ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸೈನಾ ನೆಹ್ವಾಲ್‌

ಜಯರಾಮ್‌ಗೆ ಸೋಲು
Last Updated 20 ಜನವರಿ 2017, 19:51 IST
ಅಕ್ಷರ ಗಾತ್ರ

ಸರವಾಕ್‌, ಮಲೇಷ್ಯಾ: ಮಂಡಿನೋವಿನಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆದ ಬಳಿಕ ಮಹತ್ವದ ಟೂರ್ನಿ ಆಡುತ್ತಿರುವ ಭಾರತದ ಸೈನಾ ನೆಹ್ವಾಲ್‌ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ.

ವಿಶ್ವದ ಅಗ್ರರ್‍ಯಾಂಕ್‌ನ ಆಟಗಾರ್ತಿ ಯಾಗಿದ್ದ ಸೈನಾ ಇಲ್ಲಿ ನಡೆಯುತ್ತಿರುವ  ಮಲೇಷ್ಯಾ ಮಾಸ್ಟರ್ಸ್‌  ಗ್ರ್ಯಾಂಡ್‌ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ದ್ದಾರೆ. ಆದರೆ ಭಾರತದ ಇನ್ನೊಬ್ಬ ಆಟ ಗಾರ ಅಜಯ್‌ ಜಯರಾಮ್ ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–15, 21–14ರಲ್ಲಿ ಇಂಡೊನೇಷ್ಯಾದ ಫಿಟ್ರಿಯಾನಿ ಎದುರು ಗೆಲುವು ಪಡೆದರು. ವಿಶ್ವ ರ್‍ಯಾಂಕ್‌ನಲ್ಲಿ 40ನೇ ಸ್ಥಾನ ಹೊಂದಿ ರುವ ಫಿಟ್ರಿಯಾನಿ ಎದುರು ಸೈನಾ ಗೆಲುವು ಪಡೆದಿದ್ದು  ಮೂರನೇ ಬಾರಿ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ  ರಿಯೊ ಒಲಿಂ ಪಿಕ್ಸ್‌ನಲ್ಲಿ ಗುಂಪು ಹಂತದಲ್ಲಿಯೇ ನಿರಾಸೆ ಕಂಡಿದ್ದರು. ಹೋದ ವರ್ಷದ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಚಾಂಪಿ ಯನ್‌ ಆಗಿದ್ದರು. ನಾಲ್ಕರ ಘಟ್ಟದ ಹೋರಾಟದಲ್ಲಿ ಅವರು ಹಾಂಕಾಂಗ್‌ನ ಯಿಪ್‌ ಪುಯಿ ಯಿನ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಸೈನಾ ಮತ್ತು ಯಿಪ್‌ ಅವರು ಇದು ವರೆಗೂ ಒಟ್ಟು ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತದ ಆಟಗಾರ್ತಿ 6–2ರ ಗೆಲುವಿನ ದಾಖಲೆ ಹೊಂದಿದ್ದಾರೆ. 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಇವರು ಕೊನೆಯ ಬಾರಿಗೆ ಪಂದ್ಯವಾಡಿದ್ದರು.

ಮೊದಲ ಗೇಮ್‌ ಆರಂಭದಿಂದಲೇ ಚುರುಕಿನ ಆಟಕ್ಕೆ ಒತ್ತು ಕೊಟ್ಟ ಸೈನಾ ಮೊದಲು 4–0ರಲ್ಲಿ ಮುನ್ನಡೆ ಪಡೆದರು. ನಂತರ ಹಂತ ಹಂತವಾಗಿ ಚುರುಕಿನ ಸ್ಮಾಷ್‌ ಬಾರಿಸುತ್ತಾ ಎದುರಾಳಿ ಆಟ ಗಾರ್ತಿ ಮೇಲೆ ಒತ್ತಡ ಹೇರಿ ಮುನ್ನಡೆ ಯನ್ನು 11–6ರಲ್ಲಿ ಹೆಚ್ಚಿಸಿಕೊಂಡರು.

ಒಂದು ಹಂತದಲ್ಲಿ ಇಬ್ಬರೂ ಆಟಗಾರ್ತಿಯರು 12–12ರಲ್ಲಿ ಸಮಬಲ ಸಾಧಿಸಿ ದಾಗ ಪಂದ್ಯ ರೋಚಕ ಅಂತ್ಯ ಕಾಣುವ ನಿರೀಕ್ಷೆಯಿತ್ತು. ಆದರೆ ಸೈನಾ ನಾಲ್ಕು ಪಾಯಿಂಟ್ಸ್‌ ಕಲೆ ಹಾಕಿ ಮುನ್ನಡೆಯನ್ನು 16–12ರಲ್ಲಿ ಹೆಚ್ಚಿಸಿಕೊಂಡು ಗೆಲುವಿನ ಹಾದಿ ಸುಗಮ ಮಾಡಿಕೊಂಡರು.

ನಿರಾಸೆ: ಅಜಯ್‌ ಜಯರಾಮ್‌ 13–21, 8–21ರಲ್ಲಿ ಆ್ಯಂಟನಿ ಸಿನಿಸುಕ ಎದುರು ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT