ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನ ಗ್ರಾಮ!

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಅಂಧರನ್ನು ನೋಡಿ ಮರುಗುವವರು ಹಲವರು. ಆದರೆ ತಮ್ಮ ಕಣ್ಣನ್ನು ದಾನ ಮಾಡುವ ಸಾಹಸ ತೋರುವವರು ಮಾತ್ರ ಕೆಲವರು. ಒಬ್ಬ ವ್ಯಕ್ತಿಯ ಕಣ್ಣು ಇಬ್ಬರು ಅಂಧರ ಬಾಳನ್ನು ಬೆಳಗಬಹುದು ಎಂದು ತಿಳಿದಿದ್ದರೂ, ಯಾವ್ಯಾವುದೋ ಕಾರಣಗಳಿಗೆ ತಮ್ಮ ಕಣ್ಣನ್ನು ಮಾತ್ರ ದಾನ ಮಾಡಲು ಮುಂದೆ ಬರುವುದಿಲ್ಲ. ನೇತ್ರದಾನ ಶಿಬಿರ ಮಾಡಿದರೂ ಅಲ್ಲಿ ಹೆಸರು ನೋಂದಾಯಿಸಿಕೊಳ್ಳುವವರೂ ಬಹಳ ಕಮ್ಮಿಯೇ.

ಇದಕ್ಕೆ ವ್ಯತಿರಿಕ್ತ ಎನ್ನುವಂತಿದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮುಂಡಿಗೇಸರ ಗ್ರಾಮ. ಏಕೆಂದರೆ ಈ ಗ್ರಾಮದ ಎಲ್ಲಾ ಮಂದಿಯೂ ನೇತ್ರದಾನ ಮಾಡುವ ಪಣತೊಟ್ಟಿದ್ದಾರೆ. ಸರಿಸುಮಾರು 250–300 ಕುಟುಂಬಗಳು ವಾಸವಾಗಿರುವ ಈ ಗ್ರಾಮದಲ್ಲಿ ಎಲ್ಲರೂ ನೇತ್ರದಾನಕ್ಕೆ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.

ಶಿರಸಿ ರೋಟರಿ ಕ್ಲಬ್ ಮತ್ತು ಹುಬ್ಬಳ್ಳಿಯ ಐ ಬ್ಯಾಂಕ್ ಇವರ ಸಹಯೋಗದಲ್ಲಿ ನಡೆದ ನೇತ್ರದಾನ ಶಿಬಿರದಲ್ಲಿ ಇಂಥ ಸಾಮಾಜಿಕ ಕಳಕಳಿಯ ಕೆಲಸವನ್ನು ಗ್ರಾಮಸ್ಥರು ಮಾಡಿದ್ದಾರೆ.

ಅಂದಹಾಗೆ, ಈ ಕಾರ್ಯಕ್ಕೆ ಮುನ್ನುಡಿ ಬರೆದವರು ಇದೇ ಗ್ರಾಮದ ನಿವಾಸಿ ಸರಸ್ವತಿ ಮಧುಕೇಶ್ವರ ಹೆಗಡೆ.  ಇವರು ನೇತ್ರದಾನದ ಮಹತ್ವದ ಬಗ್ಗೆ ಗ್ರಾಮವಾಸಿಗಳಿಗೆ ತಿಳಿಹೇಳುವ ಮೂಲಕ ಗ್ರಾಮಸ್ಥರಲ್ಲಿ ದಾನಕ್ಕೆ ಸ್ಫೂರ್ತಿ ತುಂಬಿದ್ದಾರೆ. ಇಲ್ಲಿರುವ ಶಾಲೆಯ ಶತಮಾನೋತ್ಸವದಂದು ಎಲ್ಲರೂ ದಾನಕ್ಕೆ ಮುಂದೆ ಬಂದಿದ್ದಾರೆ.

‘ನೇತ್ರದಾನದ ಕುರಿತು ಹಲವಾರು ಅಂತೆಕಂತೆಗಳು, ಸುಳ್ಳುಕತೆಗಳು ಜನರಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಆದರೆ ಅದರ ಮಹತ್ವ ಸಾರುವ ಕೆಲಸ ಆಗಬೇಕಿದೆ. ಗ್ರಾಮದ ಒಬ್ಬರೇ ಒಬ್ಬರು ಮುಂದೆ ಬಂದರೂ ಇಡೀ ಗ್ರಾಮಸ್ಥರ ಮನಸ್ಸನ್ನು ಹೇಗೆ ಓಲೈಸಬಹುದು ಎನ್ನುವುದಕ್ಕೆ ಸರಸ್ವತಿ ಅವರೇ ಸಾಕ್ಷಿ’ ಎನ್ನುತ್ತಾರೆ ನೇತ್ರದಾನ ಸಮಿತಿಯ ಸಂಯೋಜಕರಾದ ಸಂಜಯ್ ಹೆಗಡೆ.
ಸಂಪರ್ಕಕ್ಕೆ: 9242127798. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT