ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬೈಕ್‌ ಬೆಲೆ ₹33 ಲಕ್ಷ!

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಐಷಾರಾಮಿ  ಮೋಟಾರ್ ಸೈಕಲ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಇಂಡಿಯನ್ ಮೋಟಾರ್ ಸೈಕಲ್‌ ಕಂಪೆನಿಯು ಎರಡು ಹೊಸ ದುಬಾರಿ ಬೈಕ್‌ಗಳನ್ನು  ಗುರುವಾರ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

₹33 ಲಕ್ಷ ಬೆಲೆಯ ಚೀಫ್‌ಟೇನ್‌ ಡಾರ್ಕ್‌ ಹಾರ್ಸ್‌ ಮತ್ತು ₹31.55 ಲಕ್ಷದ ಸ್ಪ್ರಿಂಗ್‌ಫೀಲ್ಡ್‌  ಕಣ್ಣು ಕುಕ್ಕುವ ಬೈಕ್‌ಗಳನ್ನು ಐಷರ್‌ ಪೋಲಾರಿಸ್‌ ಪ್ರೈವೇಟ್‌ ಲಿಮಿಟೆಡ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಂಕಜ್‌ ದುಬೆ ಅನಾವರಣಗೊಳಿಸಿದರು.  ‘ಸಾಂಪ್ರದಾಯಿಕ ಶೈಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಈ ಎರಡೂ ಬೈಕ್‌ ದೀರ್ಘ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿವೆ’ ಎಂದರು.

ಆಕ್ರಮಣಕಾರಿ ಜಾಗತಿಕ ಶೈಲಿಯ ಬೈಕ್‌ಗಳು 1811 ಸಿ.ಸಿ ಸಾಮರ್ಥ್ಯದ  ಅತ್ಯಾಧುನಿಕ ಎರಡು ‘ಥಂಡರ್‌ ಸ್ಟ್ರೋಕ್‌ 111’ ಎಂಜಿನ್‌ ಹೊಂದಿದ್ದು, ಗಂಟೆಗೆ ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಓಡುತ್ತವೆ.

ಇಂಧನ ಕ್ಷಮತೆ ಹೊಂದಿದ್ದು 20 ರಿಂದ 30 ಕಿ.ಮೀ ಮೈಲೇಜ್‌ ನೀಡುತ್ತವೆ.  360 ರಿಂದ 391 ಕೆ.ಜಿ. ತೂಕ ಹೊಂದಿವೆ. ಎಕ್ಸ್‌ವಿಸಿಟ್‌ ಮೋಟೊ ಎಲ್‌ಎಲ್‌ಪಿ ಅಧ್ಯಕ್ಷ ಮತ್ತು ಸಿಇಒ ಅನಿಲ್‌ ಶಂಕರ್‌  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT