಪ್ರವೀಣ್‌ ಶೆಟ್ಟಿ, ವಿನು ಬಳಂಜ, ವಿಜಯಲಕ್ಷ್ಮೀ ಶಿಬರೂರು.
 
ಸ್ಥಳ–ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ (ಶಾಲಿನಿ ಗ್ರೌಂಡ್‌), ಜಯನಗರ 5ನೇ ಬ್ಲಾಕ್‌.
 
ಮಾಹಿತಿಗೆ: www.nammurahabba.com
 
**
ಶನಿವಾರ ಬೆಳಿಗ್ಗೆ 10.30ಕ್ಕೆ ಕಾರ್ಟೂನ್‌ ಹಬ್ಬವಿರುತ್ತದೆ. ಉದ್ಘಾಟನೆಯನ್ನು ‘ಪ್ರಜಾವಾಣಿ’ ಪತ್ರಿಕೆಯ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ ಮಾಡಲಿದ್ದಾರೆ. ಹಬ್ಬದಲ್ಲಿ ಕುಂದಾಪುರದ 20ಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರರ ವ್ಯಂಗ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
 
ನಕ್ಕುನಗಿಸುವ ಕಾರ್ಟೂನ್‌ಗಳು, ಸ್ಥಳದಲ್ಲಿ ಕ್ಯಾರಿಕೇಚರ್‌ ರಚಿಸುವುದು, ಕ್ಯಾರಿಕೇಚರ್‌ ಸ್ಪರ್ಧೆ, ಸೆಲ್ಫಿ ಕಾರ್ನರ್‌, ಕಾರ್ಟೂನ್‌ಗಳಿಗೆ ಅಡಿಬರಹ ಬರೆಯುವ ಸ್ಪರ್ಧೆಯೂ ಇರುತ್ತದೆ. ನೋಟು ರದ್ದತಿ ಕುರಿತ ಕಾರ್ಟೂನ್‌ ಪುಸ್ತಕಗಳ ಬಿಡುಗಡೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT