ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಕೇಂದ್ರದಲ್ಲಿ ಬಯಲೇ ಮೂತ್ರಾಲಯ

Last Updated 23 ಜನವರಿ 2017, 10:42 IST
ಅಕ್ಷರ ಗಾತ್ರ

ಮಂಡ್ಯ: ದೇಶದಾದ್ಯಂತ ಸ್ವಚ್ಛ ಭಾರತ ಅಭಿಯಾನದ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರದ ಸ್ವಚ್ಛತಾ ಸಮೀಕ್ಷೆ ಕುರಿತ ಪರಿಶೀಲನಾ ತಂಡ ಬಂದಿದ್ದರಿಂದ ನಗರಸಭೆಯೂ ಸ್ವಚ್ಛತೆ ಬಗ್ಗೆ ಹತ್ತಾರು ಕಡೆ ಬರಹ ಬರೆಯಿಸಿದೆ. ಆದರೆ, ನಗರದ ಹಲವಾರು ಕಡೆಗಳಲ್ಲಿ ಗೋಡೆಗಳು ಸಾರ್ವಜನಿಕ ಶೌಚಾಲಯ ಗಳಾಗಿರುವುದು ವಿಪರ್ಯಾಸ.

ನಿತ್ಯ ಸಾವಿರಾರು ಜನರು ವಿವಿಧ ಕೆಲಸಕ್ಕಾಗಿ ಮಂಡ್ಯಕ್ಕೆ ಬರುತ್ತಾರೆ. ನಗರದಲ್ಲಿಯೂ ಒಂದೂವರೆ ಲಕ್ಷದಷ್ಟು ಜನಸಂಖ್ಯೆ ಇದೆ. ಆದರೆ, ಜನರಿಗೆ ತಕ್ಕಂತೆ ಮೂತ್ರಾಲಯಗಳಿಲ್ಲ. ಹಾಗಾಗಿ ಜನರು ಅನಿವಾರ್ಯವಾಗಿ ಗೋಡೆ ಗಳನ್ನೇ ಮೂತ್ರಾಲಯಗಳನ್ನಾಗಿಸಿ ಕೊಂಡಿದ್ದಾರೆ.

ಮಂಡ್ಯದಲ್ಲಿ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜನನಿಬಿಡ, ಪ್ರದೇಶ ಗಳಲ್ಲಿ, ಮಾರುಕಟ್ಟೆ ಹಾಗೂ ಕಚೇರಿಗಳು ಇರುವ ಸ್ಥಳಗಳಲ್ಲಿ ಶೌಚಾಲಯಗಳಿಲ್ಲ. ಕೆಲವೆಡೆ ಇದ್ದರೂ ಶುಲ್ಕ ವಿಧಿಸು ವುದರಿಂದ ಜನರೂ ಅತ್ತ ಹೋಗುವುದಿಲ್ಲ.

ಅಶೋಕನಗರದ ಪಿಡಬ್ಲ್ಯುಡಿ ಕ್ವಾಟ್ರರ್ಸ್ ಗೋಡೆ, ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್‌ ಭವನದ ಗೋಡೆ, ಸರ್ಕಾರಿ ಮಹಾವಿದ್ಯಾಲಯದ ಗೋಡೆ ಹಾಗೂ ವಕೀಲರ ಸಂಘದ ಪಕ್ಕದ ಗೋಡೆ ಸೇರಿದಂತೆ ಹಲವು ಬಯಲು ಮೂತ್ರಾಲಯಗಳಾಗಿ ಪರಿವರ್ತನೆಗೊಂಡಿವೆ. ಪಾದಚಾರಿಗಳು, ಅಕ್ಕ–ಪಕ್ಕ ವಾಸಿಸುವವರಿಗೆ ಗಬ್ಬು ವಾಸನೆ ಕುಡಿಯುವಂತೆ ಆಗಿದೆ. ಮೂಗು ಮುಚ್ಚಿಕೊಂಡು ತಿರುಗಾಡುವಂತೆ ಆಗಿದೆ.

ಮುಜುಗರದ ಸಂಗತಿ: ಹಗಲು ಹೊತ್ತಿನಲ್ಲಿಯೇ ಮೇಲ್ಕಂಡ ಪ್ರದೇಶ ಗಳಲ್ಲಿ ಇಂಥ ಸ್ಥಿತಿ ಇದ್ದು, ಮೂತ್ರ ವಿಸರ್ಜನೆ ಮಾಡುವವರಿಗೂ, ಅಲ್ಲಿ ಸಂಚರಿಸು ವವರಿಗೂ ಮುಜುಗರದ ಸಂಗತಿ ಯಾಗಿದೆ.

ಬಯಲು ಶೌಚಾಲಯವಾಗಿರುವ ಕೆಲವು ರಸ್ತೆಗಳಲ್ಲಿ ಮುಜುಗರದಿಂದಾಗಿ ಜನರು ತಿರುಗಾಡುವುದನ್ನೇ ಕಡಿಮೆ ಮಾಡಿದ್ದಾರೆ. ಅನಿವಾರ್ಯವಾಗಿ ಕೆಲವರು ತಿರುಗಾಡುತ್ತಾರೆ ಆದರೂ, ಅವರೆಲ್ಲ ತಲೆ ತಗ್ಗಿಸಿಕೊಂಡು ಹೋಗುತ್ತಾರೆ.

ಸ್ವಚ್ಛತೆ ಸರ್ವೆ ಕಾರ್ಯಕ್ಕೆ ಕೇಂದ್ರದ ತಂಡ ಬರುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಕಡೆಗಳಲ್ಲಿ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ನಗರಸಭೆಯು ಹಲವಾರು ಕಡೆಗಳಲ್ಲಿ ಫಲಕ ಬರೆಸಿದೆ. ಆದರೆ, ಇಲ್ಲಾಗುತ್ತಿರುವ ಅನೈರ್ಮಲ್ಯ ಕಾಣುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT