ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಪಿಂಡದಲ್ಲಿ 530 ಗ್ರಾಂ ತೂಕದ ಕಲ್ಲು ಪತ್ತೆ: ಶಸ್ತ್ರ ಚಿಕಿತ್ಸೆ

Last Updated 23 ಜನವರಿ 2017, 6:05 IST
ಅಕ್ಷರ ಗಾತ್ರ

ಉಡುಪಿ: ರೋಗಿಯ ಮೂತ್ರಪಿಂಡ ದಲ್ಲಿದ್ದ ಗಾತ್ರದಲ್ಲಿ ಟೆನಿಸ್‌ ಬಾಲ್‌ಗಿಂತ ದೊಡ್ಡದಾದ ಕಲ್ಲನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಯೂರಾಲಜಿ ವಿಭಾಗದ ವೈದ್ಯರ ತಂಡ ತೆರೆದ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದೆ.

ಕಾರ್ಕಳದ ನಿವಾಸಿ 46 ವರ್ಷದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಲು ತೊಂದರೆ ಆಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದಾಗ 10x8 ಸೆಂಟಿ ಮೀಟರ್ ಗಾತ್ರದ ಕಲ್ಲು ಅವರ ಮೂತ್ರ ಪಿಂಡದಲ್ಲಿರುವುದು ಗೊತ್ತಾ ಯಿತು. ಕೂಡಲೇ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿ 530 ಗ್ರಾಂ ತೂಕದ ಕಲ್ಲನ್ನು ಹೊರ ತೆಗೆಯಲಾಗಿದ್ದು, ರೋಗಿ ಚೇತರಿ ಸಿಕೊ ಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಉಪ ಅಧೀ ಕ್ಷಕ ಡಾ. ಪದ್ಮರಾಜ ಹೆಗ್ಡೆ ತಿಳಿಸಿದ್ದಾರೆ.

ಮೂತ್ರಕೋಶದ ಕಲ್ಲು ಗರಿಷ್ಠ 100 ಗ್ರಾಂ ತೂಕ ಇರುವುದು ಸಾಮಾನ್ಯ. 800 ಗ್ರಾಂ ತೂಕದ ಕಲ್ಲನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿರುವ ದಾಖಲೆ ದೇಶದಲ್ಲಿದೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ನೋಡಿದರೆ ಚೀನಾ, ಹಂಗೇರಿ ಹಾಗೂ ಬ್ರೆಜಿಲ್ ದೇಶಗಳಲ್ಲಿ 800 ಗ್ರಾಂಗಿಂತ ಅಧಿಕ ತೂಕದ ಕಲ್ಲನ್ನು ಹೊರ ತೆಗೆದಿರುವ ಉದಾಹರಣೆ ಇದೆ. ಆದರೆ ಮಣಿಪಾಲ್‌ಆಸ್ಪತ್ರೆಗೆ ಸಂಬಂಧಿ ಸಿದಂತೆ ಇದೊಂದು ಪ್ರಮುಖ ಹಾಗೂ ವಿಶಿಷ್ಟ ಪ್ರಕರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಾಧನ ಸಲಕರಣೆ ಹಾಗೂ ನುರಿತ ವೈದ್ಯರ ತಂಡ ಇರುವುದರಿಂದ ಇಂತಹ ಅಪರೂಪದ ಯಶಸ್ವಿ ಶಸ್ತ್ರ ಚಿಕಿತ್ಸೆ ಸಾಧ್ಯವಾಗಿದೆ. ಡಾ. ಜೀಶನ್ ಹಮೀದ್, ಡಾ. ಮಂಜುನಾಥ್ ಮತ್ತು ಅರಿವಳಿಕೆ ವಿಭಾಗದ ಪ್ರಾಧ್ಯಾಪಕ ಡಾ. ರಾಮಕುಮಾರ್ ಅವರ ತಂಡದ ಕಾರ್ಯ ಶ್ಲಾಘನೀಯ ಎಂದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ. ದಯಾನಂದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT