ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಬಾಲಕರ ತಂಡಗಳಿಗೆ ಜಯ

ಖೇಲೋ ಇಂಡಿಯಾ; ವಿವಿಧ ವಯೋಮಿತಿಯ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾ ಸ್ಪರ್ಧೆ
Last Updated 24 ಜನವರಿ 2017, 7:14 IST
ಅಕ್ಷರ ಗಾತ್ರ

ನಿಪ್ಪಾಣಿ:  ಖೇಲೋ ಇಂಡಿಯಾದಡಿ ಸ್ಥಳೀಯ ಶಿವಶಂಕರ್ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾ ಸ್ಪರ್ಧೆಯಲ್ಲಿ 14 ಮತ್ತು 17 ವರ್ಷದೊಳಗಿನ ಬಾಲಕರ ಬೆಳಗಾವಿ ಜಿಲ್ಲೆ ತಂಡಗಳು ಗೆಲುವು ಸಾಧಿಸಿವೆ.

14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಬೆಳಗಾವಿ ತಂಡವು ಚಾಮರಾಜನಗರ ತಂಡಕ್ಕೆ 25–3 ಮತ್ತು 25–15 ಅಂಕಗಳಿಂದ ಹಾಗೂ 17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಬೆಳಗಾವಿ ತಂಡವು ಕೊಡಗು ತಂಡಕ್ಕೆ 25–14, 25–18 ಅಂಕಗಳಿಂದ ಪರಾಭವಗೊಳಿಸಿತು.

ಸೋಮವಾರದವರೆಗೆ ನಡೆದ ವಾಲಿಬಾಲ್ ಪಂದ್ಯದ ಫಲಿತಾಂಶ ಇಂತಿದೆ.

17 ವರ್ಷದೊಳಗಿನ ಬಾಲಕರ ವಿಭಾಗ:
ಹಾವೇರಿ ತಂಡವು ದಕ್ಷಿಣ ಕನ್ನಡ ತಂಡಕ್ಕೆ 25–17, 25–10 ಅಂಕಗಳಿಂದ, ಧಾರವಾಡ ತಂಡವು ಚಾಮರಾಜನಗರ ತಂಡಕ್ಕೆ 25–19, 25–20 ಅಂಕಗಳಿಂದ ಕೋಲಾರ ತಂಡವು ಕಾರವಾರ ತಂಡಕ್ಕೆ 25–18, 25–15 ಅಂಕಗಳಿಂದ ಪರಾಭವಗೊಳಿಸಿದರು.

17 ವರ್ಷದೊಳಗಿನ ಬಾಲಕಿಯರ ವಿಭಾಗ: ದಕ್ಷಿಣ ಕನ್ನಡ ತಂಡವು ಮೈಸೂರ ತಂಡಕ್ಕೆ 25–12, 25–15 ಅಂಕಗಳಿಂದ, ವಿದ್ಯಾನಗರ ತಂಡವು ಶಿವಮೊಗ್ಗ ತಂಡಕ್ಕೆ 25–12, 19–25, 15–9 ಅಂಕಗಳಿಂದ, ಉಡಪಿ ತಂಡವು ಕೊಪ್ಪಳ ತಂಡಕ್ಕೆ 25–9, 25–12 ಅಂಕಗಳಿಂದ ಮಣಿಯಿತು.
ಉತ್ತರ ಕನ್ನಡ ತಂಡವು ಕೋಲಾರ ತಂಡಕ್ಕೆ 25–22, 25–23 ಅಂಕಗಳಿಂದ ಮಣಿಸಿದವು
.
14 ವರ್ಷದೊಳಗಿನ ಬಾಲಕರ ವಿಭಾಗ:
ಬೀದರ್ ತಂಡವು ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 25–17, 25–10, ತುಮಕೂರ ತಂಡವು ಚಿಕ್ಕಮಂಗಳೂರು ವಿರುದ್ಧ 25–18, 23–25, 15–7, ಮಂಡ್ಯ ತಂಡವು ರಾಮನಗರ ತಂಡದ ವಿರುದ್ಧ 25–16, 25–15 ಅಂಕಗಳಿಂದ ಗೆಲುವು ಸಾಧಿಸಿದವು.
17 ವರ್ಷದೊಳಗಿನ ಬಾಲಕಿಯರ ವಿಭಾಗ:  ಉಡುಪಿ ತಂಡ ಗದಗ ವಿರುದ್ಧ 25–8, 25–3, ದಕ್ಷಿಣ ಕನ್ನಡ ತಂಡ ಮಂಡ್ಯ ವಿರುದ್ಧ 25–17, 25–21, ಹಾಸನ ತಂಡ ದಾವಣಗೆರೆ ವಿರುದ್ಧ 25–6, 25–3, ಬೆಂಗಳೂರು ಗ್ರಾಮಾಂತರ ತಂಡ ತುಮಕೂರ ವಿರುದ್ಧ 25–13, 24–26, 15–13 ಅಂಕಗಳಿಂದ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT