ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಬಂಧಿಯಾಗಿದ್ದ ಭಾರತೀಯ ಸೈನಿಕ ಬಿಡುಗಡೆ

Last Updated 21 ಜನವರಿ 2017, 11:28 IST
ಅಕ್ಷರ ಗಾತ್ರ

ನವದೆಹಲಿ: ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಪ್ರವೇಶಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ಯೋಧ ಚಂದು ಬಾಬುಲಾಲ್‌ ಚೌಹಾಣ್‌ ಅವರನ್ನು ಪಾಕಿಸ್ತಾನ ಶನಿವಾರ ಬಿಡುಗಡೆ ಮಾಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ 29ರಂದು ಶಸ್ತ್ರಸಜ್ಜಿತ ಸೈನಿಕ ಬಾಬುಲಾಲ್‌ ಚೌಹಾಣ್‌  ಕಣ್ಣು ತಪ್ಪಿನಿಂದ ಪಾಕಿಸ್ತಾನ ಪ್ರವೇಶಿಸಿದ್ದರು.

37 ರಾಷ್ಟ್ರೀಯ ರೈಫಲ್‌ ಪಡೆಯಲ್ಲಿ ನಿಯೋಜಿತನಾಗಿದ್ದ ಚೌಹಾಣ್‌, ಭಾರತ  ಸೇನೆ ಉಗ್ರರ ಬಿಡಾರಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿದ ಕೆಲವು ಗಂಟೆಗಳ ನಂತರದಲ್ಲಿ ಜಮ್ಮು–ಕಾಶ್ಮೀರದ ಮೆಂಧಾರ್‌ ವಲಯದಿಂದ ಪ್ರಮಾದವಶಾತ್‌ ಪಾಕಿಸ್ತಾನದ ಗಡಿ ಪ್ರವೇಶಿದ್ದರು.

ವಾಘಾ ಗಡಿ ಚೆಕ್‌ಪೋಸ್ಟ್ ಮೂಲಕ ಸೈನಿಕ ಚೌಹಾಣ್‌ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT