ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಹಕ್ಕು ಮೊಟಕು:ಆರೋಪ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ
Last Updated 21 ಜನವರಿ 2017, 6:06 IST
ಅಕ್ಷರ ಗಾತ್ರ

ಉಡುಪಿ:  ಕೇಂದ್ರ ಸರ್ಕಾರದ ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿರುವು ದನ್ನು ವಿರೋಧಿಸಿ ಹಾಗೂ ಕನಿಷ್ಠ ಕೂಲಿ ಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯು ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ. ವಿಶ್ವನಾಥ ರೈ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು ಎಷ್ಟು ಮೊಟಕುಗೊಳಿಸಲು ಸಾಧ್ಯವಾಗುತ್ತದೆ ಯೋ, ಸವಲತ್ತುಗಳನ್ನು ಎಷ್ಟು ರದ್ದು ಮಾಡಲು ಸಾಧ್ಯವೋ ಹಾಗೂ ಉದ್ಯೋ ಗದ ಭರವಸೆಯನ್ನು ಎಷ್ಟು ಕಡಿಮೆ ಮಾಡಲು ಸಾಧ್ಯವಿದೆಯೋ ಅಂತಹ ಎಲ್ಲ ಕಾರ್ಮಿಕ ವಿರೋಧಿ ನೀತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿವೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರವು ಅಂತರರಾ ಷ್ಟ್ರೀಯ ಮಾರುಕಟ್ಟೆಯ ಆಡಳಿತಕ್ಕೆ ಒಳ ಪಟ್ಟು, ವಿದೇಶಿ ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇಶದ ಕಾರ್ಮಿಕರ, ರೈತರ, ಯುವ ಜನರ ಹಿತಾಸಕ್ತಿಗಳನ್ನು ಬಲಿಕೊಡುತ್ತಿದೆ.

ವಿದೇಶಿ ಬಂಡವಾಳಗಾರರಿಗೆ ಕಡಿಮೆ ಖರ್ಚಿನಲ್ಲಿ ಕಾರ್ಮಿಕರು ಸಿಗಬೇಕು. ಅವರು ಲಾಭ ಮಾಡಬೇಕು. ಆ ಮೂಲಕ ವಿದೇಶಿ ರಾಷ್ಟ್ರಗಳು ಶ್ರೀಮಂತ ವಾಗಬೇಕು ಎಂಬ ಧೋರಣೆ ಇದಾಗಿದೆ. ನಮ್ಮ ದೇಶದ ಬಗ್ಗೆ ಕಾಳಜಿ ತೋರದೆ, ಹೊಸ ವಿಕೃತ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದರು.

ಸರ್ಕಾರವು ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಕ್ಷರ ದಾಸೋಹ ಯೋಜನೆ ಯಡಿಯಲ್ಲಿ ಹಾಗೂ ಆಶಾ ಕಾರ್ಯಕರ್ತ ರಾಗಿ ದುಡಿಯುವ ನೌಕರರನ್ನು ಗೌರವ ಪೂರ್ಣ ಕಾರ್ಯಕರ್ತರೆಂದು ಪರಿಗಣಿಸಿ ದೆಯೇ ವಿನಹ ಅವರಿಗೆ ಯಾವುದೇ ಸವ ಲತ್ತುಗಳನ್ನು ನೀಡುತ್ತಿಲ್ಲ. ಸರಿಯಾದ ಕಾನೂನು ಹಕ್ಕುಗಳನ್ನು ನೀಡುತ್ತಿಲ್ಲ. ಖಾಯಂ ಉದ್ಯೋಗದ ಭರವಸೆಯನ್ನು ನೀಡದೆ ವಂಚಿಸುತ್ತಿದೆ ಎಂದು ದೂರಿದರು.

ಉಡುಪಿ ಜಿಲ್ಲಾ ಅಂಗನವಾಡಿ ನೌಕ ರರ ಸಂಘದ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಇಂದು ದೇಶದಲ್ಲಿ 7,076 ವಿವಿಧ ಯೋಜನೆಗಳಲ್ಲಿ 27 ಲಕ್ಷದಷ್ಟು ಮಹಿಳೆಯರು ದುಡಿಯು ತ್ತಿದ್ದಾರೆ. ರಾಜ್ಯದಲ್ಲಿ 203 ಯೋಜನೆಗ ಳಲ್ಲಿ 61 ಸಾವಿರ ಅಂಗನವಾಡಿ ಕೇಂದ್ರ ಗಳಲ್ಲಿ ಸುಮಾರು 1,22,225 ನೌಕರರು ದುಡಿಯುತ್ತಿದ್ದಾರೆ.

ಆದರೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಕಳೆದ ನಾಲ್ಕು ವರ್ಷಗ ಳಿಂದ ಕನಿಷ್ಠ ಕೂಲಿಯನ್ನು ಕೊಡದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳ ಜಾರಿಗೆ ಮಾತ್ರ ಗುಲಾ ಮರಂತೆ ದುಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ. ಶಂಕರ್‌, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಉಮೇಶ್‌ ಕುಂದರ್‌, ಎಸ್‌. ಕವಿ ರಾಜ್‌, ನಳಿನಿ, ಉಡುಪಿ ಜಿಲ್ಲಾ ಅಂಗನ ವಾಡಿ ನೌಕರರ ಸಂಘದ ಅಧ್ಯಕ್ಷೆ ಗೀತಾ ಶೆಟ್ಟಿ ಮೊದಲಾದವರು ಇದ್ದರು.

*
ಮಹಿಳಾ ಶ್ರಮಿಕರ ಸೇವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಕನಿಷ್ಠ ಕೂಲಿಯನ್ನು ನೀಡದೆ ಗುಲಾಮರಂತೆ ದುಡಿಸಿಕೊಳ್ಳುತ್ತಿವೆ.
–ಸುಶೀಲಾ ನಾಡ,
ಉಡುಪಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT