ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರತಜ್ಞರ ಸಮಾವೇಶ ಇಂದಿನಿಂದ

ವಿವಿಧ ವಿಷಯ ಕುರಿತು ಪ್ರಬಂಧ ಮಂಡನೆ, ಉಪನ್ಯಾಸ
Last Updated 28 ಜನವರಿ 2017, 8:30 IST
ಅಕ್ಷರ ಗಾತ್ರ

ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಸ್ಟಾರ್ ಫಂಕ್ಷನ್ ಹಾಲ್‌ನಲ್ಲಿ ಇದೇ 28ರಿಂದ ಎರಡು ದಿನ ನೇತ್ರ ತಜ್ಞರ ಸಮಾವೇಶ, ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘಟಕ ಡಾ.ಪ್ರಭುಗೌಡ ಬಿ. ಲಿಂಗದಳ್ಳಿ ತಿಳಿಸಿದರು.

ನೇತ್ರ ತಜ್ಞರ ಸಂಘ, ಅನುಗ್ರಹ ಕಣ್ಣಿನ ಆಸ್ಪತ್ರೆ, ರಾಜ್ಯ ನೇತ್ರ ತಜ್ಞರ ಸಂಘದ ವತಿಯಿಂದ ಸಮಾವೇಶವನ್ನು ಸಂಘಟಿಸಲಾಗುತ್ತಿದೆ. ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಂದ ನೇತ್ರ ತಜ್ಞರು ಆಗಮಿಸಿ ಉಪನ್ಯಾಸ ಮಂಡಿಸಲಿದ್ದಾರೆ. ಈಗಾ ಗಲೇ 225 ನೇತ್ರ ತಜ್ಞರು ಸಮಾವೇಶ ದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾ ಯಿಸಿದ್ದಾರೆ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೇತ್ರತಜ್ಞ ಡಾ.ಎಂ.ಎಂ.ಜೋಶಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಪೊರೆಯ ಶಸ್ತ್ರಚಿಕಿತ್ಸೆಯ ವಿವಿಧ ಆಧು ನಿಕ ವಿಧಾನಗಳು, ನೇತ್ರ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಹೊಸ ಉಪಕರಣಗಳು ಎಂಬಿತ್ಯಾದಿ ವಿಷಯಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಗುತ್ತದೆ.

ನೇತ್ರತಜ್ಞರಾದ ಡಾ.ಜೀವನ ಲಡಿ, ಡಾ.ಸೌರಭ್ ಚೌಧರಿ, ಡಾ.ಕೆ.ವಿ. ಸತ್ಯಮೂರ್ತಿ, ಡಾ.ಕೃಷ್ಣಪ್ರಸಾದ್, ಡಾ.ಎಚ್.ಎಂ.ರವೀಂದ್ರನಾಥ, ಡಾ.ದೀಪಕ ಮೆಗೂರ ಸೇರಿದಂತೆ ಹಲ ತಜ್ಞರು ಪ್ರಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ದತ್ತಾತ್ರೇಯ ಹೊಸಮಠ, ಆನಂದ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT